ಮಚಲಿಪಟ್ಟಣ (ಆಂಧ್ರಪ್ರದೇಶ): ಬುಧವಾರ ಮೂರು ಟನ್ (3000 ಕೆ.ಜಿ) ಗಾತ್ರವುಳ್ಳ ದೈತ್ಯ ಮೀನೊಂದು ಇಲ್ಲಿನ ಸ್ಥಳೀಯ ಮೀನುಗಾರರ ಬಲೆಗೆ ಬಿದ್ದಿದೆ.
ಹಿರಿಯ ಮೀನುಗಾರರು ಇದನ್ನು ಸ್ಟಿಂಗ್ರೆ ಮೀನು ಎಂದು ಗುರುತಿಸಿದರು. ಈ ಮೀನು ಸುಮಾರು ₹ 50 ಸಾವಿರ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಅಪರೂಪಕ್ಕೊಮ್ಮೆ ಇಂತಹ ಬೃಹತ್ ಮೀನುಗಳು ಬಲೆಗೆ ಬೀಳುತ್ತವೆ ಎಂದು ಮೀನುಗಾರರು ಹೇಳುತ್ತಾರೆ.
ದೈತ್ಯ ಮೀನನ್ನು ಬೋಟಿನಿಂದ ದಡಕ್ಕೆ ಎಳೆಯಲು ಹರಸಾಹಸ ಪಡಬೇಕಾಯಿತು. ಬಳಿಕ ಅದನ್ನು ಪ್ರದರ್ಶನಕ್ಕೆ ಇಡಲಾಯಿತು. ಸುತ್ತಲಿನ ಜನಸಮೂಹ ಈ ಅಪರೂಪದ ಮೀನನ್ನು ಕಂಡು ಬೆರಗಾದರು.