ETV Bharat / bharat

ಮಹಾತ್ಮನೆಂದರೆ ಯಾರು?... ಮಹಾತ್ಮನ ಚಿಂತನೆಗಳು ಇಂದಿಗೆಷ್ಟು ಪ್ರಸ್ತುತ!

ಮಹಾತ್ಮ ಎಂದರೆ ಭಾರತಕ್ಕೆ ಮಾತ್ರವಲ್ಲ, ಸಂಪೂರ್ಣ ಜಗತ್ತಿಗೆ ಒಂದು ಶಕ್ತಿ. ಮಹಾತ್ಮನೆಂದರೆ ಒಂದು ಅದಮ್ಯ ಚೇತನ. ಯಾಕೆಂದರೆ ಅವರು ಮಮತೆಯ ಹೃದಯಗಳನ್ನು ಕಾರ್ಯರೂಪಕ್ಕೆ ತಂದರು ಮತ್ತು ಮಾನವಕುಲದ ಜೊತೆಗೆ ಬದುಕಿದರು. ಅವರ ತತ್ತ್ವ, ಸಿದ್ಧಾಂತ ಹಾಗೂ ಕಲ್ಪನೆಗಳ ಪ್ರಸ್ತುತತೆಯನ್ನು ಆಧುನಿಕ ಪುರುಷರು ಚಿಂತಿಸುವ ಅಗತ್ಯವಿದೆ.

ಮಹಾತ್ಮ
author img

By

Published : Sep 3, 2019, 6:06 AM IST

ಹೈದರಾಬಾದ್ : ಅದು 1948 ಜನವರಿ 30ರ ಶುಕ್ರವಾರದ ಸಂಜೆ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಐದೂವರೆ ತಿಂಗಳಷ್ಟೇ ಆಗಿತ್ತು. ಭಾರತದ ರಾಷ್ಟ್ರಪಿತನ ಹತ್ಯೆಯ ಸುದ್ದಿ ಆ ಸಂಜೆ ಭಾರತೀಯರ ಕಿವಿಗೆ ಬರಸಿಡಿಲಿನಂತೆ ಬಡಿದಿತ್ತು. ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿತು.

ಮಹಾತ್ಮನ ಸಾವಿನ ಸುದ್ದಿ ದೇಶದ ಗಡಿ ದಾಟಿ ಜಗತ್ತನ್ನೇ ಕತ್ತಲೆಯಲ್ಲಿ ನರಳುವಂತೆ ಮಾಡಿತು. ಯಾಕಂದ್ರೆ ಮಹಾತ್ಮನ ಕುಟುಂಬ ಬಹಳ ದೊಡ್ಡದು. ಜಗತ್ತಿನಾದ್ಯಂತ ಜಾತಿ, ಧರ್ಮ, ಬಣ್ಣದ ಭಿನ್ನತೆಯಿಲ್ಲದೇ ಮಹಾತ್ಮನ ಕುಟುಂಬದ ಸದಸ್ಯರಿದ್ದರು. ಭಾರತದ ಸುಮಾರು 33 ಕೋಟಿ ಜನರು ಆ ದಿನ ಅನ್ನ, ನೀರು ಸೇರದೇ ಅಳುವನ್ನೇ ಅಪ್ಪಿಕೊಂಡು ರಾತ್ರಿ ಕಳೆದರು.

ಆ ಕಾಲದ ಪ್ರಮುಖ ಸಮೂಹ ಮಾಧ್ಯಮವಾಗಿದ್ದ ರೇಡಿಯೋವೊಂದೇ, ಮಹಾತ್ಮನ ಸಾವಿನ ಸುದ್ದಿಯನ್ನು ಪ್ರಸಾರ ಮಾಡಿತು. ದುಃಖದ ಸಂಗೀತ ಹಾಗೂ ಭಾವನಾತ್ಮಕ ಸಂದೇಶಗಳು ಬಾನುಲಿಯಲ್ಲಿ ಕೇಳಿ ಬಂದವು. ಆ ದಿನ ರಾತ್ರಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿದ್ದ ಪಂಡಿತ್​ ಜವಹರಲಾಲ್​ ನೆಹರೂರವರ "ಲೈಟ್​ ಹ್ಯಾಸ್​ ಗಾನ್​ ಔಟ್​ ಆಫ್​ ಅವರ್​ ಲೈವ್ಸ್​"(ನಮ್ಮ ಜೀವನದಿಂದ ಪ್ರಖರ ಬೆಳಕೊಂದು ಹಾರಿ ಹೋಯ್ತು) ಎಂಬ ಭಾಷಣ ಭಾರತೀಯ ರೇಡಿಯೋದಲ್ಲಿ ಪ್ರಸಾರವಾಯ್ತು. ಇದು ಭಾರತ ಮಾತೆಯ ಮಕ್ಕಳನ್ನು ಇನ್ನಷ್ಟು ಭಾವನಾತ್ಮಕವಾಗಿ ಮತ್ತಷ್ಟು ದುರ್ಬಲಗೊಳಿಸಿತು.

