ETV Bharat / bharat

ಈ ಮೇಕೆಗೆ ಭರ್ಜರಿ ಬೇಡಿಕೆ.. 175 ಕೆಜಿ ತೂಗುವ ಕಿಂಗ್​ ಬೆಲೆ ಬರೋಬ್ಬರಿ 12 ಲಕ್ಷ.. ಯಾರೀತ ಕಿಂಗ್​! - ಮೇಕೆಯ ಮಾಲೀಕ ಸುಹೇಲ್ ಅಹಮದ್

ಬಕ್ರೀದ್​ ಹಬ್ಬದ ಅಂಗವಾಗಿ ಮೇಕೆಗಳ ಮಾರಾಟ ಜೋರಾಗಿದೆ. ಮಧ್ಯಪ್ರದೇಶದಲ್ಲೂ ಬಕ್ರೀದ್ ಆಚರಣೆ ಸಂಭ್ರಮ ಜೋರಾಗಿದೆ. ಈ ನಡುವೆ ಕಿಂಗ್​ ಎಂಬ ಮೇಕೆ ಬರೋಬ್ಬರಿ 12 ಲಕ್ಷ ರೂ ಗೆ ಮಾರಾಟವಾಗಿದ್ದು, ಸದ್ದು ಮಾಡುತ್ತಿದೆ.

Bhopal goat of 176 kg sold for Rs 12 lakhs for Eid al-Adha
ಈ ಮೇಕೆಗೆ ಭರ್ಜರಿ ಬೇಡಿಕೆ.. 175 ಕೆಜಿ ತೂಗುವ ಕಿಂಗ್​ ಬೆಲೆ ಬರೋಬ್ಬರಿ 12 ಲಕ್ಷ.. ಯಾರೀತ ಕಿಂಗ್​!
author img

By

Published : Jun 26, 2023, 6:40 AM IST

ಭೋಪಾಲ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಮೇಕೆಯೊಂದು ಪವಿತ್ರ ಹಬ್ಬ ಈದ್-ಅಲ್ ಅಧಾದ( ಬಕ್ರೀದ್​​​) ನ ನಿಮಿತ್ತ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮೇಕೆಯ ಮಾಲೀಕ ಸುಹೇಲ್ ಅಹಮದ್ ಈ ಮೇಕೆಗೆ 'ಕಿಂಗ್' ಎಂದು ಹೆಸರಿಟ್ಟಿದ್ದಾರೆ. ಅಂದಹಾಗೆ ಈ ಮೇಕೆ 176 ಕೆಜಿ ತೂಕ ಹೊಂದಿದ್ದು, ಇದರ ಬೆಲೆ 12 ಲಕ್ಷ ರೂಪಾಯಿ ಎಂದು ನಿಗದಿ ಮಾಡಲಾಗಿದೆ.

ಬಕ್ರೀದ್​​​ ನಿಮಿತ್ತ ಮೇಕೆಗಳ ಮಾರಾಟ ಜೋರಾಗಿರುತ್ತದೆ. ಈ ಸಂದರ್ಭದಲ್ಲಿ ಮೇಕೆಗಳಿಗೆ ಭಾರಿ ಬೇಡಿಕೆ ಬರುತ್ತದೆ. ಪರಿಣಾಮ ಮಾರಾಟ ಮತ್ತು ಖರೀದಿ ಜೋರಾಗಿಯೇ ಇರುತ್ತದೆ. ಹೀಗಾಗಿ ಈ ಮಾರುಕಟ್ಟೆಗೆ ಕೋಟಾ ತಳಿಯ ಮೇಕೆಗಳನ್ನು ತರುತ್ತೇನೆ ಅಂತಿದ್ದಾರೆ ಕಿಂಗ್​ ಎಂಬ ಬಹುಬೇಡಿಕೆ ಮೇಕೆಯ ಮಾಲೀಕ ಅಹಮದ್.

ಕಿಂಗ್​​ಗೆ ಕೂಲರ್​ ಆಸರೆ: ಬಹುಬೇಡಿಕೆಯ ಬೆಲೆ ಬಾಳುವ ಕಿಂಗ್​​ಗೆ ಬಿಸಿಲಿನಿಂದ ರಕ್ಷಿಸಲು ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ ಮೇಕೆಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಕಾಲಕಾಲಕ್ಕೆ, ಪಶು ವೈದ್ಯರು ಅವುಗಳ ಆರೋಗ್ಯವನ್ನು ಪರೀಕ್ಷಿಸುವ ವ್ಯವಸ್ಥೆಯನ್ನೂ ಕೂಡಾ ಮಾಡಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಮೇಕೆಗಳ ಶೆಡ್ ಒಳಗೆ ಎರಡು ಕೂಲರ್​ಗಳನ್ನು ಅಳವಡಿಸಲಾಗಿದೆ.

