ರಾಮನಗರ( ಉತ್ತರಾಖಂಡ) : 30 ವರ್ಷದ ಆನೆ ಸಾವನ್ನಪ್ಪಿದೆ. ಆನೆ ಇದ್ದ ಅರಣ್ಯ ಪ್ರದೇಶದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಇದರ ಉಪಟಳ ಹೆಚ್ಚಾಗಿತ್ತು ಎಂದು ಸಾರ್ವಜನಿಕರು ಹೇಳಿದ್ದಾರೆ.
ಮಾನವ ಮತ್ತು ಪ್ರಾಣಿಗಳ ನಡುವೆ ನಡೆದ ಸಂಘರ್ಷದಲ್ಲಿ ಆನೆ ಮೃತಪಟ್ಟಿದೆ. ಈ ಆನೆ ಹೆದ್ದಾರಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕ ಆಸ್ತಿಗಳನ್ನು ನಾಶ ಮಾಡುತ್ತಿತ್ತು.
ಆನೆಗೆ ಜಿಪಿಎಸ್ ಅಳವಡಿಸಲಾಗಿದ್ದು, ರೇಡಿಯೊ ಕಾಲರ್ ಮೂಲಕ ಆನೆಯ ಚಲನವಲನ ಪತ್ತೆಹಚ್ಚಲಾಗುತ್ತಿತ್ತು. ಆನೆ ರಕ್ಷಣೆ ಮಾಡಲು ನಾವು ಅದಕ್ಕೆ ಮತ್ತು ಬರುವ ಔಷಧವನ್ನ ನೀಡಿದ್ದೆವು. ಆದರೆ, ಅದು ಹೈ ಡೋಜ್ ಆಗಿದ್ದರಿಂದ ಆನೆ ಮೃತ ಪಟ್ಟಿದೆ ಎಂದು ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ. ಆನೆ ಕಳೆ ಬರವನ್ನ ಶವ ಪರೀಕ್ಷೆಗಾಗಿ ಕಳುಹಿಸಿದ್ದೇವೆ. ಅಂತಿಮ ಮರಣೋತ್ತರ ಫಲಿತಾಂಶ ಬಂದ ನಂತರ ತೀರ್ಮಾನಕ್ಕೆ ಬರಬಹುದು," ಎಂದು ಕಾರ್ಬೆಟ್ ಟೈಗರ್ ರಿಸರ್ವ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಆನೆ ಗ್ರಾಮದ ಸುತ್ತಲೂ ಸಂಚರಿಸುತ್ತಿತ್ತು ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತಿತ್ತು. ಕೆಲವೊಮ್ಮೆ, ಗುಡಿಸಲುಗಳು ಮತ್ತು ಗ್ರಾಮಸ್ಥರ ವಿವಿಧ ಆಸ್ತಿಗಳು ಸಹ ಆನೆಯಿಂದ ಹಾನಿಗೊಳಗಾಗಿದ್ದವು. ಇದು ಮನುಷ್ಯ-ಪ್ರಾಣಿಗಳ ಸಂಘರ್ಷದ ಹೆಚ್ಚಳಕ್ಕೆ ಕಾರಣವಾಗಿತ್ತು. ಅಲ್ಲದೇ ಮದಗಜನ ಹಾವಳಿಯಿಂದ ಸುತ್ತಮುತ್ತಲ ಪ್ರದೇಶದ ಜನ ಭೀತಿಗೊಳಗಾಗಿದ್ದರು.