ETV Bharat / bharat

ರಂಗುರಂಗಿನ ಹರಿಯಾಣ ಚುನಾವಣಾ ಕಣ... ಕುಸ್ತಿ, ಟಿಕ್​ಟಾಕ್​ ಸ್ಟಾರ್ ಮತ್ತಿನ್ಯಾರ್ಯಾರು..?

ಪ್ರಮುಖ ರಾಷ್ಟ್ರೀಯ ಪಕ್ಷ ಬಿಜೆಪಿ ಚುನಾವಣೆ ಗೆಲುವಿಗೆ ವಿಭಿನ್ನ ರೀತಿಯಲ್ಲಿ ಯೋಜನೆ ರೂಪಿಸಿದ್ದು, ಕ್ರೀಡಾಪಟು, ಟಿಕ್​ಟಾಕ್​ ಸ್ಟಾರ್​​ಗಳನ್ನು ಕಣಕ್ಕಿಳಿಸಿದೆ. ಹನ್ನೆರಡು ಮಂದಿ ಮಹಿಳಾ ಅಭ್ಯರ್ಥಿಗಳಲ್ಲಿ ಐವರು ಹಾಲಿ ಶಾಸಕರಾಗಿದ್ದಾರೆ.

ರಂಗುರಂಗಿನ ಹರಿಯಾಣ ಚುನಾವಣಾ ಕಣ
author img

By

Published : Oct 8, 2019, 1:16 PM IST

ನವದೆಹಲಿ: ಹರಿಯಾಣ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೆರಡು ವಾರಗಳಷ್ಟೇ ಬಾಕಿ ಇದ್ದು, ಅಭ್ಯರ್ಥಿಗಳು ಗೆಲುವಿಗೆ ರಣತಂತ್ರ ಹೂಡಿದ್ದಾರೆ.

ಪ್ರಮುಖ ರಾಷ್ಟ್ರೀಯ ಪಕ್ಷ ಬಿಜೆಪಿ ಚುನಾವಣಾ ಗೆಲುವಿಗೆ ವಿಭಿನ್ನ ರೀತಿಯಲ್ಲಿ ಯೋಜನೆ ರೂಪಿಸಿದ್ದು, ಕ್ರೀಡಾಪಟು, ಟಿಕ್​ಟಾಕ್​ ಸ್ಟಾರ್​​ಗಳನ್ನು ಕಣಕ್ಕಿಳಿಸಿದೆ. ಹನ್ನೆರಡು ಮಂದಿ ಮಹಿಳಾ ಅಭ್ಯರ್ಥಿಗಳಲ್ಲಿ ಐವರು ಹಾಲಿ ಶಾಸಕರಾಗಿದ್ದಾರೆ.

ಟಿಕ್​ ಟಾಕ್​ ಸ್ಟಾರ್​ಗೆ ಬಿಜೆಪಿ ಟಿಕೆಟ್​​!

ಕೇಂದ್ರ ಸಚಿವ ಬಿರೇಂದರ್​ ಸಿಂಗ್ ಪತ್ನಿ ಪ್ರೇಮ ಲತಾ, ಕಲ್ಯಾಣ್​ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ. ಹಿಸ್ಸಾರ್ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಂದ್ರ ಸಿಂಗ್ ತಾಯಿಯೂ ಆಗಿರುವ ಪ್ರೇಮ ಲತಾಗೆ ದುಷ್ಯಂತ್ ಚೌಟಾಲ(ಜನ್​​ನಾಯಕ್​ ಜನತಾ ಪಾರ್ಟಿ) ಪ್ರಬಲ ಎದುರಾಳಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಪ್ರೇಮ ಲತಾ ಸುಮಾರು ಏಳು ಸಾವಿರ ಮತಗಳಿಂದ ದುಷ್ಯಂತ್​ರನ್ನು ಮಣಿಸಿದ್ದರು.

ಉಳಿದಂತೆ ನಿರ್ಮಲ್ ಚೌಧರಿ(ಗನೌರ್), ಸಚಿವೆ ಕವಿತಾ ಜೈನ್​(ಸೋನಿಪತ್), ಲತಿಕಾ ಶರ್ಮಾ(ಕಲ್ಕ) ಹಾಗೂ ಸೀಮಾ ತ್ರಿಖಾ(ಬದ್ಕ್​ಹಲ್​) ಕ್ಷೇತ್ರಗಳಿಂದ ಮರು ಆಯ್ಕೆ ಬಯಸಿದ್ದಾರೆ.

