ಸರನ್, ಬಿಹಾರ್: ಬಿಹಾರದಲ್ಲಿ ಮದ್ಯ ನಿಷೇಧದ ಹೊರತಾಗಿಯೂ, ಸರನ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ನಿರಂತರ ಸಾವುಗಳು ಸಂಭವಿಸುತ್ತಿವೆ. ಸ್ಥಳೀಯರ ಪ್ರಕಾರ ನಕಲಿ ಮದ್ಯ ಸೇವಿಸಿ 25 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. ಸಿಕ್ಕಿರುವ ಸುದ್ದಿ ಪ್ರಕಾರ ಇದುವರೆಗೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. 4 ಮಂದಿ ಈ ಹಿಂದೆಯೇ ಸಾವನ್ನಪ್ಪಿದ್ದರು. ತನಿಖಾ ವರದಿಯ ಪ್ರಕಾರ ಅಸ್ವಸ್ಥರಲ್ಲಿ ಮೆಥನಾಲ್ ವಿಷ ಇರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಈ ವಿಚಾರದಲ್ಲಿ ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ.
ಜಿಲ್ಲಾಸ್ಪತ್ರೆಗೆ ದಾಖಲು : ಅಸ್ವಸ್ಥರ ಗಂಭೀರ ಸ್ಥಿತಿಯನ್ನು ಕಂಡ ವೈದ್ಯರು ಛಾಪ್ರಾ ಮತ್ತು ಪಾಟ್ನಾ ಜಿಲ್ಲಾಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸೂಚಿಸಲಾಗಿದೆ. ಈ ವೇಳೆ ಛಾಪ್ರಾದಲ್ಲಿಯೇ 4 ಮಂದಿ ಸಾವನ್ನಪ್ಪಿದ್ದಾರೆ. ನಕಲಿ ಮದ್ಯ ಸೇವಿಸಿದ ಬಳಿಕ ಅವರ ಆರೋಗ್ಯ ಹದಗೆಟ್ಟಿದೆ. ಆಗ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಕಡಿಮೆ ದರದಲ್ಲಿ ಮದ್ಯ ಸಿಗುತ್ತದೆ ಎಂಬ ಕಾರಣಕ್ಕೆ ಜನ ಹೆಚ್ಚು ಕುಡಿಯುತ್ತಿದ್ದರು. ಇದರಿಂದ ಜನರು ಅಸ್ವಸ್ಥರಾಗಿದ್ದರು. ವಾಂತಿ ಮತ್ತು ತಲೆತಿರುಗುವಿಕೆ ಹೆಚ್ಚಾದ ಹಿನ್ನೆಲೆ ಕೆಲವರನ್ನು ಪಾಟ್ನಾದ ಪಿಎಂಸಿಎಚ್‌ಗೆ ಕಳುಹಿಸಲಾಯಿತು.
ಜಿಲ್ಲಾಧಿಕಾರಿ ಹೇಳಿಕೆ: ಫುಲ್ವಾರಿಯಾ ಗ್ರಾಮ ಕೆಲವರು ವಿಷಕಾರಿ ಪದಾರ್ಥ ಸೇವಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಶರಣ್ ತಿಳಿಸಿದ್ದಾರೆ. ಇದರಿಂದ ಅನೇಕರು ಅಸ್ವಸ್ಥರಾಗಿದ್ದರು. ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ನಕಲಿ ಮದ್ಯ ಸೇವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಫುಲ್ವಾರಿಯಾ ಗ್ರಾಮಕ್ಕೆ ವೈದ್ಯಕೀಯ ತಂಡವನ್ನು ಕಳುಹಿಸಿ ತಪಾಸಣೆ ಮಾಡಿಸಲಾಗಿದೆ. PMCH ನಲ್ಲಿ ಚಿಕಿತ್ಸೆ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಇದುವರೆಗೆ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರನ್ ಜಿಲ್ಲಾಧಿಕಾರಿ ರಾಜೇಶ್ ಮೀನಾ ಹೇಳಿದ್ದಾರೆ.
ಓದಿ: ಮದ್ಯ ವ್ಯಸನಿಗಳಿಂದ ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹಲ್ಲೆ; ಕುಡುಕನ ಕೂಡಿ ಹಾಕಿದ ಮಕ್ಕಳು!