ETV Bharat / bharat

ಮತಾಂತರಿಸಿ ದುಬೈನಲ್ಲಿ ಮದುವೆಯಾಗಿ ಯುವತಿಗೆ ವಂಚನೆ; ನ್ಯಾಯಕ್ಕಾಗಿ ಪ್ರತಿಭಟನೆ - ದಿ ಕೇರಳ ಸ್ಟೋರಿ

ಉತ್ತರ ಪ್ರದೇಶದ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ದುಬೈನಲ್ಲಿ ಮದುವೆಯಾದ ಬಳಿಕ ವಂಚಿಸಿರುವ ಆರೋಪ ಪ್ರಕರಣ ಬಿಹಾರದಲ್ಲಿ ವರದಿಯಾಗಿದೆ.

bihar-boy-converted-up-girl-married-in-dubai-and-eloped-the-kerala-story
ಲವ್​ ಜಿಹಾದ್​ ಆರೋಪ : ಮತಾಂತರ ಮಾಡಿ ದುಬೈನಲ್ಲಿ ಮದುವೆಯಾದ ಬಳಿಕ ಯುವತಿಗೆ ಮೋಸ
author img

By

Published : May 11, 2023, 6:49 AM IST

ಮೋತಿಹಾರಿ (ಬಿಹಾರ): ಉತ್ತರ ಪ್ರದೇಶದ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಮತಾಂತರಗೊಳಿಸಿ ಮದುವೆಯಾದ ಬಳಿಕ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ ಸಂತ್ರಸ್ತೆ ಬಿಹಾರದ ಈಸ್ಟ್​ ಚಂಪಾರನ್​ ಜಿಲ್ಲೆಯ ಬೆಲ್ವಾಟಿಯಾ ಗ್ರಾಮದ ತಾಲೀಫ್​ ರೆಜಾ ಎಂಬಾತನ ಮನೆ ಮುಂದೆ ಇದೀಗ ನ್ಯಾಯಕ್ಕಾಗಿ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ನೊಂದ ಮಹಿಳೆ ಮಾತನಾಡಿ, "ನೋಯ್ಡಾದಲ್ಲಿ ಕೋಚಿಂಗ್​ ಸೆಂಟರ್​ನಲ್ಲಿ ಕಲಿಯುತ್ತಿರುವಾಗ ಪರಸ್ಪರ ಭೇಟಿಯಾಗಿತ್ತು. ಕ್ರಮೇಣ ಪರಿಚಯ ಪ್ರೀತಿಗೆ ತಿರುಗಿತ್ತು. 2018ರಲ್ಲಿ ತಾಲೀಫ್​​ ಕೆಲಸದ ನಿಮಿತ್ತ ದುಬೈಗೆ ತೆರಳಿದ್ದ. ಬಳಿಕ ನನ್ನನ್ನೂ ಬರುವಂತೆ ಕರೆದಿದ್ದ. ಆತನನ್ನು ನಂಬಿ ತೆರಳಿದ ಬಳಿಕ ಅಲ್ಲಿ ನಿನ್ನನ್ನು ಮದುವೆಯಾಗಬೇಕಾದರೆ ಇಸ್ಲಾಂಗೆ ಮತಾಂತರ ಆಗಬೇಕು. ಆಗ ಮಾತ್ರ ನನ್ನ ಮನೆಯವರು ನಿನ್ನನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದ. ಮದುವೆಯಾದ ಬಳಿಕ ಇಬ್ಬರೂ ದುಬೈನಲ್ಲಿ ಒಟ್ಟಿಗೆ ಜೀವನ ನಡೆಸುತ್ತಿದ್ದೆವು. ಒಂದು ದಿನ ಇದ್ದಕ್ಕಿದ್ದಂತೆ ಆರೋಪಿ ದುಬೈನಿಂದ​ ಪರಾರಿಯಾಗಿ ತನ್ನ ಹುಟ್ಟೂರು ಬಿಹಾರದ ಮೋತಿಹಾರಿಗೆ ವಾಪಸಾಗಿದ್ದಾನೆ" ಎಂದು ದೂರಿದ್ದಾರೆ.

