ETV Bharat / bharat

ಪಾರ್ಲರ್​ ಹೆಸ್ರಲ್ಲಿ ಸೆಕ್ಸ್​ ರಾಕೆಟ್​​... ನಾಲ್ವರು ಯುವತಿಯರು ಸೇರಿ ಏಳು ಮಂದಿಯ ಬಂಧನ - ಪಾರ್ಲರ್​ ಹೆಸರಿನಲ್ಲಿ ಸೆಕ್ಸ್​ ರಾಕೆಟ್​

ಉತ್ತರಪ್ರದೇಶದ ಮಹಾರಾಜ್​ಗಂಜ್​​ನಲ್ಲಿ ಸೆಕ್ಸ್​ ರಾಕೆಟ್​​​ ಬಯಲುಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದರ ಹಿಂದೆ ದೊಡ್ಡ ಜಾಲ ಇರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Uttar Pradesh
Uttar Pradesh
author img

By

Published : Sep 2, 2020, 3:16 PM IST

ಲಕ್ನೋ: ಪಾರ್ಲರ್​ ಹೆಸರಿನಲ್ಲಿ ಸೆಕ್ಸ್​​ ರಾಕೆಟ್​ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು, ನಾಲ್ವರು ಮಹಿಳೆಯರು, ಇಬ್ಬರು ಗ್ರಾಹಕರು ಸೇರಿ ಏಳು ಮಂದಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸೆಕ್ಸ್​ ರಾಕೆಟ್​​​ ಬಯಲು

ಉತ್ತರಪ್ರದೇಶದ ಮಹಾರಾಜ್​ಗಂಜ್​ ಪಟ್ಟಣದಲ್ಲಿನ ಪಾರ್ಲರ್​​ವೊಂದರಲ್ಲಿ ಈ ದಂಧೆ ನಡೆಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಮಹಿಳೆಯೋರ್ವಳು ವಾಟ್ಸಪ್​​ ಮೂಲಕ ಗ್ರಾಹಕರನ್ನ ಸಂಪರ್ಕಿಸಿ, ಪಾರ್ಲರ್​​ನಲ್ಲಿ ಕೆಲಸ ಮಾಡ್ತಿದ್ದ ಹುಡುಗಿಯರ ಫೋಟೋ ಕಳುಹಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಈ ದಂಧೆಯಲ್ಲಿ ಕಾಲೇಜ್​ವೊಂದರ ಅನೇಕ ವಿದ್ಯಾರ್ಥಿನಿಯರು ಸಹ ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೆರೆಹೊರೆಯ ವ್ಯಕ್ತಿಯೊಬ್ಬರು ನೀಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಮಂದಿ ಹುಡುಗಿಯರ ಛಾಯಾಚಿತ್ರ ಹೊಂದಿರುವ ಅಲ್ಬಮ್​ ಕೂಡ ವಶಕ್ಕೆ ಪಡೆದುಕೊಂಡಿದ್ದು, ಸ್ಥಳದಿಂದ ವಿವಿಧ ಡ್ರಗ್ಸ್​​​​​ ಮತ್ತು ಅಕ್ರಮ ವಸ್ತು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.