ETV Bharat / bharat

‘ನಾನು ವಿಶ್ವಾಸದ್ರೋಹಿ ಅಲ್ಲ’ ಕೈ ಮೇಲೆ ಸೊಸೈಡ್​ ನೋಟ್​ ಬರೆದುಕೊಂಡು ಮಹಿಳೆ ಆತ್ಮಹತ್ಯೆ! - ಸೊಸೈಡ್​ ನೋಟ್​ ಬರೆದಿಟ್ಟು ಮಹಿಳೆ ಸಾವು

ಮಧ್ಯಪ್ರದೇಶದ ಭೋಪಾಲ್​ನಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಎಡಗೈ ಮೇಲೆ ಸೊಸೈಡ್ ನೋಟ್​ ಬರೆದುಕೊಂಡಿದ್ದಾರೆ.

Woman wrote suicide note on her hand
Woman wrote suicide note on her hand
author img

By

Published : Jul 15, 2022, 3:44 PM IST

ಭೋಪಾಲ್​(ಮಧ್ಯಪ್ರದೇಶ): 'ನಾನು ವಿಶ್ವಾಸದ್ರೋಹಿ ಅಲ್ಲ' ಸ್ವ ಇಚ್ಛೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದೇನೆಂದು ಕೈ ಮೇಲೆ ಸೊಸೈಡ್​ ನೋಟ್​ ಬರೆದುಕೊಂಡ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್​​ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೋಪಾಲ್​​ನ ಚೋಳ ಮಂದರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಿವಾಹಿತ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಎಡಗೈ ಮೇಲೆ ಆತ್ಮಹತ್ಯೆ ಪತ್ರ ಪತ್ತೆಯಾಗಿದ್ದು, ಅದರಲ್ಲಿ ನಾನು ವಿಶ್ವಾಸದ್ರೋಹಿ ಅಲ್ಲ ಸ್ವಂತ ಇಚ್ಛೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ. ಇದರ ಮಧ್ಯೆ ಗಂಡನ ಪಾಸ್​ಪೋರ್ಟ್​ ಸೈಜ್​ ಫೋಟೋದಲ್ಲಿ ಸಹ ನಾನು ವಿಶ್ವಾಸದ್ರೋಹಿ ಅಲ್ಲ ಎಂದು ಬರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಸೊಸೈಡ್​ ನೋಟ್​ ಬರೆದುಕೊಂಡು ಮಹಿಳೆ ಆತ್ಮಹತ್ಯೆ!

ಪೊಲೀಸ್​​ ಅಧಿಕಾರಿ ಗಜೇಂದ್ರ ಸಿಂಗ್ ಪ್ರಕಾರ, ಗುಡಿಯಾ ಸಾಹು(35) 2019ರಲ್ಲಿ ಸುಭಾಷ್​ ಸಾಹು ಜೊತೆ ಮದುವೆ ಮಾಡಿಕೊಂಡಿದ್ದರು. ಶುಭಾಷ್ ವೃತ್ತಿಯಲ್ಲಿ ಸಂಗೀತ ಶಿಕ್ಷಕರಾಗಿದ್ದು, ಶಾಲೆಯಲ್ಲಿ ಪಾಠ ಮಾಡುತ್ತಾರೆ.

ಇದನ್ನೂ ಓದಿರಿ: ಸ್ಟಂಟ್ ಮಾಡಲು ಹೋಗಿ ಉಕ್ಕಿ ಹರಿಯುತ್ತಿದ್ದ ನದಿಗೆ ಜಿಗಿದ ಯುವಕ.. ನೀರಿನ ಸೆಳೆತಕ್ಕೆ ಸಿಲುಕಿ ಸಾವು!?

ಯಾವ ಕಾರಣಕ್ಕಾಗಿ ಆತ್ಮಹತ್ಯೆ: ಲಭ್ಯವಾಗಿರುವ ಮಾಹಿತಿ ಪ್ರಕಾರ ಗುಡಿಯಾಗೆ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಐವಿಎಫ್​​ ಮೂಲಕ ಮಕ್ಕಳು ಮಾಡಿಕೊಳ್ಳಲು ಮುಂದಾಗಿದ್ದರು. ಇದೇ ವಿಚಾರವಾಗಿ ಗಂಡ - ಹೆಂಡತಿ ಮಧ್ಯೆ ಜಗಳವಾಗುತ್ತಿತ್ತು. ಅನೇಕ ಸಲ ಸುಭಾಷ್​ ಕಟ್ಟಿಕೊಂಡ ಹೆಂಡತಿ ಮೇಲೆ ಅನುಮಾನ ಸಹ ವ್ಯಕ್ತಪಡಿಸಿದ್ದರಂತೆ.

ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಮೃತ ಮಹಿಳೆ ಕುಟುಂಬಸ್ಥರು ಇದೀಗ ಗಂಡನ ಮನೆಯವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರಹಿಂಸೆ ನೀಡಿದ್ದರಿಂದ ತಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.