ETV Bharat / bharat

ಜೇಟ್ಲಿ ಯಾಕೆ ವಿಭಿನ್ನ... ಅವರಿಗೇಕೆ ಬಿಜೆಪಿಯಲ್ಲಿತ್ತು ಮಹತ್ವ

author img

By

Published : Aug 24, 2019, 2:05 PM IST

ಮಾಜಿ ಕೇಂದ್ರ ಸಚಿವ, ಮೋದಿ ಸರ್ಕಾರದ ಟ್ರಬಲ್​ ಶೂಟರ್​ ಅರುಣ್​ ಜೇಟ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಮೋದಿ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಜೇಟ್ಲಿಗೆ ಬಿಜೆಪಿಯಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗಿತ್ತು. ಯಾಕೆ ಜೇಟ್ಲಿಯವರು ವಿಭಿನ್ನ ಹಾಗೂ ಅವರಿಗೇಕೆ ಬಿಜೆಪಿಯಲ್ಲಿತ್ತು ಮಹತ್ವದ ಸ್ಥಾನವನ್ನ ಯಾಕೆ ಬಿಜೆಪಿ ನೀಡಿತ್ತು ಅನ್ನೋದರ ಬಗ್ಗೆ ಇಲ್ಲಿದೆ ಡಿಟೇಲ್ಸ್​...

ಜೇಟ್ಲಿ

ನವದೆಹಲಿ: 2017 ರಿಂದಲೇ ಅನಾರೋಗ್ಯಕ್ಕೆ ತುತ್ತಾಗಿದ್ದ ಅರುಣ್​ ಜೇಟ್ಲಿ ಎಲ್ಲ ನೋವು ಮರೆತು ಪಕ್ಷ ಹಾಗೂ ಈ ಹಿಂದಿನ ಸರ್ಕಾರದ ಯಶಸ್ಸಿಗೆ ಬಹಳಷ್ಟು ಶ್ರಮಿಸಿದ್ದರು. ಪ್ರತಿಪಕ್ಷಗಳ ನಾಯಕರೊಂದಿಗೂ ಅತ್ಯುತ್ತಮ ಬಾಂಧವ್ಯ ಹೊಂದಿದ್ದ ಅವರು, ಮೋದಿ ಸರ್ಕಾರದ ಆಪತ್ಭಾಂದವ ಎಂದೇ ಪ್ರಸಿದ್ಧರಾಗಿದ್ದರು.

Why jaitley is different
ಟ್ರಬಲ್​ ಶೂಟರ್​ ಅರುಣ್​ ಜೇಟ್ಲಿ

ಅರುಣ್​ ಜೇಟ್ಲಿ ಅನಾರೋಗ್ಯಕ್ಕೆ ತುತ್ತಾದಾಗ ಪಕ್ಷಾತೀತವಾಗಿ ರಾಜಕೀಯ ನಾಯಕರು ಟ್ವೀಟ್ ಮಾಡಿ ಬೇಗ ಗುಣಮುಖರಾಗಬೇಕು ಎಂದು ಹಾರೈಕೆ ಮಾಡಿದ್ದರು. ರಫೇಲ್​ ವಿವಾದದ ವೇಳೆ, ರಾಹುಲ್​ ಟ್ವೀಟ್​ ಮಾಡಿ, ನೀವು ನಮಗೆ ಅಗತ್ಯ ಬೇಗ ಗುಣಮುಖರಾಗಿ ಎಂದು ಟ್ವೀಟ್​ ಮೂಲಕವೇ ತಮ್ಮ ಪ್ರೀತಿ ತೋರಿದ್ದರು. ಹೀಗೆ ಎಲ್ಲರ ಮೆಚ್ಚಿನ ನಾಯಕರಾಗಿದ್ದ ಅರುಣ್​ ಜೇಟ್ಲಿ, ಯಾಕೆ ವಿಭಿನ್ನ ಆಗ್ತಾರೆ ಎಂದರೆ,

