ETV Bharat / bharat

ವಿಶೇಷ ಅಂಕಣ: ಭಾರತ ಇರಾನ್‌ ಸಂಬಂಧಕ್ಕೆ ಹುಳಿ ಹಿಂಡಲಿದೆಯಾ ಅಮೆರಿಕ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಷಿಪಣಿ ದಾಳಿಯ ಮೂಲಕ 62 ವರ್ಷದ ಜನರಲ್ ಖಾಸೀಂ ಸುಲೇಮಾನಿ ಅವರ ಹತ್ಯೆಗೆ ಶುಕ್ರವಾರ ಮುಂಜಾನೆ ಆದೇಶಿಸಿದ್ದು, ಟ್ರಂಪ್‌ ಅವರ ಈ ನಿರ್ಧಾರದಿಂದ ಇರಾನಿನ ಸರ್ಕಾರವು ಕೋಪಗೊಂಡಿದೆ. ಹೀಗಾಗಿ ಟ್ರಂಪ್‌ ಕ್ರಮಕ್ಕೆ ಇರಾನ್‌ ಪ್ರತೀಕಾರ ತೀರಿಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

author img

By

Published : Jan 5, 2020, 1:29 PM IST

ಅಮೆರಿಕ
ಅಮೆರಿಕ

ಸುಮಾರು 22 ವರ್ಷಗಳ ಹಿಂದೆ ಇರಾನ್‌ನ ಕ್ರಾಂತಿಕಾರಿ ಪಡೆ 'ಇಸ್ಲಾಮಿಕ್‌ ರಿವಲ್ಯೂಷನರಿ ಗಾರ್ಡ್ ಕೋರ್‌ (ಐಆರ್‌ಜಿಸಿ)' ಕ್ವಾಡ್ಸ್‌ ಫೋರ್ಸ್‌ ಘಟಕದ ಕಮಾಂಡರ್ ಆಗಿ ಅನೇಕ ಸವಾಲುಗಳನ್ನು ಎದುರಿಸಿದ ನಂತರ ತನ್ನನ್ನು ಹೀಗೆ ಕೊಲ್ಲಬಹುದೆಂದು ಸುಲೇಮಾನಿ ಎಂದಿಗೂ ಯೋಚಿಸಿರಲಿಲ್ಲ. ಯಾರ ವಿರುದ್ಧ ತಾನು ಹೋರಾಡುತ್ತಿದ್ದೆನೋ ಅವರ ವಿರುದ್ಧದ ಅಮೇರಿಕದ ದಾಳಿಯನ್ನು ಸುಲೇಮಾನಿ ಆನಂದಿಸುತ್ತಿದ್ದರು. ಆಪರೇಷನ್ ಡೆಸರ್ಟ್ ಎಂಬ ಬಿರುಗಾಳಿಯಂತಹ ಸೇನಾ ಆಕ್ರಮಣದಿಂದ ಇರಾಕ್ ಅನ್ನು ಆಕ್ರಮಿಸಿಕೊಂಡ ನಂತರ ಅಮೆರಿಕ ಸುಲೇಮಾನಿ ಮೇಲೆ ದಾಳಿ ಮಾಡದಿರಲು ಕೆಲವು ಕಾರಣಗಳಿದ್ದವು. ಸುಲೇಮಾನಿಯ ಈ ಕರಾಳ ಹತ್ಯೆಯ ಹಿಂದಿನ ನಿಜವಾದ ಕಾರಣವನ್ನು ಕಂಡುಹಿಡಿಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಸ್ಪಷ್ಟವಾಗಿ ಹೇಳುವುದಾದರೆ, ಇರಾನ್ ಅನೇಕ ದೇಶಗಳೊಂದಿಗೆ ರೂಪಿಸಿಕೊಂಡ ದ್ವಿಪಕ್ಷೀಯ ಮತ್ತು ಆರ್ಥಿಕ ಸಂಬಂಧಗಳ ಮೇಲೆ ಈ ಹತ್ಯೆ ದುಷ್ಪರಿಣಾಮ ಬೀರಬಹುದು ಎಂಬುದೇ ಇದಕ್ಕೆ ಬಲವಾದ ಕಾರಣ. ಭಾರತವೂ ಈ ಪರಿಣಾಮದಿಂದ ಹೊರತಾಗಿಲ್ಲ.

