ETV Bharat / bharat

ಒಂದೇ ದಿನ 17 ಱಲಿ, 2 ರೋಡ್ ಶೋ: ಲಾಲೂ ದಾಖಲೆ ಬ್ರೇಕ್ ಮಾಡಿದ ಮಗ ತೇಜಸ್ವಿ ಯಾದವ್

ಒಂದೇ ದಿನ ಅತಿ ಹೆಚ್ಚು ಚುನಾವಣಾ ಱಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ತನ್ನ ತಂದೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಈ ಹಿಂದೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಒಂದೇ ದಿನದಲ್ಲಿ 16 ಸಾರ್ವಜನಿಕ ಸಭೆಗಳನ್ನು ನಡೆಸಿದ್ದು ಈವರೆಗಿನ ದಾಖಲೆಯಾಗಿತ್ತು.

author img

By

Published : Nov 2, 2020, 7:20 AM IST

Updated : Nov 2, 2020, 7:42 AM IST

Tejashwi Yadav
ಲಾಲೂ ದಾಖಲೆ ಬ್ರೇಕ್ ಮಾಡಿದ ಮಗ ತೇಜಸ್ವಿ ಯಾದವ್

ಪಾಟ್ನಾ (ಬಿಹಾರ): ಮಹಾಘಟಬಂಧನ್​ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಒಂದೇ ದಿನದಲ್ಲಿ ಹೆಚ್ಚು ಚುನಾವಣಾ ಱಲಿಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ತಂದೆ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಎರಡನೇ ಹಂತದ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ತೇಜಸ್ವಿ ಯಾದವ್ ಶನಿವಾರ 17 ಱಲಿಗಳು ಮತ್ತು ಎರಡು ರೋಡ್ ಶೋಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಹಿಂದೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಒಂದೇ ದಿನದಲ್ಲಿ 16 ಸಾರ್ವಜನಿಕ ಸಭೆಗಳನ್ನು ನಡೆಸಿದ್ದರು.

"ದೈಹಿಕವಾಗಿ ಮತ್ತು ಮಾನಸಿಕವಾಗಿ ನಾನು ನಿತೀಶ್ ಕುಮಾರ್ ಅವರಂತೆ ದಣಿದಿಲ್ಲ. ಜನರು ನನಗೆ ಹೆಚ್ಚು ಪ್ರೀತಿ, ಬೆಂಬಲ ಮತ್ತು ಶಕ್ತಿಯನ್ನು ನೀಡುತ್ತಿದ್ದಾರೆ. ಅದು ನನ್ನನ್ನು ಪ್ರೇರೇಪಿಸುತ್ತದೆ. ಇನ್ನೊಂದು ಬದಿಯಲ್ಲಿ, ಎನ್‌ಡಿಎ 30 ಹೆಲಿಕಾಪ್ಟರ್​ಗಳನ್ನು ಬಳಸಿಕೊಂಡು ಪ್ರಚಾರ ನಡೆಸುತ್ತಿದೆ" ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ತೇಜಸ್ವಿ ಶನಿವಾರ ಬೆಳಗ್ಗೆ 10:05 ಕ್ಕೆ ಸೀತಾಮರ್ಹಿಯ ಬ್ಲಾಕ್‌ನಲ್ಲಿ ತಮ್ಮ ಮೊದಲ ಱಲಿ ನಡೆಸಿದ್ರು. ವೈಶಾಲಿ ಜಿಲ್ಲೆಯ ಬಿಡುಪುರ ಬ್ಲಾಕ್‌ನಲ್ಲಿ ಸಂಜೆ 4: 45 ಕ್ಕೆ ಕೊನೆಯ ಱಲಿಯಲ್ಲಿ ಪಾಲ್ಗೊಂಡಿದ್ದರು.

Last Updated : Nov 2, 2020, 7:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.