ETV Bharat / bharat

2014ರ ಮುಂಚೆ 2 ಹೊತ್ತಿನ ಊಟವೇ ಬಡವರ ಪಾಲಿಗೆ ದೊಡ್ಡ ಹೋರಾಟವಾಗಿತ್ತು: ಗೃಹ ಸಚಿವ ಅಮಿತ್ ಶಾ

2014ರಿಂದ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಏಳು ದಶಕಗಳಿಂದ ವಂಚಿತರಾಗಿರುವ ದೇಶದ ಕೋಟ್ಯಂತರ ಬಡವರು, ರೈತರು, ದೀನದಲಿತರು ಮತ್ತು ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವ ಸಾಧನವಾಗಿದೆ ಎಂದು ಅಮಿತ್​ ಶಾ ಹೇಳಿದ್ದಾರೆ..

2014ರ ಮುಂಚೆ ಎರಡು ಹೊತ್ತಿನ ಊಟವೇ ಬಡವರ ಪಾಲಿಗೆ ದೊಡ್ಡ ಹೋರಾಟವಾಗಿತ್ತು: ಗೃಹ ಸಚಿವ ಅಮಿತ್ ಶಾ

author img

By

Published : Apr 6, 2022, 12:57 PM IST

ನವದೆಹಲಿ : ಬಿಜೆಪಿ ಪ್ರಯಾಣ ದೇಶ ಸೇವೆಯದ್ದಾಗಿದೆ. ಏಳು ದಶಕಗಳಿಂದ ವಂಚಿತರಾಗಿದ್ದ ಬಡವರು, ರೈತರು, ದೀನದಲಿತರು ಮತ್ತು ಮಹಿಳೆಯರ ಆಶೋತ್ತರಗಳನ್ನು ಈಡೇರಿಸಲು ಪಕ್ಷ ಶ್ರಮಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬಿಜೆಪಿಯ 42ನೇ ಸಂಸ್ಥಾಪನಾ ದಿನದ ನಿಮಿತ್ತ ಶಾ ಬುಧವಾರ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಬಿಜೆಪಿಯ 42ನೇ ಸ್ಥಾಪನಾ ದಿನದಂದು ಪಕ್ಷವನ್ನು ಆಲದ ಮರವನ್ನಾಗಿ ಬೆಳೆಸಿದ ಎಲ್ಲ ಮಹಾನ್ ನಾಯಕರಿಗೆ ವಂದನೆಗಳು. ನರೇಂದ್ರ ಮೋದಿ ಮತ್ತು ಜೆ ಪಿ ನಡ್ಡಾ ನೇತೃತ್ವದಲ್ಲಿ ಬಿಜೆಪಿಯು ರಾಷ್ಟ್ರದ ಪ್ರಗತಿ ಮತ್ತು ಜನರ ಕಲ್ಯಾಣದೊಂದಿಗೆ ಮುನ್ನಡೆಯುತ್ತಿದೆ. ಪಕ್ಷದ ಎಲ್ಲ ಕಾರ್ಯಕರ್ತರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು ಎಂದು ಶಾ ಟ್ವೀಟ್​ ಮಾಡಿದ್ದಾರೆ.

  • भाजपा के 42वें स्थापना दिवस के अवसर पर प्रधानमंत्री श्री @NarendraModi जी आज सुबह 10 बजे कार्यकर्ताओं को संबोधित करेंगे। आप भी इस संबोधन को अवश्य सुनें। #SthapnaDiwas pic.twitter.com/IRoc3JaFCm

    — Amit Shah (@AmitShah) April 6, 2022 " class="align-text-top noRightClick twitterSection" data=" ">

ಪಕ್ಷದ ಈ 42 ವರ್ಷಗಳ ಪಯಣವು ದೇಶ ಸೇವೆ, ರಾಷ್ಟ್ರೋತ್ಥಾನ ಮತ್ತು ರಾಷ್ಟ್ರೀಯ ಪುನರ್ ನಿರ್ಮಾಣದ ಪಯಣವಾಗಿದೆ. 2014ರಿಂದ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಏಳು ದಶಕಗಳಿಂದ ವಂಚಿತರಾಗಿರುವ ದೇಶದ ಕೋಟ್ಯಂತರ ಬಡವರು, ರೈತರು, ದೀನದಲಿತರು ಮತ್ತು ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವ ಸಾಧನವಾಗಿದೆ ಎಂದು ಅವರು ಹೇಳಿದ್ದಾರೆ.

ಬಡವರಿಗೆ ಮನೆ, ವಿದ್ಯುತ್, ಗ್ಯಾಸ್, ಶೌಚಾಲಯ, ಬ್ಯಾಂಕ್ ಖಾತೆ ಮತ್ತು ಆರೋಗ್ಯ ವಿಮೆ ಒದಗಿಸಲು ಬಿಜೆಪಿ ಸರ್ಕಾರ ಶ್ರಮಿಸಿದೆ. 2014ರ ಮೊದಲು ಎರಡು ಹೊತ್ತಿನ ಊಟವೇ ಬಡವರ ಪಾಲಿಗೆ ದೊಡ್ಡ ಹೋರಾಟವಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಬಿಜೆಪಿ ಸರ್ಕಾರವು ಮನೆ, ವಿದ್ಯುತ್ ಸಂಪರ್ಕ, ಅಡುಗೆ ಅನಿಲ, ಶೌಚಾಲಯ, ಬ್ಯಾಂಕ್ ಖಾತೆ ಮತ್ತು ಆರೋಗ್ಯ ವಿಮೆ ಒದಗಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಉಚಿತ ಪಡಿತರದೊಂದಿಗೆ ದೇಶದ ಬಡವರು ಸುರಕ್ಷಿತ ಮತ್ತು ಗೌರವಯುತ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಮಾಜ ವಿಭಜನೆ ಮಾಡುತ್ತಿರುವುದು ಕಾಂಗ್ರೆಸ್ : ಕೈ ನಾಯಕರಿಗೆ ಸಿಟಿ ರವಿ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.