ETV Bharat / bharat

UPSC ಫಸ್ಟ್ ರ‍್ಯಾಂಕ್ ಬರಲು ಸ್ನೇಹಿತೆಯೇ ಕಾರಣ... ಗುಣದಲ್ಲೂ ಟಾಪರಾದ ಕನಿಷ್ಕಗೆ ನೆಟಿಜನ್ಸ್ ಫಿದಾ - ಕೃತಜ್ಞತೆ

ಯುಪಿಎಸ್​ಸಿ ಪರೀಕ್ಷೆಯಲ್ಲಿ ಟಾಪರ್​ ಆಗಿ ಹೊರಹೊಮ್ಮಿರುವ ಕನಿಷ್ಕ ಕಟಾರಿಯಾ ತನ್ನ ಸಾಧನೆಯ ಕ್ರೆಡಿಟ್​ ಗೆಳತಿಗೆ ನೀಡಿದ್ದಾರೆ. ಯುವಕನ ಈ ಗುಣಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡುತ್ತಿದ್ದಾರೆ.

UPSCಯಲ್ಲಿ ಕನಿಷ್ಕ ಟಾಪರ್​
author img

By

Published : Apr 8, 2019, 5:54 PM IST

ಜೈಪುರ: ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರ್ತಾಳೆ. ಎಷ್ಟೋ ಮಂದಿ ಸಾಧನೆ ಬಳಿಕ ಬೆನ್ನಹಿಂದೆ ಇದ್ದು ನೆರವಾದ ವನಿತೆಯನ್ನ ಸ್ಮರಿಸೋದಿಲ್ಲ. ಆದರೆ, 2018ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟಾಪರಾದ ಕನಿಷ್ಕ ಕಟಾರಿಯಾ ತಮ್ಮ ಸಾಧನೆಯ ಕ್ರೆಡಿಟ್‌ನ ಗರ್ಲ್‌ಫ್ರೆಂಡ್‌ಗೆ ಕೊಟ್ಟಿದ್ದಾರೆ. ಯುವಕನ ಈ ಗುಣಕ್ಕೆ ನೆಟಿಜನ್ಸ್‌ ಮಾರು ಹೋಗಿದ್ದಾರೆ.

UPSC
ಕನಿಷ್ಕ ಕಟಾರಿಯಾ

ಸೋತ್ರೆ ಗರ್ಲ್‌ಫ್ರೆಂಡ್‌ ಅಂತೀರಿ, ಸಾಧಿಸಿದ್ರೇ ಆಕೆ ನೆನಪಿರಲ್ಲ :
ಸೋತರೆ ಗರ್ಲ್‌ಫ್ರೆಂಡ್ ಸಹವಾಸ ಅಂತಾ ದೂರುವವರಿದ್ದಾರೆ. ಆದರೆ, ರಾಜಸ್ಥಾನದ ಜೈಪುರದ ಕನಿಷ್ಕ ಕಟಾರಿಯಾ ಎಲ್ಲರಂತಲ್ಲ. ಬಾಂಬೆ ಐಐಟಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಮತ್ತು ಇಂಜಿನಿಯರಿಂಗ್‌ನಲ್ಲಿ ಬಿಟೆಕ್‌ ಪದವಿ ಪಡೆದ ಕನಿಷ್ಕ, ಕೊರಿಯಾದಲ್ಲಿ ಪ್ರತಿಷ್ಠಿತ ಸ್ಯಾಮಸಂಗ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿದ್ದರು. ಈ ಪ್ರತಿಭಾವಂತನಿಗೆ ಪ್ರಾಣ ಸ್ನೇಹಿತೆ ಸಿವಿಲ್‌ ಸರ್ವೀಸಸ್‌ ಎಕ್ಸಾಂಗೆ ಯಾಕೆ ಓದಬಾರದು ಅಂತಾ ಕೇಳಿದ್ದಳು. ಗೆಳತಿಯ ಮಾತು ಕೇಳಿ ಕನಿಷ್ಕ ತವರಿಗೆ ವಾಪಸಾಗಿ ಯಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಮೊನ್ನೆ ಶುಕ್ರವಾರ 2018ರ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಬಂದಿತ್ತು. ಅಚ್ಚರಿ ಎಂಬಂತೆ ಕನಿಷ್ಕ ಫಸ್ಟ್ ರ‍್ಯಾಂಕ್ನಲ್ಲಿ ಪಾಸಾಗಿದ್ದರು. ತನ್ನಿಂದಾಗುತ್ತಾ ಅಂತಾ ಕೂತವನಿಗೆ ಗೆಳತಿ ಧೈರ್ಯ ತುಂಬಿದ್ದಳು. ನಿನ್ನಿಂದ ಸಾಧ್ಯ ಕಣೋ ಅಂತಾ ಹುರುದುಂಬಿಸಿದ್ದಳಂತೆ. ಜತೆಗೆ ಸೋದರಿ, ತಾಯಿ ಮತ್ತು ತಂದೆ ಸಹಕಾರವಂತೂ ಇದ್ದೇ ಇತ್ತು.

