ETV Bharat / bharat

ಪಾಟ್ನಾ ನಗರವನ್ನು ಮತ್ತೆ ಮುಳುಗಿಸಲಿದೆಯೇ ಮಳೆ?: ಜನ, ಜನಪ್ರತಿನಿಧಿಗಳು ಹೇಳುವುದೇನು?

ಕಳೆದ ವರ್ಷ ಬಿಹಾರದ ಪಾಟ್ನಾ ನಗರವನ್ನು ಮುಳುಗಿಸಿ 40 ಜನರ ಸಾವಿಗೆ ಕಾರಣವಾಗಿದ್ದ ಭೀಕರ ಪ್ರವಾಹದ ಕರಿಛಾಯೆ ಮಾಸುವ ಮುನ್ನವೇ ಮತ್ತೆ ಮಳೆ ಪ್ರಾರಂಭವಾಗಿದೆ. ಹಾಗಾದರೆ, ಈ ಬಾರಿ ಪ್ರವಾಹ ಉಂಟಾದರೆ ಎದುರಿಸಲು ಸರ್ಕಾರ ತಯಾರಿದೆಯೆ? ಇದಕ್ಕಾಗಿ ಮಾಡಿಕೊಂಡ ಸಿದ್ಧತೆಗಳೇನು? ಈ ಬಗ್ಗೆ ನಗರದ ಜನ, ಜನಪ್ರತಿನಿಧಿಗಳು ಏನು ಹೇಳುತ್ತಾರೆ? ಈ ಕುರಿತ ವಿಶೇಷ ವರದಿ ಇಲ್ಲಿದೆ.

Will rains sink Patna again?
ಪಾಟ್ನಾ ನಗರವನ್ನು ಮತ್ತೆ ಮುಳುಗಿಸಲಿದೆಯೇ ಮಳೆ..?
author img

By

Published : Jun 14, 2020, 10:56 AM IST

ಪಾಟ್ನಾ (ಬಿಹಾರ): ಮುಂಗಾರು ಆಗಮನವಾಗುತ್ತಿದ್ದಂತೆ ಪಾಟ್ನಾ ನಗರದ ನಿವಾಸಿಗಳು ಚಿಂತಾಕ್ರಾಂತರಾಗಿದ್ದು, ಕಳೆದ ವರ್ಷ 40 ಜನರನ್ನು ಬಲಿ ತೆಗದುಕೊಂಡ ಭೀಕರ ಪ್ರವಾಹವನ್ನು ನೆನೆದು ಭಯಭೀತರಾಗಿದ್ದಾರೆ.

ಜನರ ಬದುಕನ್ನು ನುಚ್ಚುನೂರು ಮಾಡಿದ ಭೀಕರ ಪ್ರವಾಹ ಊರುಗಳನ್ನೇ ಮುಳುಗಿಸಿತ್ತು. ಜನರು ಹೊರ ಹೋಗಲಾಗದೆ ಗೃಹ ಬಂಧನದಲ್ಲಿದ್ದರು. ಈ ಪ್ರವಾಹ ಪರಿಸ್ಥಿತಿಯು ಅಭಿವೃದ್ದಿಯ ಹೆಸರು ಹೇಳಿಕೊಂಡು ಜನರ ಕಣ್ಣಿಗೆ ಮಣ್ಣೆರಚಿ ಪೊಳ್ಳು ಭರವಸೆಗಳನ್ನು ನೀಡುತ್ತಿದ್ದ ಸರ್ಕಾರ, ಜನಪ್ರತಿನಿಧಿಗಳ ಬಣ್ಣವನ್ನು ಸ್ಪಷ್ಟವಾಗಿ ಬಯಲು ಮಾಡಿತ್ತು. ಪ್ರವಾಹ ಬಂದು ಹೋಗಿ 8 ತಿಂಗಳು ಕಳೆದಿದೆ. ಇದೀಗ ಮತ್ತೆ ಮಳೆ ಆರಂಭವಾಗಿದೆ. ಹಾಗಾದರೆ, ಕಳೆದ ವರ್ಷದ ಪ್ರವಾಹದಿಂದ ಸರ್ಕಾರ ಏನು ಪಾಠ ಕಳಿತಿದೆ? ಈ ವರ್ಷ ಪ್ರವಾಹ ಬಾರದಂತೆ ತಡೆಗಟ್ಟಲು ಕೈಗೊಂಡ ಕ್ರಮಗಳೇನು?

