ನವದೆಹಲಿ: ಶತ್ರು ರಾಷ್ಟ್ರ ಪಾಕಿಸ್ತಾನದಲ್ಲಿ ನೆಲದಲ್ಲಿ ಬಿದ್ದು 60 ಗಂಟೆಗಳ ಬಳಿಕ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ 'ಯೂನಿಟ್ ಸಿಟೇಷನ್ ಅವಾರ್ಡ್'ಗೆ ಪಾತ್ರರಾಗಿದ್ದಾರೆ.
ಪಾಕಿಸ್ತಾನದ ಎಫ್- 16 ಯುದ್ಧ ವಿಮಾನಗಳು ಭಾರತ ಗಡಿ ಪ್ರವೇಶ ಮಾಡಿ ದಾಳಿ ನಡೆಸಲು ಮುಂದಾಗಿದ್ವು. ಈ ವೇಳೆ ಅಭಿನಂದನ್ ವರ್ಧಮಾನ್ ಮಿಗ್-21 ಯುದ್ಧ ವಿಮಾನ ಮೂಲಕ ಅದನ್ನು ಹಿಮ್ಮೆಟ್ಟಿಸಿದ್ದರು. ಘಟನೆಯಲ್ಲಿ ಅಭಿನಂದನ್ ಪಾಕ್ ನೆಲದಲ್ಲಿ ಏರ್ ಬ್ಯಾಗ್ನಿಂದ ಬಿದ್ದು, 60 ಗಂಟೆಗಳ ಕಾಲ ಶತ್ರು ರಾಷ್ಟ್ರದಲ್ಲಿದ್ದು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದರು.
ಅಂಭಿನಂದನ್ ಸಾಹಸ ಕಾರ್ಯಕ್ಕೆ 2019ರ ಸ್ವಾತಂತ್ರ್ಯ ದಿನಾಚರಣೆಯ ವೇಳೆ 'ವೀರಚಕ್ರ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಈಗ ಸೇನೆಯ ಸ್ಕ್ವಾಡ್ರನ್ ಯೂನಿಟ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಾಯು ಸೇನೆಯ ಏರ್ ಮಾರ್ಷಲ್ ಆರ್ ಕೆಎಸ್ ಬದೌರಿಯಾ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಸತೀಶ್ ಪವಾರ್ ಅವರಿಂದ ಅಭಿನಂದನ್ ಅವರು ಸ್ವೀಕರಿಸುವರು.
ಫೆಬ್ರುವರಿ 27ರಂದು ಡಾಗ್ ಫೈಟ್ನಲ್ಲಿ ಭಾರತೀಯ ಗಡಿ ನಿಯಂತ್ರಣ ರೇಖೆ ದಾಟಿ ಬಂದ ಪಾಕ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲು ಅಭಿನಂದನ್ ಅವರಿಗೆ ಮಿಂಟಿ ಮಾರ್ಗದರ್ಶನ ನೀಡಿದ ಲೀಡರ್ ಮಿಂಟಿ ಅಗರ್ವಾಲ್ ಅವರಿಗೂ ಯುನಿಟ್ ಸಿಟೇಷನ್ ಪ್ರಶಸ್ತಿ ನೀಡಲಾಗಿದೆ.