ETV Bharat / bharat

ಯುವತಿ ಅಪಹರಣ... ಬಂದೂಕಿನಿಂದ ಬೆದರಿಸಿ ಕಾಮುಕರಿಂದ ಗ್ಯಾಂಗ್​ ರೇಪ್​​​!

ಯುವತಿವೋರ್ವಳನ್ನು ಅಪಹರಣ ಮಾಡಿರುವ ಮೂವರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಹೀನ ಕೃತ್ಯ ಗುಜರಾತ್​​ನ ರಾಜ್​ಕೋಟ್​ನಲ್ಲಿ ನಡೆದಿದೆ.

Dalit woman gang-raped at gunpoint in Gujarat

author img

By

Published : Feb 27, 2020, 11:07 PM IST

ರಾಜ್​​ಕೋಟ್​​(ಗುಜರಾತ್​): 19 ವರ್ಷದ ಯುವತಿವೋರ್ವಳನ್ನು ಅಪಹರಿಸಿದ್ದ ಮೂವರು ಕಾಮುಕರು ಆಕೆಯನ್ನ ಬೆದರಿಸಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ರಾಜ್​​ಕೋಟ್​​ನಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲವೆಂದು ತಿಳಿದುಬಂದಿದೆ.

ಯುವತಿಯನ್ನು ಅಪಹರಣ ಮಾಡಿದ್ದ ಕಾಮುಕರು ಕಾರಿನಲ್ಲಿ ಹಾಕಿಕೊಂಡು ಬಂದೂಕಿನಿಂದ ಬೆದರಿಸಿ ಈ ಅಟ್ಟಹಾಸ ಮೆರೆದಿದ್ದಾರೆ. ಮನೆಯಲ್ಲಿ ಯುವತಿ ಒಬ್ಬಳೇ ಇದ್ದಾಗ ಒಳಗೆ ನುಗ್ಗಿದ್ದ ಕಾಮುಕರು ಆಕೆಯನ್ನ ಕಿಡ್ನಾಪ್​ ಮಾಡಿದ್ದರು. ನಂತರ ಆಕೆಯ ಮೇಲೆ ದುಷ್ಕೃತ್ಯವೆಸಗಿ ಮತ್ತೆ ಮನೆ ಹತ್ತಿರ ಬಿಟ್ಟು ಪರಾರಿಯಾಗಿದ್ದಾರೆ. ಇದಾದ ಬಳಿಕ ಸಂತ್ರಸ್ತೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅಲ್ಲದೆ, ಪೊಲೀಸ್​ ಠಾಣೆಗೆ ತೆರಳಿ ತನ್ನ ಮೇಲೆ ದುಷ್ಕೃತ್ಯವೆಸಗಿರುವವರ ವಿರುದ್ಧ ದೂರು ನೀಡಿದ್ದಾಳೆ. ಆದರೆ ಇಲ್ಲಿಯವರೆಗೆ ಯಾವುದೇ ಆರೋಪಿಯ ಬಂಧನವಾಗಿಲ್ಲ.

ಪ್ರಕರಣ ದಾಖಲಿಸಿಕೊಂಡಿರುವ ರಾಜ್​ಕೋಟ್​ ಎಸ್​ಪಿ ಬಲರಾಮ್​​ ಮಿನಾ ಪ್ರತಿಕ್ರಿಯಿಸಿದ್ದು, ಯುವತಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿದ್ದು, ಕೃತ್ಯವೆಸಗಿದವರ ಬಗ್ಗೆ ನಮಗೆ ಮಾಹಿತಿ ಗೊತ್ತಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಇನ್ನು ಕೃತ್ಯವೆಸಗಿರುವ ಮೂವರು ಅದೇ ಗ್ರಾಮದವರಾಗಿದ್ದು, ಬಿಜೆಪಿ ಸ್ಥಳೀಯ ಮುಖಂಡ ಅಮಿತ್​​ ಪಾಂಡಾಲ್​​ನ ಗೆಳೆಯರು ಎಂದು ಹೇಳಲಾಗ್ತಿದೆ. ಈ ಕೃತ್ಯದಲ್ಲಿ ವಿಪುಲ್​​ ಶೇಖಾನಂದನ್​, ಶಾಂತಿ ಪಾಂಡಾಲ್​ ಹಾಗೂ ಅಮಿತ್​ ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ ಅಮಿತ್​ ಕಾಂಗ್ರೆಸ್​ನಿಂದ ತಾಲೂಕು ಪಂಚಾಯತ್​ ಸದಸ್ಯನಾಗಿ ಆಯ್ಕೆಯಾಗಿದ್ದ. ಇದಾದ ಬಳಿಕ ಬಿಜೆಪಿ ಸೇರಿಕೊಂಡಿದ್ದಾನೆ. ಅಮಿತ್​​ ಪಾಂಡಾಲ್​​ನ ತಾಯಿ ಗ್ರಾಮದಲ್ಲಿ ಸರ್​ಪಂಚ್​ ಆಗಿ ಕೆಲಸ ಮಾಡುತ್ತಿದ್ದು, ಇದೇ ಕಾರಣಕ್ಕಾಗಿ ಅವರ ಮಗನನ್ನು ಬಂಧಿಸಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.