ETV Bharat / bharat

ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆ: ತೃತೀಯ ಲಿಂಗಿಗಳನ್ನು ಅಖಾಡಕ್ಕಿಳಿಸಿದ ಬಿಜೆಪಿ - ತೃತೀಯ ಲಿಂಗಿಗಳಿಗೆ ಬಿಜೆಪಿ ಟಿಕೆಟ್

ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಾರ್ಟಿ ವಿವಿಧ ವಾರ್ಡ್​ಗಳಿಂದ ತೃತೀಯ ಲಿಂಗಿಗಳನ್ನು ಕಣಕ್ಕಿಳಿಸಿದೆ.

BJP field transgender women candidates
BJP field transgender women candidates
author img

By

Published : Feb 3, 2022, 9:05 PM IST

ಚೆನ್ನೈ(ತಮಿಳುನಾಡು): ತಮಿಳುನಾಡಿನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿರುವ ಭಾರತೀಯ ಜನತಾ ಪಾರ್ಟಿ, ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಅನೇಕ ವಾರ್ಡ್​​ಗಳಲ್ಲಿ ತೃತೀಯ ಲಿಂಗಿಗಳಿಗೆ ಟಿಕೆಟ್ ನೀಡಿದೆ.

ತಮಿಳುನಾಡಿನ 12,838 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ 1,374 ನಗರ ಪಾಲಿಕೆ, 3,843 ಪುರಸಭೆ ವಾರ್ಡ್​, 7,621 ಪಟ್ಟಣ ಪಂಚಾಯತ್​ ವಾರ್ಡ್​ಗಳಿಗೆ ಚುನಾವಣೆ ನಡೆಯಲಿದ್ದು, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ.

  • I will be an example for my community and will get a good name. If I get elected, I will fulfil the demands of people like drinking water, drainage problems: Rajamma Transgender candidate from BJP pic.twitter.com/9ZdiUfbwl0

    — ANI (@ANI) February 3, 2022 " class="align-text-top noRightClick twitterSection" data=" ">

ವಿವಿಧ ವಾರ್ಡ್​ಗಳಿಂದ ಟಿಕೆಟ್ ಪಡೆದುಕೊಂಡಿರುವ ತೃತೀಯ ಲಿಂಗಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ಸಹ ಆರಂಭಿಸಿದ್ದಾರೆ. ತಮ್ಮ ಸ್ಪರ್ಧೆಗೆ ಸಂಬಂಧಿಸಿದಂತೆ ಮಾತನಾಡಿರುವ ತೃತೀಯ ಲಿಂಗಿ ಅಭ್ಯರ್ಥಿ ಜಯದೇವಿ, ಚುನಾವಣೆಯಲ್ಲಿ ನಾನು ಗೆದ್ದರೆ ವಾರ್ಡ್​​ನಲ್ಲಿ ಅನೇಕ ರೀತಿಯ ಅಭಿವೃದ್ಧಿ ಕೆಲಸ ಮಾಡುವುದರ ಜೊತೆಗೆ ಎಲ್ಲರಿಗೂ ಮಾದರಿಯಾಗಲಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿರಿ: ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ.. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿ ಹೋರಾಟ ಎಂದ ಅಣ್ಣಾಮಲೈ

ಮತ್ತೋರ್ವ ತೃತೀಯ ಲಿಂಗಿ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ನನ್ನ ಸಮುದಾಯಕ್ಕೆ ಮಾದರಿಯಾಗಿದ್ದೇನೆ. ಚುನಾವಣೆಯಲ್ಲಿ ಗೆಲುವು ದಾಖಲು ಮಾಡಿದರೆ, ಕುಡಿಯುವ ನೀರು, ಚರಂಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಿದ್ದು, ಜನರ ಬೇಡಿಕೆಗಳನ್ನ ಈಡೇರಿಸಲಿದ್ದೇನೆ ಎಂದು ರಾಜಮ್ಮ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.