ಹೈದರಾಬಾದ್ : ವಿಶ್ವವನ್ನೇ ಸಂಕಷ್ಟಕ್ಕೆ ದೂಡಿ, ಜೀವನದ ಹೊಸ ಪಾಠ ಕಲಿಸಿದ ಕೊರೊನಾ ಈವರೆಗೆ 4,90,31,012 ಜನರಿಗೆ ಕಿಲ್ಲರ್ ಕೊರೊನಾ ವೈರಸ್ ಅಂಟಿದೆ. 12,39,608 ಸೋಂಕಿತರು ಮೃತಪಟ್ಟಿದ್ದು, 3,49,83,279 ಮಂದಿ ಗುಣಮುಖರಾಗಿದ್ದಾರೆ.
ಕೊರೊನಾ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಒಂದು ಕೋಟಿ (99,19,522) ಗಡಿ ತಲುಪುತ್ತಿದ್ದು, ಮೃತರ ಸಂಖ್ಯೆ 2,40,953ಕ್ಕೆ ಏರಿಕೆಯಾಗಿದೆ.
ಕೇಸ್ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 84,11,724 ಕೇಸ್ಗಳು ಪತ್ತೆಯಾಗಿದ್ದು, 1,25,029 ಜನರು ವೈರಸ್ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 56,14,258 ಪ್ರಕರಣಗಳು ಹಾಗೂ 1,61,779 ಸಾವು ವರದಿಯಾಗಿವೆ.
4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 17,12,858 ಕೇಸ್ಗಳಿದ್ದು, 29,509 ಜನರು ಸಾವನ್ನಪ್ಪಿದ್ದಾರೆ. ಒಟ್ಟು 188 ರಾಷ್ಟ್ರಗಳು ಕೋವಿಡ್ ಹೊಡೆತಕ್ಕೆ ಸಿಲುಕಿದ್ದು, ಕೊರೊನಾ ಪೀಡಿತ ವಿಶ್ವದ ಟಾಪ್ 10 ರಾಷ್ಟ್ರಗಳ ಮಾಹಿತಿ ಇಲ್ಲಿದೆ.
ಕೋವಿಡ್ ಮೊಟ್ಟಮೊದಲು ಕಾಣಿಸಿಕೊಂಡು ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಬೆರಳೆಣಿಕೆಯಷ್ಟು ಕೇಸ್ಗಳು ಪತ್ತೆಯಾಗುತ್ತಿವೆ. 2019ರ ಡಿಸೆಂಬರ್ನಿಂದ ಈವರೆಗೆ ಚೀನಾದಲ್ಲಿ 86,151 ಪ್ರಕರಣ ಹಾಗೂ 4,634 ಸಾವು ವರದಿಯಾಗಿವೆ.