ಇರಾನ್, ಭಾರತವನ್ನು ತನ್ನ ವಿಸ್ತೃತ ನೆರೆಹೊರೆಯ ಸದಸ್ಯ ಎಂದು ಭಾವಿಸಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಚೆನ್ನಾಗಿದೆ. ಇರಾನ್‌ನ ಆಗ್ನೇಯ ಭಾಗದಲ್ಲಿರುವ ಮಕ್ರಾನ್ ಕರಾವಳಿಯಲ್ಲಿನ ಚಬಹಾರ್ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ಹೂಡಿಕೆ ಮಾಡಲು ಭಾರತ ಪ್ರಯತ್ನಿಸುತ್ತಿದೆ. ಹೀಗಾಗಿ ಅಮೇರಿಕ ಪ್ರೇರೇಪಿತ ಈ ಹತ್ಯೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಕುರಿತು ಭಾರತೀಯ ರಾಜತಾಂತ್ರಿಕ ವಲಯದಲ್ಲಿ ಒಂದು ಬಗೆಯ ಗೊಂದಲವಿದೆ. ಇರಾನ್ ಅಥವಾ ವಾಷಿಂಗ್ಟನ್ ಎರಡನ್ನೂ ವಿರೋಧಿಸಲು ಸಾಧ್ಯವಿಲ್ಲದ ಕಾರಣ ಭಾರತದ ಸ್ಥಿತಿಯೀಗ ಮೊಟ್ಟೆಯ ಮೇಲಿನ ನಡಿಗೆಯಂತಾಗಿದೆ. ಹೀಗಾಗಿ ಭಾರತ, ಇರಾನಿನ ಕ್ರಾಂತಿಕಾರಿ ಸೇನಾಧಿಕಾರಿಯ ಮರಣವನ್ನು ಖಂಡಿಸದೆ ಆ ಕುರಿತ ವಿಷಯವನ್ನು ಅರಿತುಕೊಳ್ಳಲು ಜಾರಿಕೆಯ ನಿರ್ಧಾರ ತೆಗೆದುಕೊಂಡಿದೆ. ಭಾರತದ ಈ ನಿರ್ಧಾರ ಅಮೆರಿಕವನ್ನು ಸಂತೋಷಪಡಿಸಬಹುದು. ಆದರೆ ಚಬಹಾರ್‌ನಲ್ಲಿನ ಶಾಹಿದ್ ಬೆಹೆಸ್ತಿ ಬಂದರಿಗೆ 10 ವರ್ಷಗಳ ನಿರ್ವಹಣಾ ಗುತ್ತಿಗೆ ನೀಡಲು ಮುಂದಾಗಿರುವ ಟೆಹ್ರಾನ್ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ತೈಲ ಸಂಪದ್ಭರಿಯತ ಇರಾನ್‌ ಜತೆಗೆ ಭಾರತದ ವಹಿವಾಟು ವೃದ್ಧಿಗೆ ಈ ಒಪ್ಪಂದ ಬಹಳ ಲಾಭದಾಯಕ. ಇಲ್ಲಿನ ಸಮೀಪದ ಪಾಕಿಸ್ತಾನದ ಬಲೂಚಿ ಬಂದರು ಗ್ವಾದರ್‌ನಲ್ಲಿ ಹೆಚ್ಚು ಹೂಡಿಕೆ ಮಾಡಿರುವ ನಮ್ಮ ನೆರೆಯ ರಾಷ್ಟ್ರ ಚೀನಾ, ಚಬಹಾರ್ ಅನ್ನು ಗುತ್ತಿಗೆ ಪಡೆಯಲು ಉತ್ಸುಕವಾಗಿತ್ತು. ಜೊತೆಗೆ ಆ ನಿಟ್ಟಿನಲ್ಲಿ ಯತ್ನವನ್ನು ನಡೆಸಿತ್ತು. ಆದರೆ ಅದನ್ನು ಭಾರತಕ್ಕೆ ನೀಡಲು ಇರಾನ್‌ಗೆ ತನ್ನದೇ ಆದ ಕಾರ್ಯತಂತ್ರದ ಕಾರಣಗಳಿವೆ. ಓಮನ್ ಸಮುದ್ರದಲ್ಲಿ ನೆಲೆಗೊಂಡಿರುವ ಇರಾನಿನ ಬಂದರು ಭಾರತದ ಮೊದಲ ಸಾಗರೋತ್ತರ ಹೂಡಿಕೆಯಾಗಿದ್ದು, ಇದು ಪಾಕಿಸ್ತಾನವನ್ನು ಕಡೆಗಣಿಸಲು ಅನುವು ಮಾಡಿಕೊಡುತ್ತದೆ ಮತ್ತು ಮಧ್ಯ ಏಷ್ಯಾದೊಂದಿಗೆ ತನ್ನ ಭೂ ಮಾರ್ಗವನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತದೆ. ಹೀಗಾಗಿ ಭಾರತವು ಸುಲೇಮಾನಿ ಹತ್ಯೆಯ ಸಮಸ್ಯೆಯನ್ನು ಈ ನಿಟ್ಟಿನಲ್ಲಿಯೂ ಆಲೋಚಿಸಬೇಕಾಗುತ್ತದೆ.