UPSC
ಕನಿಷ್ಕ ಕಟಾರಿಯಾ ಫ್ಯಾಮಿಲಿ

ನನ್ನ ಈ ಸಾಧನೆಗೆ ಗೆಳತಿಯ ನೈತಿಕ ಬೆಂಬಲವೂ ಕಾರಣ:
'ಇದನ್ನ ನಾನು ನಿಜಕ್ಕೂ ನಂಬಲಾಗುತ್ತಿಲ್ಲ. ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಫಸ್ಟ್‌ ರ‍್ಯಾಂಕ್ ಬರ್ತೇನೆ ಅಂದ್ಕೊಂಡಿರಲಿಲ್ಲ. ನನ್ನ ಹೆತ್ತವರಿಗೆ, ಸೋದರಿಗೆ ನಾನು ಕೃತಜ್ಞತೆ ಸಲ್ಲಿಸುವೆ. ಅದರಲ್ಲೂ ಪ್ರಾಣ ಸ್ನೇಹಿತೆಗೆ ಧನ್ಯವಾದ ಹೇಳುವೆ. ಯಾಕಂದರೆ, ದೂರದಲ್ಲಿದ್ದರೂ ನನಗೆ ಆಕೆ ಸಹಾಯ ಮಾಡಿರೋದಷ್ಟೇ ಅಲ್ಲ, ನೈತಿಕ ಬೆಂಬಲವಾಗಿ ನಿಂತಿದ್ದಳು. ನನ್ನ ತಂದೆ-ತಾಯಿ, ಸೋದರಿ ಜತೆಗೇ ಸೋನಲ್‌ ಎಂಬ ಸ್ನೇಹಿತೆಯಿಂದಾಗಿ ನಾನು ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದೆ. ಆ ಸಾಧನೆಯ ಬಹುಪಾಲು ಕ್ರೆಡಿಟ್ ಪ್ರಾಣದ ಗೆಳತಿಗೇ ಸಲ್ಲಿಸುವೆ. ಜನ ನಾನೊಬ್ಬ ಒಳ್ಳೇ ಆಡಳಿತಗಾರನಾಗಬೇಕೆಂದು ಬಯಸುತ್ತಾರೆ. ನಿಜ ಹೇಳಬೇಕೆಂದರೆ ನನ್ನ ಉದ್ದೇಶವೂ ಅದೇ ಆಗಿದೆ' ಅಂತಾ ಕನಿಷ್ಕ ಕಟಾರಿಯಾ ಹೇಳಿಕೊಂಡಿದ್ದರು.

