ETV Bharat / bharat

ಕೊರೊನಾ ಮತ್ತು ಹೈಪರ್​ವಿಸ್ಕೋಸಿಟಿ ನಡುವಿನ ಸಂಬಂಧ ಪತ್ತೆ ಹಚ್ಚಲು ಯುಎಸ್ ವೈದ್ಯರ ಅಧ್ಯಯನ - thickness of blood, clotting and inflammation in COVID-19 patients

ಕೊರೊನಾಗೆ ತುತ್ತಾದ ಅನೇಕ ರೋಗಿಗಳು ವೈವಿಧ್ಯಮಯ ರಕ್ತ ಹೆಪ್ಪುಗಟ್ಟುವಿಕೆಯನ್ನು ಏಕೆ ಹೊಂದಿದ್ದಾರೆ ಎಂಬುದು ನಿಗೂಢವಾಗಿದೆ. ಇದು ಏಕೆ ಆಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮ್ಮ ವಿಶಿಷ್ಟ ಪರೀಕ್ಷಾ ಕಾರ್ಯತಂತ್ರಗಳನ್ನು ಮೀರಿ ಯೋಚಿಸಬೇಕಾಗಿದೆ ಎಂಬುದನ್ನು ನಾವು ಅರಿತುಕೊಂಡಿದ್ದೇವೆ ಎಂದು ಸಹಾಯಕ ಪ್ರಾಧ್ಯಾಪಕ ಚೆರಿಲ್ ಮೇಯರ್ ಹೇಳಿದ್ದಾರೆ.

ಯುಎಸ್ ವೈದ್ಯರು ಅಧ್ಯಯನ
ಯುಎಸ್ ವೈದ್ಯರು ಅಧ್ಯಯನ
author img

By

Published : Jun 10, 2020, 6:39 PM IST

ಹೈದರಾಬಾದ್ : ಕೊರೊನಾ ಸೋಂಕಿಗೆ ಒಳಗಾದ ಅನೇಕ ರೋಗಿಗಳಲ್ಲಿ ಅಸಾಮಾನ್ಯ ರಕ್ತ ಹೆಪ್ಪುಗಟ್ಟುವಿಕೆ ಗಮನಿಸಿದ ನಂತರ ಅಮೆರಿಕದ ಎಮೋರಿ ವಿಶ್ವವಿದ್ಯಾಲಯದ (ಆಸ್ಪತ್ರೆ ಮತ್ತು ಶಿಕ್ಷಣ) ವೈದ್ಯರು, ಹೈಪರ್​ವಿಸ್ಕೋಸಿಟಿ ಎಂದು ಕರೆಯಲ್ಪಡುವ ಉರಿಯೂತ ಮತ್ತು ರಕ್ತ ಹೆಪ್ಪುಗಟ್ಟಬಹುದು ಎಂದು ಊಹಿಸಿದ್ದಾರೆ.

ಕೊರೊನಾಗೆ ತುತ್ತಾದ ಅನೇಕ ರೋಗಿಗಳು ವೈವಿಧ್ಯಮಯ ರಕ್ತ ಹೆಪ್ಪುಗಟ್ಟುವಿಕೆಯನ್ನು ಏಕೆ ಹೊಂದಿದ್ದಾರೆ ಎಂಬುದು ನಿಗೂಢವಾಗಿದೆ. ಇದು ಏಕೆ ಆಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮ್ಮ ವಿಶಿಷ್ಟ ಪರೀಕ್ಷಾ ಕಾರ್ಯತಂತ್ರಗಳನ್ನು ಮೀರಿ ಯೋಚಿಸಬೇಕಾಗಿದೆ ಎಂಬುದನ್ನು ನಾವು ಅರಿತುಕೊಂಡಿದ್ದೇವೆ ಎಂದು ಸಹಾಯಕ ಪ್ರಾಧ್ಯಾಪಕ ಚೆರಿಲ್ ಮೇಯರ್ ಹೇಳಿದ್ದಾರೆ.