ಬೆಚ್ಚಗಿನ ನೀರಿನ ಬಂದರುವಿಗಾಗಿ ರಷ್ಯಾದ ತ್ಸಾರ್ ಪ್ರದೇಶವನ್ನು ಅನ್ವೇಚಿಸುತ್ತಿದ್ದ ದಿನಗಳಿಂದಲೂ ಅನೇಕ ದಾಳಿಕೋರರನ್ನು, ಅನ್ವೇಷಿಗರನ್ನು ಹೊಂದಿರುವ ಚಬಹಾರ್ ಬಂದರು, ಅಲ್-ಬೆರುನಿಯ ಪ್ರವಾಸ ಬರಹಗಳಲ್ಲಿ ಹಿಂದೂಸ್ತಾನದ ಪ್ರಾರಂಭದ ಹಂತವಾಗಿ ಉಲ್ಲೇಖಿಸಲ್ಪಟ್ಟಿದೆ. ನಿರೀಕ್ಷೆಯಂತೆ, ಈ ಬಂದರು ನಗರದಲ್ಲಿ ಭಾರತೀಯ ಹೂಡಿಕೆ ಸಹಜವಾಗಿ ಹೊಂದಿಕೊಳ್ಳುತ್ತದೆ. ಇಲ್ಲಿನ ಜನರು ಹಿಂದೂಸ್ತಾನದ ಭಾಷೆಗಳನ್ನು ಸುಲಭವಾಗಿ ಮಾತನಾಡುವುದನ್ನು ಮತ್ತು ಭಾರತದ ದಾರಿಯನ್ನು ಸಂತೋಷದಿಂದ ತೋರಿಸುತ್ತಿದ್ದರು ಎಂದು ಚಬಹಾರ್ ಭೇಟಿಯ ಸಮಯದಲ್ಲಿಯೇ ಅಲ್ಬೆರುನಿ ಕಂಡುಕೊಂಡಿದ್ದರು. ಅದನ್ನು ತಮ್ಮ ಪ್ರವಾಸ ಬರಹದಲ್ಲಿಯೂ ಉಲ್ಲೇಖಿಸಿದ್ದಾರೆ. ಪಾಕಿಸ್ತಾನದ ಗಡಿಯ ಸಮೀಪದಲ್ಲಿ ಭಾರತೀಯ ಉಪಸ್ಥಿತಿಯು ಇರಬೇಕೆಂದು ಇರಾನ್ ರಾಜತಾಂತ್ರಿಕತೆ ಅಪೇಕ್ಷಿಸಿದೆ. ಪಾಕಿಸ್ತಾನ ಸರಕಾರವು ಗೂಢಚಾರನೆಂದು ಆರೋಪಿಸಲ್ಪಟ್ಟ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಚಬಹಾರ್‌ನಿಂದ ಬಂಧಿಸಿ ಕರೆದುಕೊಂಡು ಹೋಗಲಾಗಿತ್ತು.

