ಹೈದರಾಬಾದ್: ಕೆಲವು ವರ್ಷಗಳಿಂದ ವಿಶ್ವದ ಅಗ್ರಗಣ್ಯ ಟಾಪ್ ಆರ್ಡರ್ ಬ್ಯಾಟ್ಸ್ಮನ್.. ಶತಕಗಳ ಮೇಲೆ ಶತಕ ಸಿಡಿಸುವ ಮೂಲಕ ವಿಕ್ರಮ ಮೆರೆದಿದ್ದಾರೆ. 30 ವರ್ಷದ ಕೊಹ್ಲಿ ಅವರನ್ನ ಚೇಸ್ ಮಾಸ್ಟರ್ ಎಂದೇ ಕರೆಯಲಾಗುತ್ತದೆ.
ಏಕದಿನ ಕ್ರಿಕೆಟ್ನ ಸುಲ್ತಾನ್ ಎಂದೇ ಕರೆಯಿಸಿಕೊಳ್ಳುವ ವಿರಾಟ್ ಕೊಹ್ಲಿ ಈಗಾಗಲೇ ಒನ್ ಡೇ ಪಂದ್ಯಗಳಲ್ಲಿ 41 ಶತಕ ಸೇರಿದಂತೆ 11 ಸಾವಿರ ರನ್ಗಳನ್ನ ಪೇರಿಸಿದ್ದಾರೆ.
ಹೌದು ಇಂತಹ ಸಾಧನೆ ಮಾಡಿದ ವಿರಾಟ್ ಕೊಹ್ಲಿ ನಾಯಕನಾಗಿಯೂ ಯಶಸ್ವಿಯಾಗಿದ್ದಾರೆ. ಆದರೆ, ಈ ವಿಶ್ವಕಪ್ನ ಅತೀ ಮಹತ್ವದ ಪಂದ್ಯದಲ್ಲಿ ಕೇವಲ 1 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಇನ್ನು ವಿಶೇಷ ಎಂದರೆ ಏಕದಿನ ಕ್ರಿಕೆಟ್ನ 14 ನಾಕೌಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದು 31.36 ರ ಸರಾಸರಿ ರನ್ಗಳನ್ನ ಮಾತ್ರ.
ಆದರೆ ಒಟ್ಟಾರೆ ಏಕದಿನ ಪಂದ್ಯಗಳಲ್ಲಿ ವಿರಾಟ್ 59.70ರ ಸರಾಸರಿಯಲ್ಲಿ ರನ್ಗಳನ್ನ ಬಾರಿಸಿದ್ದಾರೆ. ಆದರೆ ಪ್ರಮುಖ ತಂಡಗಳೊಂದಿಗೆ ನಾಕೌಟ್ನಲ್ಲಿ ಆಡುವಾಗ ಅವರ ಸರಾಸರಿ ಕೇವಲ 29.16 ಮಾತ್ರ. ಇಂತಹ 14 ಪಂದ್ಯಗಳಲ್ಲಿ 2 ಬಾರಿ ಮಾತ್ರ ಕೊಹ್ಲಿ 50 + ರನ್ ಬಾರಿಸಿದ್ದಾರೆ. ಈ ಸಂದರ್ಭಗಳಲ್ಲಿ ಅವರ ಸ್ಟ್ರೈಕ್ ರೇಟ್ ಕೇವಲ 83.13 ಆದರೆ ಅವರ ಸರಾಸರಿ ಸ್ಟ್ರೈಕ್ ರೇಟ್ 91.
ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಅವರ ಸ್ಕೋರ್ ಕೇವಲ 73 ರನ್: ವಿಶ್ವಕಪ್ನ ನಾಕೌಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನೀರಸ ಪ್ರದರ್ಶನ ತೋರಿಸಿದ್ದಾರೆ. ಆರು ಪಂದ್ಯಗಳಲ್ಲಂತೂ ಅವರ ಸರಾಸರಿ ರನ್ ರೇಟ್ ಜಸ್ಟ್ 12.16 ಮಾತ್ರ. ಈ ವೇಳೆ ಅವರ ಸ್ಟ್ರೈಕ್ ರೇಟ್ 56.15 ಈ ಮ್ಯಾಚ್ಗಳಲ್ಲಿನ ಅವರ ಅತ್ಯಂತ ದೊಡ್ಡ ಮೊತ್ತ ಅಂದರೆ ಅದು 35 ರನ್ ಮಾತ್ರ.
ಇಂತಿದೆ ಅವರ ಸಾಧನೆಯ ನೋಟ
ವರ್ಷ | ಮಹತ್ವದ ಪಂದ್ಯ | ಯಾರ ವಿರುದ್ಧ | ಗಳಿಸಿದ ರನ್ |
2011 | ಕ್ವಾರ್ಟರ್ ಫೈನಲ್ | ಆಸ್ಟ್ರೇಲಿಯಾ | 24 |
2011 | ಸೆಮಿಫೈನಲ್ | ಪಾಕಿಸ್ತಾನ | 09 |
2011 | ಫೈನಲ್ | ಶ್ರೀಲಂಕಾ | 35 |
2015 | ಕ್ವಾರ್ಟರ್ ಫೈನಲ್ | ಬಾಂಗ್ಲಾದೇಶ | 03 |
2015 | ಸೆಮಿಫೈನಲ್ | ಆಸ್ಟ್ರೇಲಿಯಾ | 01 |
2019 | ಸೆಮಿಫೈನಲ್ | ನ್ಯೂಜಿಲ್ಯಾಂಡ್ | 01 |
ವಿಶ್ವದ ನಂಬರ್ ಒನ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕಳೆದ ವಿಶ್ವಕಪ್ ಹಾಗೂ ಪ್ರಸ್ತುತ ವರ್ಲ್ಡ್ ಕಪ್ 3 ನಾಕೌಟ್ ಪಂದ್ಯಗಳ ಒಟ್ಟು ಸರಾಸರಿ ಕೇವಲ 3.67 ರಷ್ಟು ಅಂದರೆ ಅವರು ಬಾರಿಸಿದ್ದ ಜಸ್ಟ್ 11ರನ್. ಆಸ್ಟ್ರೇಲಿಯಾ ಮಾಜಿ ಆಟಗಾರ ಗ್ಲೇನ್ ಮ್ಯಾಕ್ಗ್ರಾಥ್ ಅವರ 3.83ರ ಸರಾಸರಿಗಿಂತ ಕಡಿಮೆ ಎನ್ನುವುದು ವಿಶೇಷ.