ನವದೆಹಲಿ: ಭಾರತೀಯ ಜನತಾ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ನಿಜವಾದ ಗಾಂಧೀಜಿ ಭಕ್ತರು, ಬೇರೆಯವರಂತೆ ಡಾಂಭಿಕ ಭಕ್ತಿ ತೋರುವ ನಕಲಿ ಭಕ್ತರಲ್ಲ ಎಂದು ಕಾಂಗ್ರೆಸ್ಗೆ ಲೋಕಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಟಿ ಬೀಸಿದ್ದಾರೆ.
ಲೋಕಸಭಾ ಕಲಾಪ ಈಗಾಗಲೇ ಆರಂಭಗೊಂಡಿದ್ದು, ಸಂಸದ ಅನಂತ್ ಕುಮಾರ್ ಹೆಗಡೆ ನೀಡಿರುವ ವಿವಾದಾತ್ಮಕ ಹೇಳಿಕೆಯೇ ಸದ್ಯಕ್ಕೆ ಕಲಾಪದಲ್ಲಿ ಬಿಸಿ ಬಿಸಿ ಚರ್ಚೆಯಾಗಿದೆ. ಕಲಾಪದ ವೇಳೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಗಾಂಧೀಜಿಯನ್ನು ನಿಂದಿಸಿದವರು ಬಿಜೆಪಿಗರು, ನೀವು ರಾವಣನ ವಂಶಸ್ಥರು ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತ್ಯುತ್ತರ ನೀಡಿದ್ದು, ನಾವು ನಿಮ್ಮಂತೆ ನಕಲಿ ಭಕ್ತರಲ್ಲ ಎಂದಿದ್ದಾರೆ.
ಈ ವೇಳೆ ಮಾತನಾಡಿದ ಜೋಶಿ, ಬಿಜೆಪಿಗರು ನಿಜವಾದ ಭಕ್ತರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಂತೆ ನಾವು ನಕಲಿ ಭಕ್ತರುಗಳಲ್ಲ ಎಂದು ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ್ದಾರೆ.