ಚಬಹಾರ್ ಯೋಜನೆಯಲ್ಲಿ ಎರಡು ಅಂಶಗಳಿವೆ. ಒಂದು ಬಂದರು ಮತ್ತು ಇನ್ನೊಂದು ಇರಾನ್ ಮತ್ತು ಅಫ್ಘಾನಿಸ್ತಾನ ನಗರಗಳಿಗೆ ಬಂದರನ್ನು ಸಂಪರ್ಕಿಸುವ ರಸ್ತೆ ಮತ್ತು ರೈಲು ಜಾಲ. ಭಾರತವು ಪಾಕಿಸ್ತಾನವನ್ನು ಬೈಪಾಸ್‌ ಮಾಡಿ ಅಪ್ಘಾನಿಸ್ತಾನಕ್ಕೆ ಸರಕುಗಳನ್ನು ಸಾಗಿಸಬಹುದು. ಅರಬ್ಬಿ ಸಮುದ್ರದಲ್ಲಿ ಚೀನಾದ ಪ್ರಾಬಲ್ಯವನ್ನು ಎದುರಿಸಲು ಭಾರತಕ್ಕೆ ನೆರವಾಗಲಿದೆ. ಇರಾನ್‌ಗೆ ಭಾರತದಿಂದ ಅಕ್ಕಿ, ಸಕ್ಕರೆ, ಕಬ್ಬಿಣದ ಅದಿರು ಇತ್ಯಾದಿಯನ್ನು ಆಮದು ಮಾಡಿಕೊಳ್ಳಲು ಕೂಡ ಈ ಬಂದರು ಅನುಕೂಲ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ 2016 ರಲ್ಲಿನ ಇರಾನ್‌ ಭೇಟಿ ವೇಳೆ ಇರಾನ್‌ ಅಧ್ಯಕ್ಷ ಹಸನ್ ರೂಹಾನಿ ಮತ್ತು ಅಫಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು. _P5 + 1 ದೇಶದೊಂದಿಗಿನ ಈ ಪರಮಾಣು ಒಪ್ಪಂದವು, ಇತರ ದೇಶಗಳೊಂದಿಗೆ ವ್ಯಾಪಾರ ಮತ್ತು ವಹಿವಾಟಿಗೆ ಅನುಕೂಲವಾಗುವಂತೆ ಬ್ಯಾಂಕಿಂಗ್ ಜಾಲದೊಂದಿಗೆ ಟೆಹ್ರಾನ್‌ಗೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ ದೊರೆಕಿಸಿಕೊಡಲು ಅನುವು ಮಾಡಿಕೊಡುತ್ತದೆ ಎಂಬ ಊಹೆಯ ಮೇರೆಗೆ ಈ ಒಪ್ಪಂದವನ್ನು ರೂಪಿಸಲಾಯಿತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದು, ಇರಾನ್ ಮೇಲೆ ಮತ್ತೆ ನಿರ್ಬಂಧ ಹೇರಿದ ನಂತರ ಇರಾನ್ ಈ ಒಪ್ಪಂದದಿಂದ ಹಿಂದೆ ಸರಿಯಿತು. ಆಗ ಈ ಊಹೆಯನ್ನು ಪ್ರಶ್ನಿಸಲಾಯಿತು. ಬಂದರು ಮತ್ತು ರೈಲ್ವೆ ಜಾಲವನ್ನು ಅಪೇಕ್ಷಿತ ವೇಗದಲ್ಲಿ ನಿರ್ಮಿಸಲು ಸಾಧ್ಯವಾಗದ ಕಾರಣ ನಿರ್ಬಂಧಗಳನ್ನು ವಾಪಾಸ್‌ ಪಡೆಯುವುದು ಮತ್ತು ಇರಾನ್‌ನೊಂದಿಗೆ ವಹಿವಾಟು ನಡೆಸಲು ಬ್ಯಾಂಕುಗಳು ನಿರಾಕರಿಸುವುದು ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಟೆಹ್ರಾನ್ ಜೊತೆಗಿನ ಸಂಬಂಧದ ಕುರಿತು ಅಮೆರಿಕ ಏನು ಯೋಚಿಸಿದೆ ಎಂಬುದನ್ನು ಕಂಡುಹಿಡಿಯಲು ಭಾರತ ಹೆಚ್ಚಿನ ಸಮಯವನ್ನು ವ್ಯಯಿಸಿದೆ. ಅಫ್ಘಾನಿಸ್ತಾನದ ಪುನರ್ನಿರ್ಮಾಣಕ್ಕೆ ನಿರ್ಣಾಯಕವೆಂದು ಗ್ರಹಿಸಿದ್ದರಿಂದ ಚಬಹಾರ್‌ಗೆ ಅಮೆರಿಕ ವಿನಾಯಿತಿ ನೀಡಿತು, ಆದರೆ ಯೋಜನೆಯ ಕುರಿತು ಭಾರತದ ಅನುಮಾನಗಳು ಕಡಿಮೆಯಾಗಲಿಲ್ಲ. ವಾಷಿಂಗ್ಟನ್‌ನಲ್ಲಿ ನಡೆದ 2 + 2 ಸಭೆಯಲ್ಲಿ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಲಿಖಿತವಾಗಿ ಕೆಲವು ಪರವಾನಗಿಗಳನ್ನು ಪಡೆಯುವಲ್ಲಿ ಯಶಸ್ವಿಯಾದರು, ಇದು ಭಾರತಕ್ಕೆ 85 ಮಿಲಿಯನ್ ಮೌಲ್ಯದ ಕೆಲವು ಉಪಕರಣಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿತು. ವ್ಯಾಪಾರದ ಪ್ರಮಾಣವನ್ನು ಸುಧಾರಿಸಲು ಚಬಹಾರ್‌ನೊಂದಿಗೆ ತೊಡಗಿಸಿಕೊಳ್ಳಲು ಮತ್ತಷ್ಟು ಹೆಚ್ಚಿನ ಬಂದರುಗಳನ್ನು ಪಡೆಯುವುದಾಗಿ ಕೆಲವು ವಾರಗಳ ಹಿಂದೆ ಭಾರತ ಹೇಳಿದೆ.