ಕಿಂಗ್​ ಬಗ್ಗೆ ಅದರ ಮಾಲೀಕ ಹೇಳಿದ್ದಿಷ್ಟು: ಈದ್ ಅಲ್ - ಅಧಾ ಹಬ್ಬದ ನಿಮಿತ್ತ ಎಂಟು ತಿಂಗಳ ಹಿಂದೆ ರಾಜಸ್ಥಾನದಿಂದ ಈ ಮೇಕೆಯನ್ನು ಖರೀದಿಸಿ ತಂದಿದ್ದೇನೆ. ‘ಕಿಂಗ್’ ಗೆ ನಾಲ್ಕು ಗಂಟೆಗೊಮ್ಮೆ ಬೇಳೆ, ಗೋಧಿ, ಹಾಲು, ಖರ್ಜೂರ ಮತ್ತು ಜೇನುತುಪ್ಪವನ್ನು ನೀಡಲಾಗುತ್ತದೆ. ಈ ಮೇಕೆ 43 ಇಂಚು ಎತ್ತರವಿದೆ ಎಂದು ಅಹ್ಮದ್ ಮಾಹಿತಿ ನೀಡಿದ್ದಾರೆ​. ಅಂದ ಹಾಗೆ ಈ ಮೇಕೆಯನ್ನ ಅಹ್ಮದ್​ ಮುಂಬೈ ನಿವಾಸಿ ಅನ್ಸರ್ ಖಾನ್ ಅಹ್ಮದ್​​​​​ ಎಂಬುವವರಿಗೆ​ ಮಾರಾಟ ಮಾಡಿದ್ದು, 12 ಲಕ್ಷ ರೂ ಗೆ ವ್ಯಾಪಾರ ಕುದುರಿಸಿದ್ದಾರೆ.

ಆಡುಗಳನ್ನು ಸಾಕಲು ಇಷ್ಟಪಡುತ್ತೇನೆ ಎನ್ನುವ ಅಹಮದ್, ಸಾಮಾನ್ಯವಾಗಿ ಹಲವು ತಳಿಯ ಮೇಕೆಗಳನ್ನು ಸಾಕುತ್ತೇನೆ. ಆದರೆ ಇದೇ ಮೊದಲ ಸಲ ಕೋಟ ಮೇಕೆ ಸಾಕಿದ್ದೇನೆ ಎಂದು ಹೇಳಿದ್ದಾರೆ. ಇಸ್ಲಾಮಿಕ್ ನ 12 ನೇ ತಿಂಗಳಾದ ಧು ಅಲ್-ಹಿಜ್ಜಾದನ 10 ನೇ ದಿನದಂದು 'ತ್ಯಾಗದ ಹಬ್ಬ' ಎಂದು ಕರೆಯಲ್ಪಡುವ ಈದ್ ಅಲ್-ಅಧಾ( ಬಕ್ರೀದ್​​​) ಪವಿತ್ರ ಹಬ್ಬವನ್ನು ಆಚರಿಸಲಾಗುತ್ತದೆ. ಈದ್ ಕುರ್ಬಾನ್ ಅಥವಾ ಕುರ್ಬಾನ್ ಬಯಾರಾಮಿ ಎಂದೂ ಈ ಹಬ್ಬವನ್ನ ಕರೆಲಾಗುತ್ತದೆ. ಇದು ವಾರ್ಷಿಕ ಹಜ್ ತೀರ್ಥಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ. ಈದ್ ಅಲ್-ಅಧಾ ವರ್ಷದ ಎರಡನೇ ಇಸ್ಲಾಮಿಕ್ ಹಬ್ಬವಾಗಿದೆ.

ಬಕ್ರೀದ್​ಗೆ ಅರೇಬಿಕ್ ಭಾಷೆಯಲ್ಲಿ ಈದ್-ಉಲ್-ಅಧಾ ಎಂದು ಕರೆಯಲಾಗುತ್ತದೆ. ಭಾರತೀಯ ಉಪಖಂಡದಲ್ಲಿ ಬಕರ್-ಇದ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಏಕೆಂದರೆ ಮೇಕೆ ಅಥವಾ 'ಬಕ್ರಿ' ತ್ಯಾಗ ಮಾಡುವ ಸಂಪ್ರದಾಯ ಈ ಹಬ್ಬದಂದು ಮಾಡಲಾಗುತ್ತದೆ. ಇದು ಭಾರತದಲ್ಲಿ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುವ ಹಬ್ಬವಾಗಿದೆ.

ಇದನ್ನು ಓದಿ:ವಿಶ್ವದ ಅತ್ಯಂತ ಪ್ರಸಿದ್ಧ ರೆಸ್ಟೋರೆಂಟ್ ಖ್ಯಾತಿಗೆ ಪಾತ್ರವಾದ ಪ್ಯಾರಾಗಾನ್ ರೆಸ್ಟೋರೆಂಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.