ಸಂವಿಧಾನದ 84ನೇ ತಿದ್ದುಪಡಿಯಲ್ಲಿ ವಹಿಸಿದ್ದರು ಜೇಟ್ಲಿ ಮಹತ್ವದ ಪಾತ್ರ

2026ರವರೆಗೆ ಪಾರ್ಲಿಮೆಂಟರಿ ಸ್ಥಾನಗಳ ಲಭ್ಯತೆಯನ್ನು ಸ್ಥಿರವಾಗಿಸಲು 84ನೇ ತಿದ್ದುಪಡಿಯನ್ನು ಭಾರತ ಸಂವಿಧಾನದಲ್ಲಿ ತಂದರು. ಈ ಮೂಲಕ ಅನಗತ್ಯವಾಗಿ ಸ್ಥಾನಗಳು ಹೆಚ್ಚಾಗದಂತೆ ನಿಗಾವಹಿಸಿದ್ದರು.

Why jaitley is different
ಮೋದಿ ಹಾಗೂ ಜೇಟ್ಲಿ

91ನೆಯ ತಿದ್ದುಪಡಿಯಲ್ಲೂ ಮುಖ್ಯ ಭೂಮಿಕೆ

2004 ರಲ್ಲಿ ಪಕ್ಷಾಂತರ ಮಾಡುವವರಿಗೆ ಶಿಕ್ಷೆ ನೀಡುವಂತೆ ಸಂವಿಧಾನಕ್ಕೆ 91ನೇ ತಿದ್ದುಪಡಿ ಮೂಲಕ ತಾವೇನು ಎಂಬುದನ್ನು ತೋರಿಸಿದ್ದರು.

ಚುನಾವಣಾ ಚಾಣಕ್ಯ ಎಂದೇ ಜೇಟ್ಲಿ ಪ್ರಸಿದ್ಧರು!

ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಅರುಣ್​ ಜೇಟ್ಲಿ, ಗುಜರಾತ್​, ಕರ್ನಾಟಕ, ಮಧ್ಯಪ್ರದೇಶ, ಬಿಹಾರ ಹೀಗೆ ಹಲವು ಪ್ರಮುಖ ರಾಜ್ಯಗಳ ಉಸ್ತುವಾರಿ ವಹಿಸಿಕೊಂಡು, ಕಾಂಗ್ರೆಸ್ ಹಾಗೂ ಸ್ಥಳೀಯ ಪಕ್ಷಗಳ ಆಡಳಿತವನ್ನ ಕಿತ್ತೊಗೆದು, ಬಿಜೆಪಿ ಅಧಿಕಾರ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅರುಣ್ ಜೇಟ್ಲಿಯವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. 2008 ರಿಂದ ಸುಮಾರು 8 ರಾಜ್ಯಗಳ ಚುನಾವಣೆಗಳನ್ನು ನಿರ್ವಹಿಸಿದ್ದಾರೆ.

ಗುಜರಾತ್​ನಲ್ಲಿ ಅರುಣ್​ ಜೇಟ್ಲಿ ಪಾತ್ರ

2002ರಲ್ಲಿ, ಅರುಣ್ ಜೇಟ್ಲಿ ಗುಜರಾತ್​ನ ಆಗಿನ ಸಿಎಂ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಗೂಡಿ ಗುಜರಾತ್​​ನಲ್ಲಿ ಕಾಂಗ್ರೆಸ್​ ಮೇಲೇಳದಂತೆ ಮಾಡಿದ್ದು ಹಾಗೂ ಮೋದಿ ಪ್ರಧಾನಿ ಹುದ್ದೆಗೆ ಏರುವಲ್ಲಿ ಅರುಣ್​ ಜೇಟ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