ಶುಕ್ರವಾರ ಬೆಳಿಗ್ಗೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಖಾಸಿಂ ಸುಲೇಮಾನಿಯನ್ನು ಹತ್ಯೆ ಮಾಡಲು ಮಾಡಲು ನಿರ್ಧರಿಸಿದಾಗ, ಪ್ರತಿಯೊಂದು ಒಪ್ಪಂದ ಮತ್ತು ಸಂಬಂಧಗಳು ಗಂಭೀರ ಪ್ರಶ್ನೆಗೆ ಒಳಗಾದವು. ಇರಾನ್‌ನ ಸರ್ವೋಚ್ಛ ನಾಯಕ ಅಯತುಲ್ಲಾ ಖಮೇನಿ, ತನ್ನ ದೇಶದ ನಿರ್ಭೀತ ಸೇನಾನಾಯಕ ಮತ್ತು ಅಮೂಲ್ಯ ಮಗನನ್ನು ಹತ್ಯೆ ಮಾಡಿದ ಅಮೆರಿಕ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಗುಡುಗಿದ್ದಾರೆ. ಈ ಹೇಳಿಕೆ ನಂತರ ಭಾರತ ತನ್ನ ಇರಾನಿನ ಸಂಬಂಧದೊಂದಿಗೆ ಹೇಗೆ ಮುಂದುವರಿಯುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಜನರಲ್ ಸುಲೇಮಾನಿ ಜನಪ್ರಿಯ ವ್ಯಕ್ತಿಯಾಗಿದ್ದು, ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಸಾಕಷ್ಟು ಅನುಯಾಯಿಗಳೊಂದಿಗೆ ಇಸ್ಲಾಂಮಿಕ್‌ ರಾಷ್ಟ್ರಗಳ ಅಪ್ರತಿಮ ನಾಯಕನೆನಿಸಿದ್ದರು. ಇರಾಕ್, ಸಿರಿಯಾ ಮತ್ತು ಇತರ ಪ್ರದೇಶಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಅನ್ನು ಸೋಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಸ್ಲಾಮಿಕ್ ಸ್ಟೇಟ್ ವಿರುದ್ಧ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ವಿರುದ್ಧ ಇರಾಕ್‌ನಲ್ಲಿ ಅವರು ಅಮೆರಿಕ ಜೊತೆ ಕೈಜೋಡಿಸಿದ್ದರು ಎಂಬ ವದಂತಿಯೂ ಇದೆ. ಭಾರತೀಯ ಗುಪ್ತಚರ ಸಂಸ್ಥೆಗಳಲ್ಲಿ ಹಳೆಯ ಹುಲಿಗಳು ಸುಲೇಮಾನಿ ಅವರನ್ನು ಅಫ್ಘಾನಿಸ್ತಾನದಲ್ಲಿನ ನಿರಂತರ ಚಟುವಟಿಯ ಮನಷ್ಯ ಎಂದು ನೆನಪಿಸಿಕೊಳ್ಳುತ್ತಾರೆ ಮತ್ತು ಇವರಲ್ಲಿ ಕೆಲವರು ಅವರೊಂದಿಗೆ ಕೆಲಸ ಮಾಡಿದ್ದಾರೆ. ತನ್ನ ಹೊಳಪಾದ ಕಣ್ಣುಗಳಿಂದ, ಹೆಚ್ಚು ಮಾತನಾಡದ ವ್ಯಕ್ತಿಯಾಗಿ ಕಾಣಿಸುತ್ತಿದ್ದರು, ಆದರೆ ಎಲ್ಲವನ್ನೂ ಕೇಳುತ್ತಿದ್ದರು ಮತ್ತು ಬಹಳಷ್ಟನ್ನು ತನ್ನೊಳಗೆ ಇಟ್ಟುಕೊಂಡಿರುತ್ತಿದ್ದರು.