ದೇಶಾದ್ಯಂತ ಈ ಶೋಕದ ವಾತಾವರಣ ಜನವರಿ 30, 1948ರ ಶನಿವಾರವೂ ಮುಂದುವರಿಯಿತು. ಮಹಾತ್ಮನ ಅಂತ್ರಕ್ರಿಯೆಯ ನೇರಪ್ರಸಾರ ಮಾಡಿದ್ದ ಆಲ್​ ಇಂಡಿಯಾ ರೇಡಿಯೋವನ್ನು ಕೇಳುತ್ತಾ ಭಾರತೀಯರೆಲ್ಲ ರಾಷ್ಟ್ರಪಿತನ ವಿದಾಯಕ್ಕೆ ಅಂತಿಮ ನಮನ ಸಲ್ಲಿಸಿದರು.

ಗಾಂಧೀಜಿ ತತ್ತ್ವ ಇಂದಿಗೆಷ್ಟು ಪ್ರಸ್ತುತ...!

ಸದ್ಯ ನಾವು 21 ನೇ ಶತಮಾನದ ಆರಂಭದಲ್ಲಿದ್ದೇವೆ. ಮಹಾತ್ಮನನ್ನು ಕಳೆದುಕೊಂಡು 71 ವರ್ಷಗಳೇ ಕಳೆದಿವೆ. ಆದರೆ, ಮಹಾತ್ಮ ನಮ್ಮ ನಡುವೆ ಎಷ್ಟು ಪ್ರಸ್ತುತ ಎಂಬುದನ್ನು ಪ್ರಶ್ನಿಸಿಕೊಂಡರೆ, ಪ್ರಾಯಶಃ ಹಾಸ್ಯಾಸ್ಪದ ಉತ್ತರ ನಮಗೆ ಸಿಗಬಹುದು. ಈ ಆಧುನಿಕ ಭಾರತದಲ್ಲೂ ಮಹಾತ್ಮ ಯಾರು, ಮಹಾತ್ಮನ ತತ್ತ್ವ -ಸಿದ್ಧಾಂತಗಳಾವು ಎಂಬುದರ ಅರಿವಿಲ್ಲದ ಯುವಕರು ನಮ್ಮ ನಡುವೆ ಇರುವುದು ವಿಪರ್ಯಾಸಕರ.

ಮಹಾತ್ಮ ಅಮರನಾಗಿ 7 ದಶಕಗಳು ದಾಟಿದರೂ ನಮ್ಮ ದೇಶ ಇನ್ನೂ ಅಭಿವೃದ್ಧಿಶೀಲ ರಾಷ್ಟ್ರವಾಗಿಯೇ ಉಳಿದಿದೆ. ಇನ್ನೂ ಹಲವು ವಿಚಾರಗಳಲ್ಲಿ ಹಿಂದುಳಿದಿದೆ. ಶೇಕಡಾವಾರು ಅತಿ ಹೆಚ್ಚು ಜನಸಂಖ್ಯೆಯಿಂದ ಸಾಮಾಜಿಕವಾಗಿ ಹಾಗೂ ಸಾಂಸ್ಕೃ ತಿಕವಾಗಿ ಸಣ್ಣ ಸಣ್ಣ ತುಣುಕುಗಳಾಗಿ ಹೋಗಿದೆ. ಜನ ಬಡತನ ರೇಖೆಗಿಂತ ಕೆಳಗಿನ ಸ್ಥರದಲ್ಲಿ ಬದುಕುತ್ತಿದ್ದಾರೆ. ಸಮಾಜದ ಮುಖ್ಯವಾಹಿನಿಯಿಂದ ಹಿಂದುಳಿದು, ಸಮೃದ್ಧತೆಯಿಂದ ವಂಚಿತರಾಗಿ ದ್ವೀಪರಾಜ್ಯದಂತೆ ಬದುಕುತ್ತಿರುವ ಜನರು ಇನ್ನೂ ಇದ್ದಾರೆ. ಮಹಾತ್ಮನ ಆಸೆ, ಕನಸುಗಳು ಇನ್ನೂ ನಮ್ಮಲ್ಲಿ ಸಾಕಾರಗೊಂಡಿಲ್ಲ ಅನ್ನೋದು ವಿಷಾದಕರ.

