ETV Bharat / bharat

ಪೌರತ್ವ ಕಾಯ್ದೆಯನ್ನು ಬ್ರಿಟಿಷರ ಕ್ರೂರ 'ರೌಲಟ್​ ಕಾಯ್ದೆ'ಗೆ ಹೋಲಿಸಿದ ಊರ್ಮಿಳಾ

1919 ರ ರೌಲಟ್​ ಕಾಯ್ದೆ ಹಾಗೂ 2019 ರ ಪೌರತ್ವ (ತಿದ್ದುಪಡಿ) ಕಾಯ್ದೆ ಇವೆರಡೂ ಭಾರತದ ಇತಿಹಾಸದಲ್ಲಿ ಕರಾಳ ಕಾನೂನುಗಳಾಗಿವೆ ಎಂದು ನಟಿ-ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ.

author img

By

Published : Jan 31, 2020, 12:18 PM IST

Urmila Matondkar
ನಟಿ-ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್

ಪುಣೆ: ಕೇಂದ್ರ ಸರ್ಕಾರದ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಬ್ರಿಟಿಷರ ರೌಲಟ್​ ಕಾಯ್ದೆಗೆ ಹೋಲಿಕೆ ಮಾಡಿ ನಟಿ-ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಕಟುವಾಗಿ ಟೀಕಿಸಿದ್ದಾರೆ.

ಮೊದಲನೇ ಮಹಾಯುದ್ಧದ ಬಳಿಕ ಭಾರತದಲ್ಲಿ ಅಶಾಂತಿ ಹರಡುತ್ತಿದೆ ಎಂದು ಬ್ರಿಟಿಷರಿಗೆ ತಿಳಿದಿತ್ತು. ಹೀಗಾಗಿ 1919 ರಲ್ಲಿ ರೌಲಟ್​ ಕಾಯ್ದೆಯಂತಹ ಕ್ರೂರ ಕಾನೂನನ್ನು ಜಾರಿಗೆ ತಂದರು. 1919 ರ ರೌಲಟ್​ ಕಾಯ್ದೆ ಹಾಗೂ 2019 ರ ಪೌರತ್ವ (ತಿದ್ದುಪಡಿ) ಕಾಯ್ದೆ ಇವೆರಡೂ ಭಾರತದ ಇತಿಹಾಸದಲ್ಲಿ ಕರಾಳ ಕಾನೂನುಗಳಾಗಿವೆ ಎಂದು ಊರ್ಮಿಳಾ ಹೇಳಿದ್ದಾರೆ.

ಪೌರತ್ವ ಕಾಯ್ದೆಯನ್ನು ಬ್ರಿಟಿಷರ 'ರೌಲಟ್​ ಕಾಯ್ದೆ'ಗೆ ಊರ್ಮಿಳಾ ಹೋಲಿಕೆ

ಮಹಾತ್ಮಾ ಗಾಂಧಿ ಪುಣ್ಯಸ್ಮರಣೆಯ ಅಂಗವಾಗಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ ಸಿಎಎ,ಎನ್​ಆರ್​ಸಿ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಊರ್ಮಿಳಾ, ಮಹಾತ್ಮಾ ಗಾಂಧಿ ಹಿಂದುತ್ವದ ನಿಜವಾದ ಅನುಯಾಯಿಯಾಗಿದ್ದರು, ಗಾಂಧಿಯನ್ನ ಗುಂಡಿಕ್ಕಿ ಹತ್ಯೆಗೈದ ನಾಥೂರಾಮ್​ ಘೋಡ್ಸೆ ಕೂಡ ಒಬ್ಬ ಹಿಂದೂ. ಸಿಎಎ ಬೆಂಬಲಿಸುವವರು ಹಾಗೂ ಅವರ ನಾಯಕರು ರಾಜ್‌ಘಾಟ್‌ಗೆ ಹೋಗಿ ಗಾಂಧಿಗೆ ಗೌರವ ಸಲ್ಲಿಸಬೇಕಾಗಿದ್ದು, ಗಾಂಧೀಜಿಯವರ ಸಿದ್ಧಾಂತ ಇನ್ನೂ ಜೀವಂತವಾಗಿದೆ ಎಂಬುದನ್ನು ಎತ್ತಿ ಹೇಳುತ್ತದೆ ಎಂದರು.

ರೌಲಟ್​ ಕಾಯ್ದೆ ಹಾಗೂ ಪೌರತ್ವ ಕಾಯ್ದೆಯನ್ನು ಕಪ್ಪು ಚುಕ್ಕೆಯಾಗಿ ಇತಹಾಸ ನೆನಪಿಸಿಕೊಳ್ಳುತ್ತದೆ. ಸಿಎಎ ಬಡವರ ವಿರೋಧಿಯಾಗಿದ್ದು, ನಮ್ಮ ಭಾರತೀಯತ್ವಕ್ಕೆ ಇದು ಸವಾಲಾಗಿದೆ. ಹಾಗಾಗಿ ಈ ಕಾಯ್ದೆಯನ್ನ ನಾವು ಒಪ್ಪುವುದಿಲ್ಲ ಎಂದು ಊರ್ಮಿಳಾ ಖಡಕ್​ ಮಾತುಗಳನ್ನಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.