ETV Bharat / bharat

ಕೊನೆಗೆ ’ಕಮಲ’ವನ್ನೇ  ಮುಡಿದ ನಟಿ ಜಯಪ್ರದಾ...!

ನಟಿ ಜಯಪ್ರದಾ ಮಾಜಿ ಎಂಪಿ ಕೂಡ ಆಗಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಪಕ್ಷಗಳನ್ನು ಅಲೆದಿರುವ ಇವರು, ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

author img

By

Published : Mar 26, 2019, 2:39 PM IST

ಕಮಲ ಮುಡಿದ ನಟಿ ಜಯಪ್ರದಾ

ದೆಹಲಿ : ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಮಲ ಮುಡಿದಿದ್ದಾರೆ.

ಈ ವೇಳೆ ಮಾತನಾಡಿರುವ ಅವರು, ನಾನು ರಾಷ್ಟ್ರೀಯ ಪಕ್ಷದ ಭಾಗವಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕೆಲಸ ಮಾಡಲು ಗೌರವ ಎನ್ನಿಸುತ್ತದೆ ಎಂದಿದ್ದಾರೆ.

56 ವಯಸ್ಸಿನ ಜಯಪ್ರದಾ 1994 ರಲ್ಲಿ ಎನ್​​.ಟಿ. ರಾಮರಾವ್​ ಅವರ ತೆಲುಗು ದೇಶಂ ಪಾರ್ಟಿ ಮೂಲಕ ರಾಜಕೀಯಕ್ಕೆ ಧುಮ್ಮುಕ್ಕಿದರು. ತದನಂತರ ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದರು. ನಂತರದ ದಿನಗಳಲ್ಲಿ ಅಮರ್ ಸಿಂಗ್ ಹಾಗೂ ಜಯಪ್ರದಾ ಅವರನ್ನು ಸಮಾಜವಾದಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಬಳಿಕ ರಾಷ್ಟ್ರೀಯ ಲೋಕ್ ಮಂಚ್ ಪಕ್ಷ ಸೇರಿದ್ದರು. 2014 ರಲ್ಲಿ ಪುನಃ ಅಜಿತ್​ ಸಿಂಗ್ ಅವರ ರಾಷ್ಟ್ರೀಯ ಲೋಕ್ ದಳ ಪಕ್ಷಕ್ಕೆ ಹಾರಿದ್ದರು. ಇದೀಗ ಬಿಜೆಪಿ ಪಕ್ಷದ ಮೊರೆ ಹೋಗಿದ್ದಾರೆ.

ಜಯಪ್ರದಾ 2004 ಹಾಗೂ 2009 ರಲ್ಲಿ ಉತ್ತರ ಪ್ರದೇಶದ ರಾಮ್​ಪುರ್​ ಲೋಕಸಭಾ ಕ್ಷೇತ್ರಕ್ಕೆ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದರು.

ಇನ್ನು ಇತ್ತೀಚಿಗಷ್ಟೆ ಸಮಾಜವಾದಿ ಪಕ್ಷದ ಅಜಮ್ ಖಾನ್ ವಿರುದ್ಧ ದೌರ್ಜನ್ಯದ ಆರೋಪ ಮಾಡಿದ್ದ ಜಯಪ್ರದಾ, ಆತ ನನ್ನ ಮೇಲೆ ಆ್ಯಸಿಡ್ ದಾಳಿಗೆ ಸಂಚು ರೂಪಿಸಿದ್ದರು ಎಂದು ಹೇಳಿಕೊಂಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.