ಫ್ರೆಂಚ್ ನಾಟಕಕಾರ, ಕಾದಂಬರಿಕಾರ ಹಾಗೂ ಬರಹಗಾರನಾಗಿದ್ದ ರೊಮೈನ್​ ರೋಲ್ಯಾಂಡ್​ ಮಾಹಾತ್ಮ ಗಾಂಧಿಯನ್ನು 'ಶಿಲುಬೆ ಇಲ್ಲದ ಕ್ರಿಸ್ತ' ಎಂದು ಕರೆದಿದ್ದರು. ಅವರ ಪ್ರಕಾರ ಸಂಪೂರ್ಣ ದೇಶದ ಹೊರೆಯನ್ನು ಮಹಾತ್ಮರೊಬ್ಬರೇ ಹೊತ್ತರು. ದೇಶದ ಜನರ ದುಃಖ ಮತ್ತು ಸಂಕಟಗಳ ಭಾರವನ್ನು ದೀರ್ಘಕಾಲದವರೆಗೆ ಕ್ರಿಸ್ತನಿಗಿಂತ ಮಿಗಿಲಾಗಿ ಮಹಾತ್ಮ ಹೊತ್ತಿದ್ದರು. ಅವರ ಧರ್ಮವು ಒಂದು ​ಒಂದು ಸೀಮಿತ ಧರ್ಮಕ್ಕೆ ಸೇರಿದ್ದಾಗಿರಲಿಲ್ಲ. ಬದಲಾಗಿ ಮಾನವೀಯತೆ ಹಾಗೂ ಜನಸಾಗರಕ್ಕೆ ಸೇರಿದ್ದಾಗಿತ್ತು ಎಂದು ರೋಲ್ಯಾಂಡ್ ಅಭಿಪ್ರಾಯಪಟ್ಟಿದ್ದರು.

ಮಹಾತ್ಮನ ಪ್ರಕಾರ ಓರ್ವ ನೈಜ ಅರ್ಥಶಾಸ್ತ್ರಜ್ಞನು ಸಾಮಾಜಿಕ ನ್ಯಾಯದ ಪರ ನಿಲ್ಲುತ್ತಾನೆ. ಅದೇ ರೀತಿ, ನಿಜವಾದ ಸ್ವರಾಜ್ಯ ಸಾಕಾರಗೊಳ್ಳುವುದು ಸಮಾಜದ ದುರ್ಬಲ ವರ್ಗದ ಸಬಲೀಕರಣದ ಮೂಲಕ. ಆಡಳಿತ ವರ್ಗದ ಜನರು, ಜನರ ಸೇವಾ ಮನೋಭಾವ ಹೊಂದಿರಬೇಕೇ ಹೊರತು, ಅವರಿಂದ ಹೆಚ್ಚಿನ ಪ್ರತಿಫಲ ನಿರೀಕ್ಷಿಸಬಾರದು ಎಂಬ ಭಾವನೆಯನ್ನು ಗಾಂಧೀಜಿ ಹೊಂದಿದ್ದರು ಎಂದು ರಾಜಕೀಯ ತಜ್ಞ ಅರ್ನೆಸ್ಟ್ ಬಾರ್ಕರ್, ದೇಶದ ಆಡಳಿತ ವ್ಯವಸ್ಥೆ ಬಗ್ಗೆ ಮಹಾತ್ಮನ ಕಲ್ಪನೆಗಳನ್ನು ಬರೆದಿದ್ದರು.

ಒಟ್ಟಿನಲ್ಲಿ ಮಹಾತ್ಮ ಎಂದರೆ ಭಾರತಕ್ಕೆ ಮಾತ್ರವಲ್ಲ, ಸಂಪೂರ್ಣ ಜಗತ್ತಿಗೆ ಒಂದು ಶಕ್ತಿ. ಮಹಾತ್ಮನೆಂದರೆ ಒಂದು ಅದಮ್ಯ ಚೇತನ. ಯಾಕೆಂದರೆ ಅವರು ಮಮತೆಯ ಹೃದಯಗಳನ್ನು ಕಾರ್ಯರೂಪಕ್ಕೆ ತಂದರು ಮತ್ತು ಮಾನವಕುಲದ ಜೊತೆಗೆ ಬದುಕಿದರು. ಅವರ ತತ್ತ್ವ, ಸಿದ್ಧಾಂತ ಹಾಗೂ ಕಲ್ಪನೆಗಳ ಪ್ರಸ್ತುತತೆಯನ್ನು ಆಧುನಿಕ ಪುರುಷರು ಚಿಂತಿಸುವ ಅಗತ್ಯವಿದೆ.

Intro:Body:

Ganesha

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.