ಸುಲೇಮಾನಿ ಕೆಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು ಎಂಬುದನ್ನು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಈಗ ನೆನಪಿಸಿಕೊಳ್ಳುತ್ತಾರೆ. ಈಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದೆಹಲಿಯ ಕೆಲವು ಕಾರ್ಯಾಚರಣೆಗಳಲ್ಲಿ ಸುಲೇಮಾನಿ ಭಾಗಿಯಾಗಿದ್ದಾರೆಂದು ಹೇಳಿಕೊಂಡಿದ್ದಾರೆ. ದೆಹಲಿಯಲ್ಲಿನ ಇಸ್ರೇಲಿ ರಾಜತಾಂತ್ರಿಕರ ಮೇಲೆ ನಡೆದ ದಾಳಿ ಇರಾನಿಯನ್ನರು ಆರೋಪಿಸಿರುವ ಏಕೈಕ ಘಟನೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪತ್ರಕರ್ತನನ್ನು ಬಂಧಿಸಲಾಯಿತು. ಜನರಲ್ ಸುಲೇಮಾನಿಗೆ ದೆಹಲಿಯೊಂದಿಗಿನ ನಂಟನ್ನು ಕಲ್ಪಿಸುವ ಮೂಲಕ, ಭಾರತ ಮತ್ತು ಟೆಹ್ರಾನ್ ಸಂವಂಧವನ್ನು ಮೂಲೆಗೆ ತಳ್ಳಬೇಕು ಎಂದು ಟ್ರಂಪ್ ಬಯಸುತ್ತಾರೆ. ಭಾರತವು ಯಾವುದೇ ಗೊಂದಲವಿಲ್ಲದೆ ಸ್ಪಷ್ಟವಾಗಿ ತನ್ನ ಪಕ್ಷದಲ್ಲಿ ಇರಬೇಕೆಂದು ಟ್ರಂಪ್‌ ಬಯಸುತ್ತಾರೆ. ಮತ್ತು ಭಾರತ ಮತ್ತು ಸುಲೇಮಾನಿ ಭೇಟಿಯ ಕುರಿತಾಗಿನ ಟ್ರಂಪ್ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿದ್ದರೆ, ಚಬಹಾರ್‌ನಲ್ಲಿನ ತನ್ನ ವಹಿವಾಟು ಸಂಬಂಧವನ್ನು ಮುಂದುವರಿಸುವುದು ಭಾರತಕ್ಕೆ ಕಠಿಣವಾಗಬಹುದು. ಸುಲೇಮಾನ್‌ ಹತ್ಯೆಯನ್ನು ಜಾಗತಿಕ ಸಮುದಾಯವು ಅಕ್ರಮ ಹತ್ಯೆ ಎಂದು ನಿರ್ಧರಿಸಿ, ಕೆಟ್ಟ ಘಳಿಗೆಯಲ್ಲಿ ಟೆಹ್ರಾನ್ ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಂಡರೆ ತನ್ನ ನಿಲುವನ್ನು ಬಲವಂತವಾಗಿ ಪ್ರತಿಪಾದಿಸಲು ಭಾರತಕ್ಕೆ ಅಮೆರಿಕ ಕೇಳಬಹುದು. ಹೀಗಾಗದಲ್ಲಿ ಭಾರತ ಮತ್ತು ಇರಾನ್‌ ನಡುವಿನ ಸಂಬಂಧ ಯಾವ ದಿಕ್ಕಿನಲ್ಲಿ ಮುಂದುವರಿಯುತ್ತದೆ ಎಂಬ ಪ್ರಶ್ನೆ ಮೂಡಲಿದೆ.