ಕಬ್ಬಿಣದ ಕಡಲೆ ಗಣಿತ ಐಚ್ಛಿಕ ವಿಷಯವಾಗಿ ಆಯ್ಕೆ :
ಎಸ್‌ಸಿ ಸಮುದಾಯಕ್ಕೆ ಸೇರಿದ ಕನಿಷ್ಕ, ಯುಪಿಎಸ್‌ಸಿ ಎಕ್ಸಾಂಗೆ ಮ್ಯಾಥಮ್ಯಾಟಿಕ್ಸ್‌ನ ಐಚ್ಛಿಕ ವಿಷಯವಾಗಿ ಆಯ್ದುಕೊಂಡಿದ್ದರು. ಗಣಿತ ಇವರಿಗೆ ಕಷ್ಟ ಅಂತಾ ಅನ್ನಿಸಿರಲೇ ಇಲ್ಲ. ಅದಕ್ಕೆ ಕಾರಣವೇ ಗೆಳತಿ. ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಆ ಕ್ರೆಡಿಟ್‌ನ ಸ್ನೇಹಿತೆಗೆ ಅರ್ಪಿಸಿರೋದು ಇತಿಹಾಸದಲ್ಲಿಯೇ ಇದೇ ಮೊದಲು ಅಂತಾ ಅನ್ನಿಸುತ್ತೆ. ಅದಕ್ಕಾಗಿ ಕನಿಷ್ಕ ಗುಣವನ್ನ ಈಗ ಸೋಷಿಯಲ್ ಮೀಡಿಯಾದಲ್ಲೂ ಕೊಂಡಾಡುತ್ತಿದ್ದಾರೆ.

ಗರ್ಲ್‌ ಫ್ರೆಂಡ್‌ಗೆ ಕ್ರೆಡಿಟ್‌ ಕೊಟ್ಟಿದ್ದಕ್ಕೆ ನೆಟಿಜನ್ಸ್‌ ಶ್ಲಾಘನೆ :
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮೇಲೆ ಅದನ್ನ ಒಬ್ಬ ಸ್ನೇಹಿತೆಗೆ ಆ ಕ್ರೆಡಿಟ್‌ ಕೊಟ್ಟಿರೋದು ಇದೇ ಮೊದಲು. ನಿಜಕ್ಕೂ ಕನಿಷ್ಕ ಗ್ರೇಟ್ ಅಂತಾ ಹೇಳ್ತಿದ್ದಾರೆ ನೆಟಿಜನ್ಸ್‌. ಅದರಲ್ಲೊಂದಿಷ್ಟು ಸ್ಟೇಟಸ್‌ಗಳು ಈ ರೀತಿ ಇವೆ.

  • UPSC ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಆಗಲು ಗರ್ಲ್‌ಫ್ರೆಂಡ್ ಇದ್ರೇ ಒಳ್ಳೇಯದು..
  • ಇದು ದೇಶ ಬದಲಾಗಿರುವುದರ ಸಂಕೇತ..
  • ತುಂಬಾ ಖುಷಿಯಾಗುತ್ತಿದೆ ಸ್ನೇಹಿತೆಗೂ ಕ್ರೆಡಿಟ್ ಕೊಟ್ಟಿರೋದಕ್ಕೆ..
  • ಸೋಲಿಗೆ ಗರ್ಲ್‌ಫ್ರೆಂಡ್‌ ಮೇಲೆ ಗೂಬೆ ಕೂರಿಸುವವರು, ಅದೇ ಸಾಧಿಸಿದಾಗ ಆಕೆಗೆ ಕ್ರೆಡಿಟ್‌ ಕೊಡಲ್ಲ..
  • ಕನಿಷ್ಕ ಪ್ರಾಮಾಣಿಕತೆಗೆ ಶರಣು..
  • ಈಗ ಪರೀಕ್ಷೆಗೆ ಓದುವವರಿಗೆ ಹೆತ್ತವರು ಹೇಗೆ ಓದುತ್ತಿಯಾ ಅಂತಾ ಕೇಳದೇ, ಗರ್ಲ್‌ಫ್ರೆಂಡ್‌ ಹೊಂದಿರುವೆಯಾ ಅಂತಾ ಕೇಳಬಹುದು..
  • ಇದು ಬದಲಾದ ಭಾರತ..
  • ಇದು ನಿಜಕ್ಕೂ ಪ್ರೀತಿ ಹೆಚ್ಚಿಸುತ್ತದೆ..
  • ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಗರ್ಲ್ ಫ್ರೆಂಡ್‌ಗೆ ಕ್ರೆಡಿಟ್ ಕೊಟ್ಟಿರೋದು ಗ್ರೇಟ್‌..
  • ಗರ್ಲ್‌ಫ್ರೆಂಡ್‌ಗೆ ಕ್ರೆಡಿಟ್ ಕೊಡಲು ಹಿಂಜರಿದಿಲ್ಲ..
  • ನಿಜಕ್ಕೂ ನೀವು ಗ್ರೇಟ್‌ ಮ್ಯಾನ್..
    UPSC
    ಕನಿಷ್ಕ ಕಟಾರಿಯಾ

