ETV Bharat / bharat

ಮಹಿಳಾ ಸೇನಾಧಿಕಾರಿಗೆ ಒಲಿದ ಭಾಗ್ಯ: ತ್ರಿವರ್ಣ ಧ್ವಜ ಹಾರಿಸಲು ನಮೋಗೆ ಮೇಜರ್​ ಶ್ವೇತಾ ಪಾಂಡೆ ಸಹಾಯ!

ದೇಶಾದ್ಯಂತ 74ನೇ ಸ್ವಾತಂತ್ರ್ಯೋತ್ಸವ ದಿನದ ಸಡಗರ-ಸಂಭ್ರಮ ಮನೆ ಮಾಡಿದೆ. ಇದರ ಮಧ್ಯೆ ಐತಿಹಾಸಿಕ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ.

Major Shweta Pandey
Major Shweta Pandey
author img

By

Published : Aug 15, 2020, 2:58 AM IST

ನವದೆಹಲಿ: 74ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. ಇದೀಗ ಅವರಿಗೆ ಸಹಾಯಕರಾಗಿ ಮಹಿಳಾ ಸೇನಾಧಿಕಾರಿ ಆಯ್ಕೆಯಾಗಿದ್ದಾರೆ.

ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಧ್ವಜರೋಹಣ ಅಧಿಕಾರಿಯಾಗಿ ಮೇಜರ್​ ಶ್ವೇತಾ ಪಾಂಡೆ ಆಯ್ಕೆಯಾಗಿದ್ದಾರೆ. ಮೇಜರ್​ ಶ್ವೇತಾ ಪಾಂಡೆ ಈಗಾಗಲೇ ಜೂನ್​ ತಿಂಗಳಲ್ಲಿ ಮಾಸ್ಕೋದಲ್ಲಿ ನಡೆದ ವಿಕ್ಟರಿ ಡೇ ಪರೇಡ್​​ನಲ್ಲಿ ಭಾರತೀಯ ಮಿಲಿಟರಿ ತುಕಡಿ ಮುನ್ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಭಾಗಿಯಾಗಿದ್ದರು.

Major Shweta Pandey
ಕೆಂಪು ಕೋಟೆ ಮೇಲೆ ನಮೋ ಭಾಷಣ

ಮೇಜರ್​ ಶ್ವೇತಾ ಪಾಂಡೆ ಭಾರತೀಯ ಸೇನೆಯ 505 ಮೂಲ ಕಾರ್ಯಾಗಾರದ ಇಎಂಇ(ಎಲೆಕ್ಟ್ರಾನಿಕ್ಸ್​ ಮತ್ತು ಮೆಕ್ಯಾನಿಕಲ್​ ಎಂಜಿನಿಯರ್​​) ಅಧಿಕಾರಿಯಾಗಿದ್ದಾರೆ. ಈ ಹಿಂದೆ ಕೂಡ ಮಹಿಳಾ ಅಧಿಕಾರಿಗಳು ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವದ ವೇಳೆ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಲಕ್ನೋ ನಿವಾಸಿಯಾಗಿರುವ ಮೇಜರ್​​ ಶ್ವೇತಾ ಪಾಂಡೆ ಮಾರ್ಚ್​​ 2012ರಲ್ಲಿ ಚೆನ್ನೈನಲ್ಲಿ ತರಬೇತಿ ಪಡೆದು ಸೇವೆಗೆ ನಿಯೋಜನೆಗೊಂಡಿದ್ದಾರೆ. ಇವರ ತಂದೆ ಶ್ರೀರಾಜ್​ ರತನ್​ ಪಾಂಡೆ ಉತ್ತರ ಪ್ರದೇಶ ಸರ್ಕಾರದಲ್ಲಿ ಹಣಕಾಸು, ಹೆಚ್ಚುವರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ತಾಯಿ ಶ್ರೀಮತಿ ಅಮಿತಾ ಪಾಂಡೆ ಸಂಸ್ಕೃತ ಮತ್ತು ಹಿಂದಿ ಪ್ರಾಧ್ಯಾಪಕರು.

ಮೇಜರ್​ ಶ್ವೇತಾ ಪಾಂಡೆ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಭಾಷಣ, ಚರ್ಚೆ ಸೇರಿದಂತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ 75 ಪದಕ ಮತ್ತು 250 ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.