ನವದೆಹಲಿ: ಅಯೋಧ್ಯೆಯಲ್ಲಿ ನೆಲೆಸಿದ್ದ ದೇವ ಶ್ರೀರಾಮ ಜನ್ಮಸ್ಥಳವೆಂದು ಪರಿಗಣಿಸಲ್ಪಟ್ಟ ಶ್ರೀರಾಮ ಮಂದಿರದ ಹಿನ್ನೆಲೆಯಲ್ಲಿ ಹಿಂದೂಗಳ ನಂಬಿಕೆ ಪ್ರಶ್ನಿಸುವುದು ಕಷ್ಟವಾಗುತ್ತದೆ. ಏಕೆಂದರೆ ಕೆಲವು ಮುಸ್ಲಿಂ ಸಾಕ್ಷಿಗಳು ಕೂಡ ಮೆಕ್ಕಾದಂತೆ ಇದು ಹಿಂದೂಗಳಿಗೆ ಪವಿತ್ರ ಎಂದು ಭಾವಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ 5 ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಮುಸ್ಲಿಂ ಪಕ್ಷಗಳ ಪರವಾಗಿ ಪ್ರಶ್ನಿಸಿತು. ದೇವರು ಮತ್ತು ವಿಗ್ರಹಗಳು 'ನಿಖರ ರೂಪ'ದಲ್ಲಿ ಇದ್ದವಾ ಈ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಹೇಳಲು ಸಾಧ್ಯವೇ ಎಂದೂ ವಕೀಲರನ್ನ ನ್ಯಾಯಪೀಠ ಪ್ರಶ್ನಿಸಿದೆ.
ಹಲವು ಮುಸ್ಲಿಂ ಸಾಕ್ಷಿಗಳು ಸಹ (ವಿಚಾರಣೆಯ ಸಮಯದಲ್ಲಿ) ಅಯೋಧ್ಯೆಯು ಮುಸ್ಲಿಮರಿಗೆ ಮೆಕ್ಕಾದಂತೆ ಹಿಂದೂಗಳಿಗೆ ಇದು ಪವಿತ್ರವಾಗಿದೆ ಎಂದು ಹೇಳಿದ್ದಾರೆ. ಹಿಂದೂಗಳ ನಂಬಿಕೆಯನ್ನು ಖಂಡಿಸುವುದು ಕಷ್ಟವಾಗುತ್ತದೆ ಎಂದು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ ಎಂಬುದನ್ನ ನ್ಯಾಯಮೂರ್ತಿಗಳಾದ ಎಸ್.ಎ. ಬಾಬ್ಡೆ ಅವರನ್ನು ಒಳಗೊಂಡ ನ್ಯಾಯಪೀಠ ಗಮನಿಸಿದೆ ಎಂದು ಹೇಳಿದೆ.
ಸುನ್ನಿ ವಕ್ಫ್ ಮಂಡಳಿ ಮತ್ತು ಮೂಲ ದಾವೆದಾರ ಎಂ ಸಿದ್ಧಿಕ್ ಸೇರಿದಂತೆ ಇತರರ ಪರ ವಾದಿಸುತ್ತಿರುವ ಧವನ್ ಅವರು, 'ಜನ್ಮಸ್ಥಾನ್'ಕ್ಕೆ (ಜನ್ಮಸ್ಥಳ) ಶೀರ್ಷಿಕೆ ಮತ್ತು ನ್ಯಾಯಶಾಸ್ತ್ರದ ಸ್ಥಾನಮಾನ ಪಡೆಯಲು ನಂಬಿಕೆಯೊಂದು ಮಾತ್ರ ಆಧಾರವಾಗಲಾರದು ಎಂದು ಪ್ರತಿಪಾದಿಸಿದರು. ಆದರೆ, ಭಗವಂತನಿಗೆ ಗೌರವ ನೀಡುವುದಕ್ಕಾಗಿ ಅವರು ಬಲವಾಗಿ ಮುಂದಾಗಿದ್ದಾರೆ. 'ದೇವ ಶ್ರೀರಾಮ' ಮತ್ತು 'ಅಲ್ಲಾಹ'ನನ್ನು ಗೌರವಿಸದಿದ್ದರೆ ಈ ಮಹಾನ್ ರಾಷ್ಟ್ರ ವಿಭಜನೆಯಾಗುತ್ತದೆ ಎಂದು ಹಿರಿಯ ವಕೀಲರು ತಮ್ಮ ವಾದ ಮಂಡಿಸಿದರು.