ಕ್ರೀಡೆಯ ಬಗ್ಗೆ ಕನಿಷ್ಕಗೆ ತುಂಬಾ ಕ್ರೇಜ್‌ ಅಂತೆ :
ಕ್ರಿಕೆಟ್‌, ಫುಟ್ಬಾಲ್ ಮತ್ತು ಟೆನಿಸ್‌ ತುಂಬಾ ಇಷ್ಟಪಡ್ತೇನೆ. ಓದಿಗೆ ಒಂದು ನಿರ್ಧಿಷ್ಟ ಮಾನದಂಡವಿಲ್ಲ. ಒಬ್ಬರಿಂದ ಒಬ್ಬರಿಗೆ ಓದಿನ ಕ್ರಮ ಬೇರೆ ಬೇರೆಯಾಗಿರುತ್ತೆ. ಯಾವುದೇ ಒಂದು ವಿಷಯ ತಿಳಿಯುವ ಸಾಮರ್ಥ್ಯದ ಮೇಲೆ ಅದೆಲ್ಲ ನಿರ್ಧಾರವಾಗುತ್ತೆ. ಆದರೆ, ಯಾರೇ ಆದರೂ ಪರಿಶ್ರಮ ಹಾಕಲೇಬೇಕು. ಇಲ್ಲದಿದ್ರೇ ಸಾಧನೆ ಮಾಡೋಕೆ ಸಾಧ್ಯವಿಲ್ಲ. ನಾನು ಇಷ್ಟಪಡುವ ಕ್ರೀಡಾಪಟುಗಳೆಲ್ಲ ಕಠಿಣ ಪರಿಶ್ರಮಪಡ್ತಾರೆ. ಅದೇ ರೀತಿ ನಾನೂ ಪರಿಶ್ರಮದಿಂದಲೇ ಸಾಧನೆ ಮಾಡೋಕೆ ಸಾಧ್ಯವಾಗಿದೆ ಅಂತಾರೆ ಕನಿಷ್ಕ ಕಟಾರಿಯಾ. ಏನೇ ಆಗಲಿ ಸಹಾಯ ಮಾಡಿದವರು, ಕಷ್ಟ ಕಾಲದಲ್ಲಿ ಕೈ ಹಿಡಿದವರ ಬಗ್ಗೆ ಒಂದಿಷ್ಟು ಸ್ಮರಣೆ ಮಾಡಿಕೊಳ್ಳಬೇಕಾಗಿರುವುದು ಅವಶ್ಯ. ಇಲ್ಲದಿದ್ರೇ ವ್ಯಕ್ತಿ ಎಷ್ಟೇ ದೊಡ್ಡವನಾದರೂ ಆತ ಕೃತಘ್ನ ಆಗಿಬಿಡುವ ಸಾಧ್ಯತೆಯಿರುತ್ತೆ. ಕನಿಷ್ಕ ಪರೀಕ್ಷೆಯಲ್ಲಷ್ಟೇ ಟಾಪರ್‌ ಅಲ್ಲ, ಸ್ನೇಹಿತೆಯ ಸಪೋರ್ಟ್‌ನ ಸ್ಮರಿಸಿ ಗುಣದಲ್ಲೂ ಟಾಪರ್‌ ಅಂತಾ ಅನ್ನಿಸಿಕೊಂಡಿದ್ದಾರೆ.

Intro:Body:

UPSC ಫಸ್ಟ್ ಱಂಕ್‌ ಬರಲ ಸ್ನೇಹಿತೆಯೇ ಕಾರಣ.. ಗುಣದಲ್ಲೂ ಟಾಪರಾದ ಕನಿಷ್ಕಗೆ ನೆಟಿಜನ್ಸ್ ಫಿದಾ!