5 ಲಕ್ಷ ನಗದು, ಚಿನ್ನಾಭರಣದೊಂದಿಗೆ ಪರಾರಿ: "ದುಬೈನಲ್ಲಿ ಮದುವೆಯಾದ ಮೇಲೆ ಇಬ್ಬರು ಒಟ್ಟಿಗೆ ಜೀವನ ನಡೆಸುತ್ತಿದ್ದೆವು. ನಾನು ಬ್ಯೂಟಿ ಪಾರ್ಲರ್​ ಒಂದರಲ್ಲಿ ಕೆಲಸಕ್ಕೆ ಸೇರಿದೆ. ಕೆಲವು ದಿನಗಳ ಬಳಿಕ ನಾನು ಚಿಕಿತ್ಸೆಗಾಗಿ ದುಬೈನಿಂದ ನೋಯ್ಡಾಕ್ಕೆ ಬಂದೆ. ಚಿಕಿತ್ಸೆಯ ಬಳಿಕ ಅಕ್ಟೋಬರ್​​ 2022ರಲ್ಲಿ ಮತ್ತೆ ದುಬೈ ತೆರಳಿದ್ದು, ತಾಲೀಫ್​ ಪರಾರಿಯಾಗಿರುವುದು ಗೊತ್ತಾಯಿತು. ಇಬ್ಬರೂ ವಾಸವಿದ್ದ ಬಾಡಿಗೆ ಮನೆ ಬೀಗ ಹಾಕಿದ್ದು, ಬೀಗ ಒಡೆದು ಮನೆಯೊಳಗೆ ಹೋದೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ 5 ಲಕ್ಷ ರೂಪಾಯಿ ಹಣ ಮತ್ತು ಚಿನ್ನಾಭರಣ ಕದ್ದು ಪರಾರಿಯಾಗಿರುವುದು ಬೆಳಕಿಗೆ ಬಂತು" ಎಂದು ಮಹಿಳೆ ಆರೋಪಿಸಿದರು.

"ಆತನ ಬಗ್ಗೆ ವಿಚಾರಿಸಿದಾಗ ದುಬೈನಿಂದ ಮರಳಿ ಬಿಹಾರಕ್ಕೆ ಬಂದಿರುವುದು ಗೊತ್ತಾಗಿದೆ. ಇದರಿಂದ ದುಬೈನಿಂದ ಮರಳಿ ಗಂಡನ ಮನೆಯನ್ನು ಪತ್ತೆ ಮಾಡಿದೆ. ಈ ಸಂದರ್ಭದಲ್ಲಿ ಬೇರೊಬ್ಬ ಯುವತಿಯೊಂದಿಗೆ ತಾಲೀಫ್​​ ಮದುವೆಯಾಗಿರುವುದು ಗೊತ್ತಾಯಿತು. ಮತ್ತೊಂದೆಡೆ, ತಾರೀಫ್​​ನ ಮನೆಯವರು ನನ್ನನ್ನು ಮನೆಗೆ ಸೇರಿಸಿಕೊಳ್ಳಲು ಒಪ್ಪಿಕೊಳ್ಳುತ್ತಿಲ್ಲ. ಅಲ್ಲದೇ, ಆರೋಪಿ ಈಗ ನನ್ನನ್ನು ತನ್ನ ಹೆಂಡತಿಯೇ ಅಲ್ಲ ಎಂದು ಹೇಳುತ್ತಿದ್ದಾನೆ" ಎಂದು ಸಂತ್ರಸ್ತೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ತನಗೆ ನ್ಯಾಯ ಕೊಡಿಸುವಂತೆ ಆರೋಪಿಯ ಮನೆ ಮುಂದೆ ಧರಣಿ ಕುಳಿತುಕೊಂಡಿರುವ ಸಂತ್ರಸ್ತೆಗೆ ಗ್ರಾಮಸ್ಥರು ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ರಾಜ್​, "ಈ ಪ್ರಕರಣದ ಸಂಬಂಧ ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಬಳಿಕ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ : ವಿವಾದಗಳನ್ನು ಎದುರಿಸಿ ಬಾಕ್ಸ್​​ ಆಫೀಸ್​​ನಲ್ಲಿ 'ದಿ ಕೇರಳ ಸ್ಟೋರಿ' ಸದ್ದು: ಕೆಲಕ್ಷನ್​ ಕೇಳಿದ್ರೆ ಹುಬ್ಬೇರಿಸ್ತೀರಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.