ETV Bharat / bharat

'ಕೊರೊನಾ'ಜನಕ: 91,85,229 ಮಂದಿಗೆ ಸೋಂಕು, ಬಲಿಯಾದವರು ಎಷ್ಟು ಗೊತ್ತೇ?

ಕೊರೊನಾ ಪ್ರಕರಣ ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 23,88,153 ಇದ್ದು, ಮೃತರ ಸಂಖ್ಯೆ 1,22,610ಕ್ಕೆ ಏರಿಕೆಯಾಗಿದೆ.

Global COVID-19 tracker
ಕೊರೊನಾ
author img

By

Published : Jun 23, 2020, 10:22 AM IST

ಹೈದರಾಬಾದ್​: ಕಿಲ್ಲರ್​ ಕೊರೊನಾಗೆ ಜಗತ್ತು ತಲ್ಲಣಿಸಿದೆ. ಈವರೆಗೆ 91,85,229 ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 4,74,237ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂದಾಜು 49,21,063 ಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ.

ಕೋವಿಡ್​ ಮೊಟ್ಟಮೊದಲು ಕಾಣಿಸಿಕೊಂಡು, ಅದರಿಂದ ಚೇತರಿಸಿಕೊಂಡಿದ್ದ ಚೀನಾದಲ್ಲಿ ಮತ್ತೆ ಕೇಸ್​ಗಳು ಪತ್ತೆಯಾಗುತ್ತಿದೆ. ಸೋಮವಾರ ಕೂಡ 22 ಮಂದಿಗೆ ಸೋಂಕು ತಗುಲಿದೆ. ಇದರಿಂದ ಚೀನಾದಲ್ಲಿ 359 ಪ್ರಕರಣಗಳು ಸಕ್ರಿಯವಾಗಿವೆ. 2019ರ ಡಿಸೆಂಬರ್​ನಿಂದ ಈವರೆಗೆ ಚೀನಾದಲ್ಲಿ 83,418 ಪ್ರಕರಣಗಳು ಹಾಗೂ 4,634 ಸಾವು ವರದಿಯಾಗಿದೆ.

Global COVID-19 tracker
ಗ್ಲೋಬಲ್​ ಕೋವಿಡ್​-19 ಟ್ರ್ಯಾಕರ್​

ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 23,88,153 ಇದ್ದು, ಮೃತರ ಸಂಖ್ಯೆ 1,22,610ಕ್ಕೆ ಏರಿಕೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್​​ನಲ್ಲಿ 11,11,348 ಪ್ರಕರಣಗಳು ಹಾಗೂ 51,407 ಸಾವುಗಳು ವರದಿಯಾಗಿದೆ.

ಸೋಂಕಿತರ ಪೈಕಿ ರಷ್ಯಾ 3ನೇ ಸ್ಥಾನದಲ್ಲಿದ್ದು, ಈವರೆಗೆ 5,92,280 ಕೇಸ್​ಗಳು ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಭಾರತದಲ್ಲಿ 4,40,450 ಸೋಂಕಿತರು ಪತ್ತೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.