ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಮೇಲಿನ ಅಪರಾಧ ಕೃತ್ಯ ಹೆಚ್ಚಾಗುತ್ತಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ 20 ವರ್ಷದ ಅನು ದುಬೆ ಎಂಬ ಯುವತಿ ನವದೆಹಲಿ ಸಂಸತ್ ಸಮೀಪ ಏಕಾಂಗಿಯಾಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಕೈಯಲ್ಲಿ ನನ್ನ ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿರಲು ಯಾಕೆ ಸಾಧ್ಯವಿಲ್ಲ ಎಂಬ ಅಡಿ ಬರಹದೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಳು. ಈ ವೇಳೆ ಆಕೆಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಸತ್ ಭವನದ 2-3ನೇ ಗೇಟ್ ಬಳಿ ಕುಳಿತು ಆಕೆ ಪ್ರತಿಭಟನೆ ನಡೆಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ವೇಳೆ ಆಕೆಯ ಬಳಿ ತೆರಳಿರುವ ಪೊಲೀಸರು, ಇಲ್ಲಿ ಪ್ರೊಟೆಸ್ಟ್ ಮಾಡಬೇಡಿ. ಜಂತರ್ ಮಂತರ್ಗೆ ಹೋಗಿ ಪ್ರತಿಭಟನೆ ನಡೆಸಿ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ನಿರಾಕರಿಸಿದ ಯುವತಿ ವೇಳೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಆಕೆಯಿಂದ ಮಾಹಿತಿ ಪಡೆದುಕೊಂಡಾಗ ಹೈದರಾಬಾದ್ನಲ್ಲಿ 26 ವರ್ಷದ ಪಶುವೈದ್ಯೆ ಮೇಲಿನ ರೇಪ್ ಹಾಗೂ ಕೊಲೆಯಿಂದ ಮನನೊಂದು ಆಕೆ ಈ ಕ್ರಮಕ್ಕೆ ಮುಂದಾಗಿದ್ದಳು ಎಂದು ತಿಳಿದು ಬಂದಿದೆ. ಈಗಾಗಲೇ ಪೊಲೀಸರು ಆಕೆಯನ್ನ ಬಿಡುಗಡೆ ಮಾಡಿದ್ದಾರೆ.