ETV Bharat / bharat

ಮಗುವಿನೊಂದಿಗೆ ಹೊರಟಿದ್ದ ಮಹಿಳೆ ಮೇಲೆ ಅಟ್ಯಾಕ್​... ಕೊರಳಿಗೆ ಕೈ ಹಾಕಿ ಚೈನ್​ ಕಿತ್ತು ಪರಾರಿ! - ಚೈನ್​​ ಕಿತ್ತುಕೊಂಡು ಪರಾರಿ

ಮಗುವಿನೊಂದಿಗೆ ಹೊರಟಿದ್ದ ಮಹಿಳೆ ಮೇಲೆ ದಾಳಿ ನಡೆಸಿ ಆಕೆಯ ಕೊರಳಿನಲ್ಲಿದ್ದ ಚೈನ್​ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಮಹಿಳೆ ಮೇಲೆ ಅಟ್ಯಾಕ್​​
author img

By

Published : Sep 8, 2019, 3:16 AM IST

ನವದೆಹಲಿ: ಮಗುವಿನೊಂದಿಗೆ ತೆರಳುತ್ತಿದ್ದ ಮಹಿಳೆಯೋರ್ವಳ ಮೇಲೆ ಬೈಕ್​ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿ, ಚೈನ್​​ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಮಹಿಳೆ ಮೇಲೆ ಅಟ್ಯಾಕ್​​

ನವದೆಹಲಿಯು ಚಾವಾಲ್​ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಗುವಿನೊಂದಿಗೆ ತೆರಳುತ್ತಿದ್ದಾಗ ಬೈಕ್​ ಮೇಲೆ ಬಂದು ಇಬ್ಬರು ದುಷ್ಕರ್ಮಿಗಳು ಆಕೆಯ ಕೊರಳಿದ್ದ ಚೈನ್​ ನೋಡಿ, ಸ್ವಲ್ಪ ದೂರದಲ್ಲಿ ಹೋಗಿ ನಿಂತಿದ್ದಾರೆ. ಈ ವೇಳೆ ಬೈಕ್​ನಿಂದ ಇಳಿದ ಓರ್ವ ಮಹಿಳೆಯ ಬಳಿ ಹೋಗಿ ಕುತ್ತಿಗೆಗೆ ಕೈ ಹಾಕಿ ಚೈನ್​ ಕಿತ್ತುಕೊಂಡಿದ್ದಾನೆ. ಈ ವೇಳೆ ಕಳ್ಳರನ್ನು ಹಿಡಿಯಲು ಮಹಿಳೆ ಬೆನ್ನಟ್ಟಿದ್ದರೂ ಪ್ರಯತ್ನ ವಿಫಲಗೊಂಡಿದೆ.

ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸರಗಳ್ಳತನ ಮಾಡಲು ಯತ್ನಿಸಿದ್ದ ಕಳ್ಳರನ್ನ ತಾಯಿ, ಮಗಳು ಸೇರಿ ನಡುರಸ್ತೆಯಲ್ಲೇ ಥಳಿಸಿದ್ದ ಘಟನೆ ನಡೆದಿತ್ತು.

Intro:Body:

ಮಗುವಿನಿಂದ ಹೊರಟಿದ್ದ ಮಹಿಳೆ ಮೇಲೆ ಅಟ್ಯಾಕ್​... ಕೊರಳಿಗೆ ಕೈ ಹಾಕಿ ಚೈನ್​ ಕಿತ್ತುಕೊಂಡು ಪರಾರಿ! 

ನವದೆಹಲಿ: ಮಗುವಿನೊಂದಿಗೆ ತೆರಳುತ್ತಿದ್ದ ಮಹಿಳೆಯೋರ್ವಳ ಮೇಲೆ ಬೈಕ್​ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿ, ಕೊರಳಲ್ಲಿದ್ದ ಚೈನ್​​ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ. 

ನವದೆಹಲಿಯು ಚಾವಾಲ್​ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಗುವಿನೊಂದಿಗೆ ತೆರಳುತ್ತಿದ್ದಾಗ ಬೈಕ್​ ಮೇಲೆ ಬಂದು ಇಬ್ಬರು ದುಷ್ಕರ್ಮಿಗಳು ಆಕೆಯ ಕೊರಳಿದ್ದ ಚೈನ್​ ನೋಡಿ, ಸ್ವಲ್ಪ ದೂರದಲ್ಲಿ ಹೋಗಿ ನಿಂತಿದ್ದಾರೆ. ಈ ವೇಳೆ ಬೈಕ್​ನಿಂದ ಇಳಿದ ಓರ್ವ ಮಹಿಳೆಯ ಬಳಿ ಹೋಗಿ ಕುತ್ತಿಗೆಗೆ ಕೈ ಹಾಕಿ ಚೈನ್​ ಕಿತ್ತುಕೊಂಡಿದ್ದಾನೆ. ಈ ವೇಳೆ ಕಳ್ಳರನ್ನು ಹಿಡಿಯಲು ಮಹಿಳೆ ಬೆನ್ನಟ್ಟಿದ್ದರೂ ಪ್ರಯತ್ನ ವಿಫಲಗೊಂಡಿದೆ. 

ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸರಗಳ್ಳತನ ಮಾಡಲು ಯತ್ನಿಸಿದ್ದ ಕಳ್ಳರನ್ನ ತಾಯಿ, ಮಗಳು ಸೇರಿ ನಡುರಸ್ತೆಯಲ್ಲೇ ಥಳಿಸಿದ್ದ ಘಟನೆ ನಡೆದಿತ್ತು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.