ETV Bharat / bharat

ಮಹಿಳೆ ಜತೆ ಸೇರಿ ಟಿಕ್​ಟಾಕ್​ ಮಾಡಿದ ವ್ಯಕ್ತಿ... ಬೆತ್ತಲೆ ಮಾಡಿ ಥಳಿಸಿದ ದುಷ್ಕರ್ಮಿಗಳ ಗುಂಪು! - ಮಹಿಳೆ ಜತೆ ಟಿಕ್​ಟಾಕ್​ ವಿಡಿಯೋ

ಮಹಿಳೆ ಜತೆ ಸೇರಿ ಟಿಕ್​ಟಾಕ್​ ಮಾಡಿದ್ದರಿಂದ ಆಕ್ರೋಶಗೊಂಡ ಆಕೆಯ ಸಹೋದರ ವ್ಯಕ್ತಿಯ ಮೇಲೆ ಕೆಲವರ ಸಹಾಯದೊಂದಿಗೆ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

man stripped naked and thrashed
man stripped naked and thrashed
author img

By

Published : Feb 10, 2020, 2:16 PM IST

Updated : Feb 10, 2020, 2:30 PM IST

ಜೈಪುರ್​(ರಾಜಸ್ಥಾನ): ಯುವಕನೊಬ್ಬ ಮಹಿಳೆ ಜತೆ ಸೇರಿ ಟಿಕ್​ ಟಾಕ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ​ಮಾಡಿದ್ದರಿಂದ ಆಕ್ರೋಶಗೊಂಡ ಆಕೆಯ ಅಣ್ಣ ಹಾಗೂ ಸ್ಥಳೀಯರು ವ್ಯಕ್ತಿ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಕಳೆದ ಶನಿವಾರ ಈ ಘಟನೆ ನಡೆದಿದ್ದು, ಜವಾಹರ್​ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಹಿಳೆ ಅಣ್ಣ ಹಾಗೂ ಕೆಲ ಸ್ಥಳೀಯರು ಯುವಕನ ಬಟ್ಟೆ ಕಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆಯ ಸಂಪೂರ್ಣ ದೃಶ್ಯವನ್ನ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನ ಬಂಧನ ಮಾಡಲಾಗಿದ್ದು, ಈಗಾಗಲೇ ಅವರನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಮಹಿಳೆ ಜತೆ ಟಿಕ್​ಟಾಕ್​ ಮಾಡಿರುವ ವ್ಯಕ್ತಿ ನಿತ್ಯ ಬಸ್​ಸ್ಟ್ಯಾಂಡ್​​ನಲ್ಲಿ ನಿಂತುಕೊಂಡು ಅಲ್ಲಿಗೆ ಬರುತ್ತಿದ್ದ ಯುವತಿಯರಿಗೆ ಚುಡಾಯಿಸುತ್ತಿದ್ದನು ಎಂದು ತಿಳಿದು ಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Last Updated : Feb 10, 2020, 2:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.