Wrestler
ರೆಸ್ಲರ್ ಬಬಿತಾ ಪೋಗಟ್

ಈ ಬಾರಿ ಬಿಜೆಪಿ ಹಲವು ಹೊಸಮುಖಗಳಿಗೆ ಮಣೆ ಹಾಕಿದೆ. ರೆಸ್ಲರ್ ಬಬಿತಾ ಪೋಗಟ್​ ದಾದ್ರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇದು ಭಿವಾನಿ-ಮಹೇಂದ್ರಗಢ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ಬಿಜೆಪಿ ಇದುವರೆಗೂ ಗೆಲುವು ಕಂಡಿಲ್ಲ.

ಹರಿಯಾಣ ವಿಧಾನಸಭೆ​ ಎಲೆಕ್ಷನ್​: ಕುಸ್ತಿಪಟು ದತ್​, ಬಬಿತಾ ಫೋಗಟ್ ಸೇರಿ ಇವರಿಗೆಲ್ಲ ಮಣೆ!

ದಂಗಲ್ ಸಿನಿಮಾದ ಬಳಿಕ ಬಬಿತಾ ಹೆಸರು ಹೆಚ್ಚು ಜನಪ್ರಿಯತೆ ಪಡೆದಿದ್ದು, ಇದನ್ನೇ ಚುನಾವಣೆ ಲಾಭವಾಗಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಸ್ಟಾರ್ ಕ್ರೀಡಾಪಟುವನ್ನು ಚುನಾವಣೆಯಲ್ಲಿ ಇಳಿಸಿ ಗೆಲುವೇ ಸಾಧಿಸದ ಕ್ಷೇತ್ರದಲ್ಲಿ ಗೆಲುವು ಕಾಣುವ ಆಸೆಯಲ್ಲಿ ಬಿಜೆಪಿ ಇದೆ.

ಆದಂಪುರ ಕ್ಷೇತ್ರ ಈ ಬಾರಿ ಕೊಂಚ ಗ್ಲಾಮರ್​ನಿಂದ ಕೂಡಿದೆ. ಇದಕ್ಕೆ ಕಾರಣ ಟಿಕ್​ಟಾಕ್ ಮೂಲಕವೇ ಭಾರಿ ಜನಪ್ರಿಯತೆ ಸಾಧಿಸಿರುವ ಸೋನಾಲಿ ಪೋಗಟ್​ ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈಕೆ ಬಿಜೆಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದಳಲ್ಲದೇ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾಳೆ.

tik tok star
ಟಿಕ್​ಟಾಕ್​ ಸ್ಟಾರ್ ಸೋನಾಲಿ ಪೋಗಟ್

ಪುನ್ಹಾನ ಕ್ಷೇತ್ರದಿಂದ ಬಿಜೆಪಿ 28 ವರ್ಷದ ನೌಕ್ಷಾಮ್​ ಚೌಧರಿಯನ್ನು ಕಣಕ್ಕಿಳಿಸಿದೆ. ವಿಶೇಷವೆಂದರೆ ದಾದ್ರಿ ಕ್ಷೇತ್ರದಂತೆ ಇಲ್ಲೂ ಸಹ ಬಿಜೆಪಿಗೆ ಗೆಲುವು ಮರೀಚಿಕೆಯಾಗಿಯೇ ಉಳಿದಿದೆ. ಇಟಲಿ ಹಾಗೂ ಯುಕೆಯಲ್ಲಿ ಶಿಕ್ಷಣ ಪೂರೈಸಿದ್ದು, ಒಂದು ತಿಂಗಳ ಹಿಂದೆಯಷ್ಟೇ ಭಾರತಕ್ಕೆ ಬಂದಿದ್ದಾರೆ. ನೌಕ್ಷಾಮ್​ ತಂದೆ ನಿವೃತ್ತ ನ್ಯಾಯಮೂರ್ತಿಯಾಗಿದ್ದಾರೆ.

ಹಿಸ್ಸಾರ್ ಜಿಲ್ಲೆಯ ಉಲ್ಕಾನ ಮೀಸಲು ಕ್ಷೇತ್ರದಲ್ಲಿ ಆಶಾ ಖೇದರ್​ಗೆ​​ ಟಿಕೆಟ್ ನೀಡಿದೆ. ದಲಿತ ಸಮುದಾಯದ ಆಶಾ ಜಾಟ್ ಪಂಗಡಕ್ಕೆ ಸೇರಿದ ಉದ್ಯಮಿಯನ್ನು ವರಿಸಿದ್ದಾರೆ. ಆಶಾ ಇಂಗ್ಲಿಷ್​ ಹಾಗೂ ಸಂಸ್ಕೃತದಲ್ಲಿ ಉನ್ನತ ಶಿಕ್ಷಣ ಪಡೆದಿದ್ದು, ಪ್ರಸ್ತುತ ಪಿಹೆಚ್​ಡಿ ಪಡೆಯುತ್ತಿದ್ದಾರೆ.