ಪಾಟ್ನಾ ಬಟ್ಟಲಿನಂತಿರುವುದೇ ಪ್ರವಾಹಕ್ಕೆ ಕಾರಣವೇ?:

ತಜ್ಞರ ಪ್ರಕಾರ, ಪಾಟ್ನಾ ಒಂದು ಬಟ್ಟಲಿನಂತಿದೆ. ಸುತ್ತಲೂ ಎತ್ತರದ ಪ್ರದೇಶಗಳು ಮತ್ತು ನಡುವೆ ತಗ್ಗು ಪ್ರದೇಶಗಳಿವೆ. ತಗ್ಗು ಪ್ರದೇಶಗಳಾದ ರಾಜೇಂದ್ರ ನಗರ, ಕಂಕರ್‌ಬಾಗ್, ಬಿಯೂರ್ ಮತ್ತು ಕುಮ್ರಾರ್ ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಲು ಇದು ಕಾರಣ. ಕಳೆದ ವರ್ಷದ ಭೀಕರ ಪ್ರವಾಹದ ಸಂದರ್ಭದಲ್ಲಿ ಸ್ವತಃ ಉಪಮುಖ್ಯಮಂತ್ರಿ ಸುಶೀಲ್ ಮೋದಿಯವರು ರಾಜೇಂದ್ರ ನಗರದ ತಮ್ಮ ಖಾಸಗಿ ನಿವಾಸದಲ್ಲಿ ಹಲವು ದಿನ ಸಿಲುಕಿಕೊಂಡಿದ್ದರು. ಬಳಿಕ ಅವರನ್ನು ಮತ್ತು ಕುಟುಂದವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಅದೇ ರೀತಿ ಅನೇಕ ಮಂತ್ರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಹಲವು ದಿನಗಳವರೆಗೆ ಮನೆಯಿಂದ ಹೊರ ಬರಲಾರದೆ ಸಿಲುಕಿಕೊಂಡಿದ್ದರು.

ಜನರನ್ನು ಕಂಗೆಡಿಸಿದ ಭೀಕರ ಪ್ರವಾಹ ಪರಿಸ್ಥಿತಿಗೆ ರಾಜ್ಯ ಸರ್ಕಾರ ಮತ್ತು ನಗರ ಪಾಲಿಕೆ ನೈಸರ್ಗಿಕ ವಿಪತ್ತಿನ ಹೆಸರನ್ನು ನೀಡಿ ಕೈ ತೊಳೆದುಕೊಂಡಿರಬಹುದು. ಆದರೆ, ಸರ್ಕಾರದ ಈ ವಾದವನ್ನು ಜನರು ಒಪ್ಪಲು ತಯಾರಿಲ್ಲ. ಏಕೆಂದರೆ, ಅವರು ಈ ಮೊದಲು ಮಳೆ ಬಂದಿಲ್ಲವೆ? ಎಂದು ಅವರು ಪ್ರಶ್ನಿಸುತ್ತಾರೆ. ಜೊತೆಗೆ ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದೇ ದುರ್ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ.

ಈ ವರ್ಷ ಕಳೆದ ಬಾರಿಯಂತೆ ಆಗುವುದಿಲ್ಲ ಎನ್ನುತ್ತಾರೆ ಸಚಿವರು:

ಯಾವುದೇ ಒಳಚರಂಡಿ ವ್ಯವಸ್ಥೆಗೆ ನಕ್ಷೆಯು ಅತ್ಯಂತ ನಿರ್ಣಾಯಕವಾಗಿದೆ. ಈ ನಕ್ಷೆಯ ಆಧಾರದ ಮೇಲೆ ಚರಂಡಿಗಳ ನಿಖರವಾದ ಮಾಹಿತಿಯನ್ನು ಪಡೆಯಲಾಗುತ್ತದೆ. ನಗರದ ಚರಂಡಿಗಳ ಜಾಲದ ನಕ್ಷೆಯು 2017 ರಲ್ಲಿ ಕಳೆದುಹೋಗಿದೆ ಎಂದು ಹಲವಾರು ಜನರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ನಗರಾಭಿವೃದ್ದಿ ಸಚಿವ ಸುರೇಶ್ ಶರ್ಮಾ ನಿರಾಕರಿಸಿದ್ದು, ಈ ಬಾರಿ ಕಳೆದ ವರ್ಷದಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ ಎನ್ನುತ್ತಾರೆ.

ಹಾಗಾದರೆ, ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆಯೇ?

ಕಳೆದ ವರ್ಷದ ದುರ್ಘಟನೆಯ ಬಳಿಕ ಜನ ಬದುಕು ಕಟ್ಟಿಕೊಳ್ಳುತ್ತಿದ್ದಾರಷ್ಟೆ. ಈ ನಡುವೆ ಮತ್ತೆ ಮಳೆ ಪ್ರಾರಂಭವಾಗಿದೆ. ಈ ಬಾರಿ ಪ್ರವಾಹ ಉಂಟಾದರೆ ಎದುರಿಸಲು ಸರ್ಕಾರ ಸಿದ್ಧವಾಗಿದೆಯೇ? ಎಂದರೆ ಖಂಡಿತವಾಗಿಯೂ ಇಲ್ಲ. ಏನಾದರೂ ದುರ್ಘಟನೆ ಸಂಭವಿಸಿದರೆ ಅದಕ್ಕೊಂಡು ಕಾರಣ ನೀಡಿ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪಾರಾಗುತ್ತಾರೆ. ಕೊನೆಗೆ ಬದುಕು ಕಳೆದುಕೊಳ್ಳುವುದು ಸಾಮಾನ್ಯ ಜನರಷ್ಟೇ.!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.