ETV Bharat / bharat

ಏನಿದು ಅಚ್ಚರಿ.. ಎರಡು ತಲೆ, ಐದು ಕಾಲುಗಳಿರುವ ಮೇಕೆ ಮರಿ ಜನನ! - ಐದು ಕಾಲುಗಳಿರುವ ಮೇಕೆ ಮರಿ ಜನನ

ಮೇಕೆ ಆರೋಗ್ಯವಾಗಿದೆ ಎಂದು ರೈತ ಗುಗುಲೋಟ್ ಬುಳ್ಳಿ ತಿಳಿಸಿದ್ದಾರೆ.

Birth of goat with two heads and five legs
ಎರಡು ತಲೆ, ಐದು ಕಾಲುಗಳಿರುವ ಮೇಕೆ ಜನನ
author img

By

Published : Aug 12, 2023, 9:30 PM IST

ಸೂರ್ಯಪೇಟ (ತೆಲಂಗಾಣ) : ಪಕೃತಿ ಹಲವು ಅಚ್ಚರಿಗಳ ಮೂಟೆ ಎನ್ನುವುದು ಸುಳ್ಳಲ್ಲ. ಒಂದಲ್ಲಾ ಒಂದು ವಿಚಿತ್ರ ಸೃಷ್ಟಿಯ ಮೂಲಕ ಜೀವ ಜಗತ್ತನ್ನೇ ಅಚ್ಚರಿಗೊಳಿಸುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಪ್ರಾಣಿಗಳು ಒಂದು ತಲೆ ನಾಲ್ಕು ಕಾಲುಗಳನ್ನು ಹೊಂದಿರುವುದನ್ನು ನಾವು ನೋಡುತ್ತೇವೆ. ಆದರೆ ಇಲ್ಲೊಂದು ಅಚ್ಚರಿಯೆಂದರೆ ಮೇಕೆಯೊಂದು ಎರಡು ತಲೆ ಹಾಗೂ ಐದು ಕಾಲುಗಳಿರುವ ಮರಿಗೆ ಜನ್ಮ ನೀಡಿದೆ. ಸೂರ್ಯಪೇಟ ಜಿಲ್ಲೆಯ ಎರ್ರಕುಂಟಾ ತಾಂಡಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಚಿಂತಲಪಾಲೆ ಮಂಡಲದ ಎರ್ರಕುಂಟಾ ತಾಂಡಾ ಗ್ರಾಮದ ಗುಗುಲೋಟ್​ ಬುಳ್ಳಿ ಸಕ್ರು ಎನ್ನುವವರು ಮೇಕೆ ಸಾಕಣೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹಿಂಡಿನಲ್ಲಿದ್ದ ಮೇಕೆ ಶುಕ್ರವಾರ ಎರಡು ಮರಿಗಳಿಗೆ ಜನ್ಮ ನೀಡಿದೆ. ಅವುಗಳಲ್ಲಿ ಒಂದು ಸಾಮಾನ್ಯ ರೂಪದಲ್ಲೇ ಜನಿಸಿದರೆ, ಇನ್ನೊಂದು ಮರಿ ಮಾತ್ರ ಎರಡು ತಲೆ, ಐದು ಕಾಲುಗಳೊಂದಿಗೆ ಜನಿಸಿದೆ. ಈ ಅಪರೂಪದ ಗುಣಲಕ್ಷಣಗಳೊಂದೊಗೆ ಜನಿಸಿದ ಮೇಕೆ ಮರಿಯನ್ನು ನೋಡಲು ಸ್ಥಳೀಯರು ಉತ್ಸುಕತೆಯಿಂದ ಆಗಮಿಸುತ್ತಿದ್ದಾರೆ. ಈ ರೀತಿ ವಿಚಿತ್ರವಾಗಿ ಹುಟ್ಟಿದ ಯಾವುದೇ ಪ್ರಾಣಿಯ ಮರಿಗಳು ಹೆಚ್ಚು ಕಾಲ ಬುದಕುವುದಿಲ್ಲ. ಆದರೆ ಈ ಮೇಕೆ ಮರಿ ಸದ್ಯ ಆರೋಗ್ಯವಾಗಿದೆ. ನಮ್ಮ ಹಟ್ಟಿಯಲ್ಲಿ ಈ ರೀತಿಯ ಮರಿ ಹಿಂದೆಂದೂ ಹುಟ್ಟಿರಲಿಲ್ಲ. ಇದೇ ಮೊದಲು ಎನ್ನುತ್ತಾರೆ ಗುಗುಲೋಟ್​ ಬುಳ್ಳಿ.

ಇದನ್ನೂ ಓದಿ: ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದ ವಿಚಿತ್ರ ಮಗು: ಒಂದೇ ದೇಹದಲ್ಲಿ ಎರಡು ಹೃದಯ, ನಾಲ್ಕು ಕೈ ಕಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.