ಸೋನಿಪತ್​ ಜಿಲ್ಲೆಯ ಖಾರ್ಖೋಡ ಕ್ಷೇತ್ರದಿಂದ ಜಿಲ್ಲಾ ಪರಿಷತ್ ಮುಖ್ಯಸ್ಥೆ ಮೀನಾ ನರ್ವಾಲ್​ ಚುನಾವಣೆ ಎದುರಿಸುತ್ತಿದ್ದಾರೆ. ಸಂತೋಷ್​ ದನೋಡಾ(ನರ್ವಾಣ ಕ್ಷೇತ್ರ) ಹಾಗೂ ಕಮಲೇಶ್ ದಂಡ(ಕಲಾಯತ್ ಕ್ಷೇತ್ರ) ಕಣಕ್ಕಿಳಿದಿದ್ದಾರೆ.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜನ್​​ನಾಯಕ್​ ಜನತಾ ಪಾರ್ಟಿ (ಜೆಜೆಪಿ) ಇಂಡಿಯನ್ ನ್ಯಾಷನಲ್ ಲೋಕದಳ(ಐಎನ್​ಎಲ್​ಡಿ) ನಡುವೆ ತೀವ್ರ ಪೈಪೋಟಿ ಇದೆ. 2014ರಲ್ಲಿ ಮೊದಲ ಬಾರಿಗೆ ಬಿಜೆಪಿ ಹರಿಯಾಣದಲ್ಲಿ ಅಧಿಕಾರಕ್ಕೇರಿತ್ತು.

ಅ.21ರಂದು ಹರಿಯಾಣದ 90 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಅ.24ರಂದು ಫಲಿತಾಂಶ ಹೊರಬೀಳಲಿದೆ.

Intro:Body:

ಪ್ರೇಮ ಲತಾ:

ಉಳಿದಂತೆ ನಿರ್ಮಲ್ ಚೌಧರಿ(ಗನೌರ್), ಸಚಿವೆ ಕವಿತಾ ಜೈನ್​(ಸೋನಿಪತ್), ಲತಿಕಾ ಶರ್ಮ(ಕಲ್ಕ) ಹಾಗೂ ಸೀಮಾ ತ್ರಿಖಾ(ಬದ್ಕ್​ಹಲ್​) ಕ್ಷೇತ್ರಗಳಿಂದ ಮರು ಆಯ್ಕೆ ಬಯಸಿದ್ದಾರೆ.

ಈ ಬಾರಿ ಬಿಜೆಪಿ ಹಲವು ಹೊಸಮುಖಗಳಿಗೆ ಮಣೆ ಹಾಕಿದೆ. ರೆಸ್ಲರ್ ಬಬಿತಾ ಪೋಗಟ್​ ದಾದ್ರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇದು ಭಿವಾನಿ-ಮಹೇಂದ್ರಗಢ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ಬಿಜೆಪಿ ಇದುವರೆಗೂ ಗೆಲುವು ಕಂಡಿಲ್ಲ.

ದಂಗಲ್ ಸಿನಿಮಾದ ಬಳಿಕ ಬಬಿತಾ ಹೆಸರು ಹೆಚ್ಚು ಜನಪ್ರಿಯತೆ ಪಡೆದಿದ್ದು, ಇದನ್ನೇ ಚುನಾವಣೆ ಲಾಭವಾಗಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.  ಸ್ಟಾರ್ ಕ್ರೀಡಾಪಟುವನ್ನು ಚುನಾವಣೆಯಲ್ಲಿ ಇಳಿಸಿ ಗೆಲುವೇ ಸಾಧಿಸದ ಕ್ಷೇತ್ರದಲ್ಲಿ ಗೆಲುವು ಕಾಣುವ ಆಸೆಯಲ್ಲಿ ಬಿಜೆಪಿ ಇದೆ.