ಜೈಪುರ: ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರ್ತಾಳೆ. ಎಷ್ಟೋ ಮಂದಿ ಸಾಧನೆ ಬಳಿಕ ಬೆನ್ನಹಿಂದೆ ಇದ್ದ ನೆರವಾದ ವನಿತೆಯನ್ನ ಸ್ಮರಿಸೋದಿಲ್ಲ. ಆದರೆ, 2018ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟಾಪರಾದ ಕನಿಷ್ಕ ಕಟಾರಿಯಾ ತಮ್ಮ ಸಾಧನೆಯ ಕ್ರೆಡಿಟ್‌ನ ಗರ್ಲ್‌ಫ್ರೆಂಡ್‌ ಕೊಟ್ಟಿದ್ದಾರೆ. ಯುವಕನ ಈ ಗುಣಕ್ಕೆ ನೆಟಿಜನ್ಸ್‌ ಮಾರುಹೋಗಿದ್ದಾರೆ.

ಸೋತ್ರೆ ಗರ್ಲ್‌ಫ್ರೆಂಡ್‌ ಅಂತೀರಿ, ಸಾಧಿಸಿದ್ರೇ ಆಕೆ ನೆನಪಿರಲ್ಲ :

ಸೋತರೆ ಗರ್ಲ್‌ಫ್ರೆಂಡ್ ಸಹವಾಸ ಅಂತಾ ದೂರುವವರಿರಿದ್ದಾರೆ. ಆದರೆ, ರಾಜಸ್ಥಾನದ ಜೈಪುರo ಕನಿಷ್ಕ ಕಟಾರಿಯಾ ಎಲ್ಲರಂತಲ್ಲ. ಬಾಂಬೆ ಐಐಟಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಮತ್ತು ಇಂಜಿನಿಯರಿಂಗ್‌ನಲ್ಲಿ ಬಿಟೆಕ್‌ ಪದವಿ ಪಡೆದ ಕನಿಷ್ಕ. ಕೊರಿಯಾದಲ್ಲಿ ಪ್ರತಿಷ್ಠಿತ ಸ್ಯಾಮಸಂಗ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿದ್ದರು. ಈ ಪ್ರತಿಭಾವಂತನಿಗೆ ಪ್ರಾಣಸ್ನೇಹಿತೆ ಸಿವಿಲ್‌ ಸರ್ವೀಸಸ್‌ ಎಕ್ಸಾಂಗೆ ಯಾಕೆ ಓದಬಾರದು ಅಂತಾ ಕೇಳಿದ್ದಳು. ಗೆಳತಿಯ ಮಾತು ಕೇಳಿ ಕನಿಷ್ಕ ತವರಿಗೆ ವಾಪಸಾಗಿ ಯಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ. ಮೊನ್ನೆ ಶುಕ್ರವಾರ 2018ರ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಬಂದಿತ್ತು. ಅಚ್ಚರಿ ಎಂಬಂತೆ ಕನಿಷ್ಕ ಫಸ್ಟ್ ಱಂಕ್‌ನಲ್ಲಿ ಪಾಸಾಗಿದ್ದರು. ತನ್ನಿಂದಾಗುತ್ತಾ ಅಂತಾ ಕೂತವನಿಗೆ ಗೆಳತಿ ಧೈರ್ಯ ತುಂಬಿದ್ದಳು. ನಿನ್ನಿಂದ ಸಾಧ್ಯ ಕಣೋ ಅಂತಾ ಹುರುದುಂಬಿಸಿದ್ದಳಂತೆ. ಜತೆಗೆ ಸೋದರಿ,  ತಾಯಿ ಮತ್ತು ತಂದೆ ಸಹಕಾರವಂತೂ ಇದ್ದೇ ಇತ್ತು. 