ಎಮೋರಿ ಹೆಲ್ತ್‌ಕೇರ್ ತೀವ್ರ ನಿಗಾ ಘಟಕಗಳಿಗೆ (ಐಸಿಯು) ದಾಖಲಾದ ನ್ಯುಮೋನಿಯಾ ಹೊಂದಿರುವ 15 ಗಂಭೀರ ಅನಾರೋಗ್ಯದ ಕೋವಿಡ್​-19 ರೋಗಿಗಳಲ್ಲಿ ವೈದ್ಯರು ಪ್ಲಾಸ್ಮಾ ಸ್ನಿಗ್ಧತೆಯನ್ನು (ರಕ್ತ ಪ್ಲಾಸ್ಮಾ ದಪ್ಪ) ಪರೀಕ್ಷಿಸಿದರು. ಅವರೆಲ್ಲರೂ ಸಾಮಾನ್ಯ ಶ್ರೇಣಿಗಿಂತ ಹೆಚ್ಚಿನ ಪ್ಲಾಸ್ಮಾ ಸ್ನಿಗ್ಧತೆಯ ಮಟ್ಟ ಹೊಂದಿದ್ದರು. ಅನಾರೋಗ್ಯದ ರೋಗಿಗಳು ಹೆಚ್ಚಿನ ಪ್ಲಾಸ್ಮಾ ಸ್ನಿಗ್ಧತೆಯ ಮಟ್ಟ ಹೊಂದಿದ್ದರು. ಸಾಮಾನ್ಯ ಮಟ್ಟಕ್ಕಿಂತ ಎರಡು ಪಟ್ಟು ಹೆಚ್ಚು, ಮತ್ತು ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಹೆಚ್ಚಿರುವುದು ಕಂಡು ಬಂದಿತು.

ಕೊರೊನಾ ರೋಗಿಗಳಿಗೆ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಲು ಔಷಧಿಗಳನ್ನು ಶಿಫಾರಸು ಮಾಡಿದರೂ ಹೆಪ್ಪುಗಟ್ಟುವಿಕೆ ಇನ್ನೂ ಸಂಭವಿಸಿದೆ. ಇದು ತುಂಬಾ ಅಸಾಮಾನ್ಯ ಎಂದು ಮೇಯರ್ ಹೇಳಿದ್ದಾರೆ. ಒಂದು ಪ್ರಮುಖ ವಿಷಯವೆಂದರೆ ಅತಿ ಹೆಚ್ಚು ಮಟ್ಟದ ಫೈಬ್ರಿನೊಜೆನ್, ದೊಡ್ಡ ಜಿಗುಟಾದ ಪ್ರೋಟೀನ್ ಉರಿಯೂತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಯಾರಿಸುವ ಪ್ರಮುಖ ವಸ್ತುವಾಗಿವೆ. ಫೈಬ್ರಿನೊಜೆನ್ ಪ್ಲಾಸ್ಮಾ ಸ್ನಿಗ್ಧತೆಯನ್ನು ಸಹ ಹೆಚ್ಚಿಸುತ್ತದೆ ಎಂದು ಮೇಯರ್ ಅರಿತುಕೊಂಡರು.

ಆದ್ದರಿಂದ ತಂಡವು ಸ್ನಿಗ್ಧತೆಯ ಪರೀಕ್ಷೆ ನಡೆಸಿತು. ಇದು ರಕ್ತದ ದಪ್ಪವನ್ನು ನಿರ್ಧರಿಸಲು ಸಹಾಯ ಮಾಡಲು ಗಾಜಿನ ಕೊಳವೆಗಳೊಂದಿಗೆ ಹಳೆಯ ಶೈಲಿಯ ಪ್ರಯೋಗಾಲಯ ಪರೀಕ್ಷೆ ಬಳಸುತ್ತದೆ. ಚಿಕಿತ್ಸಕ ಪ್ಲಾಸ್ಮಾ ವಿನಿಮಯದ ಬಳಕೆಯನ್ನು ಒಳಗೊಂಡಂತೆ ಈ ಹೊಸ ಶೋಧನೆಯ ಆಧಾರದ ಮೇಲೆ ತಂಡವು ಪರ್ಯಾಯ ಚಿಕಿತ್ಸಾ ಆಯ್ಕೆಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದೆ. ಇದು ರಕ್ತವನ್ನು ಥಿನ್ ಮಾಡುತ್ತದೆ ಮತ್ತು ಹೈಪರ್​ವಿಸ್ಕೋಸಿಟಿಗೆ ಸಂಬಂಧಿಸಿದ ಇತರ ಪರಿಸ್ಥಿತಿಗಳಿಗೆ ಪ್ರಮಾಣಿತ ಚಿಕಿತ್ಸೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.