ಆದಂಪುರ ಕ್ಷೇತ್ರ ಈ ಬಾರಿ ಕೊಂಚ ಗ್ಲಾಮರ್​ನಿಂದ ಕೂಡಿದೆ. ಇದಕ್ಕೆ ಕಾರಣ ಟಿಕ್​ಟಾಕ್ ಮೂಲಕವೇ ಭಾರಿ ಜನಪ್ರಿಯತೆ ಸಾಧಿಸಿರುವ ಸೋನಾಲಿ ಪೋಗಟ್​ ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈಕೆ ಬಿಜೆಪಿಯ ಸಂಘಟನೆ ಸಕ್ರಿಯರಾಗಿದ್ದಳಲ್ಲದೆ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾಳೆ.

ಪುನ್ಹಾನ ಕ್ಷೇತ್ರದಿಂದ ಬಿಜೆಪಿ 28 ವರ್ಷದ ನೌಕ್ಷಾಮ್​ ಚೌಧರಿಯನ್ನು ಕಣಕ್ಕಿಳಿಸಿದೆ. ವಿಶೇಷವೆಂದರೆ ದಾದ್ರಿ ಕ್ಷೇತ್ರದಂತೆ ಇಲ್ಲೂ ಸಹ ಬಿಜೆಪಿಗೆ ಗೆಲುವು ಮರೀಚಿಕೆಯಾಗಿಯೇ ಉಳಿದಿದೆ. ಇಟಲಿ ಹಾಗೂ ಯುಕೆಯಲ್ಲಿ ಶಿಕ್ಷಣ ಪೂರೈಸಿದ್ದು, ಒಂದು ತಿಂಗಳ ಹಿಂದೆಯಷ್ಟೇ ಭಾರತಕ್ಕೆ ಬಂದಿದ್ದಾರೆ. ನೌಕ್ಷಾಮ್​ ತಂಡೆ ನಿವೃತ್ತ ನ್ಯಾಯಮೂರ್ತಿಯಾಗಿದ್ದಾರೆ.

ಹಿಸ್ಸಾರ್ ಜಿಲ್ಲೆಯ ಉಲ್ಕಾನ ಮೀಸಲು ಕ್ಷೇತ್ರದಲ್ಲಿ ಆಶಾ ಖೇದರ್​ಗೆ​​ ಟಿಕೆಟ್ ನೀಡಿದೆ. ದಲಿತ ಸಮುದಾಯದ ಆಶಾ ಜಾಟ್ ಪಂಡಗಕ್ಕೆ ಸೇರಿದ ಉದ್ಯಮಿಯನ್ನು ವರಿಸಿದ್ದಾರೆ. ಆಶಾ ಇಂಗ್ಲೀಷ್ ಹಾಗೂ ಸಂಸ್ಕೃತದಲ್ಲಿ ಉನ್ನತ ಶಿಕ್ಷಣ ಪಡೆದಿದ್ದು, ಪ್ರಸ್ತುತ ಪಿಹೆಚ್​ಡಿ ಪಡೆಯುತ್ತಿದ್ದಾರೆ.

ಸೋನಿಪತ್​ ಜಿಲ್ಲೆಯ ಖಾರ್ಖೋಡ ಕ್ಷೇತ್ರದಿಂದ ಜಿಲ್ಲಾ ಪರಿಷತ್ ಮುಖ್ಯಸ್ಥೆ ಮೀನಾ ನರ್ವಾಲ್​ ಚುನಾವಣೆ ಎದುರಿಸುತ್ತಿದ್ದಾರೆ. ಸಂತೋಷ್​ ದನೋಡಾ(ನರ್ವಾಣ ಕ್ಷೇತ್ರ) ಹಾಗೂ ಕಮಲೇಶ್  ದಂಡ(ಕಲಾಯತ್ ಕ್ಷೇತ್ರ) ಕಣಕ್ಕಿಳಿದಿದ್ದಾರೆ.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜನ್​​ನಾಯಕ್​ ಜನತಾ ಪಾರ್ಟಿ (ಜೆಜೆಪಿ) ಇಂಡಿಯನ್ ನ್ಯಾಷನಲ್ ಲೋಕದಳ(ಐಎನ್​ಎಲ್​ಡಿ) ನಡುವೆ ತೀವ್ರ ಪೈಪೋಟಿ ಇದೆ. 2014ರಲ್ಲಿ ಮೊದಲ ಬಾರಿಗೆ ಬಿಜೆಪಿ ಹರಿಯಾಣದಲ್ಲಿ ಅಧಿಕಾರಕ್ಕೇರಿತ್ತು. 

ಅ.21ರಂದು ಹರಿಯಾಣದ 90 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಅ.24ರಂದು ಫಲಿತಾಂಶ ಹೊರಬೀಳಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.