Sanjay Kapoor

The assassination of General Qassem Sulemani, 62, through a missile attack ordered by US President Donald Trump in the early hours of Friday morning is unlikely to go un-avenged by the angry Iranian government. Suleimani, never thought that he could be killed- so many close shaves he has had since he became the commander of the al-Quds force- the external arm of Iran’s Revolutionary Guards (IRGC) some 22 years ago. He seemed to enjoy the immunity from those whom he was perceived to be fighting against. Otherwise there was little reason why he was not attacked by the US after it occupied Iraq after Operation Desert Storm. While it will take some time to ascertain the real reason behind this dark assassination of Suleimani, what is apparent is that his going away will hit the bilateral and financial ties that Iran forged with many countries. India is no exception.

India, which perceives Iran as a member of its extended neighborhood and endeavors to invest considerable funds for the development of Chabahar, located at the Southeastern part of the country at the Makran coast, is in a conundrum about how it should respond to this assassination. Walking on eggshells as it cannot antagonize neither Iran nor Washington- it decided to take cognizance of the death of the Iranian General without condemning it. That may make US happy, but may not find favor with Tehran, which has stepped out of its way to grant a 10-year management lease for Shahid Behesti port at Chabahar. Chinese, who have invested heavily in nearby Pakistan’s Baluchi port of Gwadar were keen on building Chabahar, too, but Iran had its own strategic reasons to give it to India. The Iranian port, which is located in the sea of Oman is India’s first overseas investment, which allows it to sidestep Pakistan and helps rebuild its land route with Central Asia.

The Chabahar port, which has had many suitors from the days of Tsar Russia’s quest for a warm water port, finds mention in travel writings of Al-Beruni as the starting point of Hindustan. Expectedly, the Indian investment in this port city represented a natural fit. During a visit to Chabahar, this writer found people speaking Hindustani with ease and happy with India’s foray. Iranian diplomats never shied away from mentioning that they wanted Indian presence in close proximity to the Pakistan border. It was from Chabahar that Indian national Kulbhushan Jadhav, accused of being a spy by the government of Pakistan was picked up.

There are two components to the Chabahar project, the port and the road and rail network that connects the port to the cities of Iran and Afghanistan. Indian Prime Minister Narendra Modi, Iranian President Hassan Rouhani and Afghan President Ashraf Ghani signed the agreement in 2016. This agreement was premised on the assumption that the nuclear deal with _P5+1 country would allow Tehran return to international fold allowing them to access the international banking channels to facilitate trade and commerce with other countries. This assumption was challenged after US President Donald Trump came to power and withdrew from the Iran deal and re-imposed sanctions on Iran. The return of the sanctions and refusal of Banks to transact with Iran cramped India as it could not build the port and the railway network at the desired pace. Most of the time, it was looking over its shoulder to ascertain what the US thought of its engagement with Tehran.  Chabahar had been exempted by the US as it was perceived as critical for Afghanistan’s reconstruction, but India’s problems about the project did not cease. During 2+2 meeting in Washington, Foreign Minister S Jaishankar managed to get some commitments in writing, which allowed India to purchase some equipments worth $85 million. India also promised to get more ports to engage with Chabahar to improve the volume of trade. This was a few weeks ago.

On Friday morning when US President Donald Trump decided to smoke out Qassem Suleimani, every agreement and ties have come under a serious question. No one knows how India will proceed with its Iranian engagement after its Supreme leader, Ayotallah Khamenei promised to take revenge for the loss of country’s intrepid and valuable son. General Suleimani was a popular man, a virtual rockstar with an instagram profile with a sizable following. He was credited with the defeat of Islamic State in Iraq, Syria and other enclaves. There’s near unanimity that he collaborated with US in Iraq against the Islamic State and also against the Taliban in Afghanistan. Old timers in the Indian intelligence agencies remember him as a busy body in Afghanistan and some of them have also worked with him. With his brooding eyes, he came across as a person who did not speak much, but listened and absorbed a lot. He visited India a few times. Now US President Donald Trump claims that he was involved in some Delhi operations. The only incident in which the Iranians have been accused pertains to the attack on an Israeli diplomat in Delhi. A journalist was arrested for that. By choosing to link General Suleimani with Delhi, Trump wants New Delhi to dump Tehran. He clearly wants Delhi to take sides and not indulge in obfuscation. And if there is any merit in what President Trump is saying then India would be hard put to continue its engagement on Chabahar. Worse, it could be asked to forcefully assert its stand in the event of Tehran taking revenge for what has been termed by the global community as an illegal assassination.

(ends) 

--
-vinayaka kodsara
9964071322
www.aksharavihaara.wordpress.com

--
-vinayaka kodsara
9964071322
www.aksharavihaara.wordpress.com
ETV Bharat Logo

Copyright © 2024 Ushodaya Enterprises Pvt. Ltd., All Rights Reserved.