2002 ರಲ್ಲಿ ಬಿಜೆಪಿ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಒಟ್ಟು 182 ಸ್ಥಾನಗಳಲ್ಲಿ 126 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಸಹಯೋಗವು ಅವರನ್ನು ರಾಜ್ಯ ಸಭೆಗೆ ನಾಮನಿರ್ದೇಶನ ಮಾಡುವಂತೆ ಮಾಡಿತ್ತು. ಡಿಸೆಂಬರ್ 2007ರಲ್ಲಿ, ಅರುಣ್ ಜೇಟ್ಲಿ ಚಳವಳಿ ನಡೆಸಿ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಏರುವಂತೆ ಮಾಡಿದ್ದರು. ಒಟ್ಟು 182 ಸ್ಥಾನಗಳಲ್ಲಿ ಬಿಜೆಪಿ 117 ಸ್ಥಾನ ಪಡೆದುಕೊಂಡಿತು. ಇದೇ ವ ನರೇಂದ್ರ ಮೋದಿಯವರು ಅರುಣ್ ಜೇಟ್ಲಿ ಅವರನ್ನ ಗುಜರಾತ್‌ಗೆ ವರ್ಗಾಯಿಸುವಂತೆ ವಿಶೇಷವಾಗಿ ಪಕ್ಷದ ಹೈಕಮಾಂಡ್ ಕೇಳಿಕೊಂಡರು. ಮತದಾನದ ಪ್ರಾಥಮಿಕ ವಿಷಯಗಳೆಂದರೆ ನರೇಂದ್ರ ಮೋದಿಯವರ ಅಧಿಕಾರತ್ವ ಹಾಗೂ ರಾಜ್ಯಾಡಳಿತದಿಂದ ಉತ್ತಮ ಸರ್ಕಾರದ ನಿರ್ವಹಣೆ.

Why jaitley is different
ಸುಷ್ಮಾ ಸ್ವರಾಜ್​ ಜೊತೆಗೆ ಅರುಣ್​ ಜೇಟ್ಲಿ

ಮಧ್ಯ ಪ್ರದೇಶದಲ್ಲೂ ಜೇಟ್ಲಿ ಮಾಡಿದ್ರು ಕಮಾಲ್​

2003ರಲ್ಲಿ, ಮಧ್ಯ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟ್ರಬಲ್​ ಶೂಟರ್​​​​ ಜೇಟ್ಲಿ ಭಾರಿ ಮಹತ್ವದ ಪಾತ್ರ ನಿಭಾಯಿಸಿದ್ದರು. 10 ವರ್ಷಗಳ ದಿಗ್ವಿಜಯ್​ ಸಿಂಗ್​ ಅವರ ಆಡಳಿತ ಕಿತ್ತೊಗೆದು, ಉಮಾ ಭಾರತಿ ನೇತೃತ್ವದಲ್ಲಿ ಬಿಜೆಪಿ ಕಮಾಲ್​ ಮಾಡಿತ್ತು. 230 ಸ್ಥಾನಗಳಲ್ಲಿ 173 ಸೀಟು ಗೆದ್ದು ಅಧಿಕಾರಕ್ಕೆ ಬಂದಿತ್ತು. ಆ ಬಳಿಕ 2018 ರವರೆಗೂ ಬಿಜೆಪಿ ನಿರಂತರ ಅಧಿಕಾರದಲ್ಲಿತ್ತು.

ಬಿಹಾರ ಹಾಗೂ ಪಂಜಾಬ್​ ಮತ್ತು ದೆಹಲಿಯ ಮುನ್ಸಿಪಲ್​ ಕಾರ್ಪೋರೇಷನ್​ ಚುನಾವಣೆಗಳಲ್ಲಿ ಜೇಟ್ಲಿ ತಮ್ಮದೇ ಆದ ಭೂಮಿಕೆ ನಿರ್ವಹಿಸಿದ್ದರು. ಹೀಗಾಗಿ ಜೇಟ್ಲಿ ಬಿಜೆಪಿಯಲ್ಲಿ ಆ ಮೂಲಕ ಪ್ರಧಾನಿ ಅವರ ಮೆಚ್ಚಿನ ಬಂಟನಾಗಿ ಗುರುತಿಸಿಕೊಂಡಿದ್ದರು.

Intro:Body:

jaitly imp

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.