ನನ್ನ ಈ ಸಾಧನೆಗೆ ಗೆಳತಿಯ ನೈತಿಕ ಬೆಂಬಲವೂ ಕಾರಣ: 

'ಇದನ್ನ ನಾನು ನಿಜಕ್ಕೂ ನಂಬಲಾಗುತ್ತಿಲ್ಲ. ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಫಸ್ಟ್‌ ಱಂಕ್‌ ಬರ್ತೇನೆ ಅಂದ್ಕೊಂಡಿರಲಿಲ್ಲ. ನನ್ನ ಹೆತ್ತವರಿಗೆ, ಸೋದರಿಗೆ ನಾನು ಕೃತಜ್ಞತೆ ಸಲ್ಲಿಸುವೆ. ಅದರಲ್ಲೂ ಪ್ರಾಣ ಸ್ನೇಹಿತೆಗೆ ಧನ್ಯವಾದ ಹೇಳುವೆ. ಯಾಕಂದ್ರೇ, ದೂರದಲ್ಲಿದ್ದರೂ ನನಗೆ ಆಕೆ ಸಹಾಯ ಮಾಡಿರೋದಷ್ಟೇ ಅಲ್ಲ, ನೈತಿಕ ಬೆಂಬಲವಾಗಿ ನಿಂತಿದ್ದಳು. ನನ್ನ ತಂದೆ-ತಾಯಿ, ಸೋದರಿ ಜತೆಗೇ ಸೋನಲ್‌ ಎಂಬ ಸ್ನೇಹಿತೆಯಿಂದಾಗಿ ನಾನು ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದೆ. ಆ ಸಾಧನೆ ಬಹುಪಾಲು ಕ್ರೆಡಿಟ್ ಪ್ರಾಣದ ಗೆಳತಿಗೇ ಸಲ್ಲಿಸುವೆ. ಜನ ನಾನೊಬ್ಬ ಒಳ್ಳೇ ಆಡಳಿತಗಾರನಾಗಬೇಕೆಂದು ಬಯಸುತ್ತಾರೆ. ನಿಜ ಹೇಳಬೇಕೆಂದ್ರೇ ನನ್ನ ಉದ್ದೇಶವೂ ಅದೇ ಆಗಿದೆ' ಅಂತಾ ಕನಿಷ್ಕ ಕಟಾರಿಯಾ ಹೇಳಿಕೊಂಡಿದ್ದರು.

ಕಬ್ಬಿಣದ ಕಡಲೆ ಗಣಿತ ಐಚ್ಛಿಕ ವಿಷಯವಾಗಿ ಆಯ್ಕೆ :

ಎಸ್‌ಸಿ ಸಮುದಾಯಕ್ಕೆ ಸೇರಿದ ಕನಿಷ್ಕ, ಯುಪಿಎಸ್‌ಸಿ ಎಕ್ಸಾಂಗೆ ಮ್ಯಾಥಮ್ಯಾಟಿಕ್ಸ್‌ನ ಐಚ್ಛಿಕ ವಿಷಯವಾಗಿ ಆಯ್ದುಕೊಂಡಿದ್ದರು. ಗಣಿತ ಇವರಿಗೆ ಕಷ್ಟ ಅಂತಾ ಅನ್ನಿಸಿರಲೇ ಇಲ್ಲ. ಅದಕ್ಕೆ ಕಾರಣವೇ ಗೆಳತಿ. ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಆ ಕ್ರೆಡಿಟ್‌ನ ಸ್ನೇಹಿತೆಗೆ ಅರ್ಪಿಸಿರೋದು ಇತಿಹಾಸದಲ್ಲಿಯೇ ಇದೇ ಮೊದಲು ಅಂತಾ ಅನ್ನಿಸುತ್ತೆ. ಅದಕ್ಕಾಗಿ ಕನಿಷ್ಕ ಗುಣವನ್ನ ಈಗ ಸೋಷಿಯಲ್ ಮೀಡಿಯಾದಲ್ಲೂ ಕೊಂಡಾಡುತ್ತಿದ್ದಾರೆ.

ಗರ್ಲ್‌ ಫ್ರೆಂಡ್‌ಗೆ ಕ್ರೆಡಿಟ್‌ ಕೊಟ್ಟಿದ್ದಕ್ಕೆ ನೆಟಿಜನ್ಸ್‌ ಶ್ಲಾಘನೆ :

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮೇಲೆ ಅದನ್ನ ಒಬ್ಬ ಸ್ನೇಹಿತೆಗೆ ಆ ಕ್ರೆಡಿಟ್‌ ಕೊಟ್ಟಿರೋದು ಇದೇ ಮೊದಲು. ನಿಜಕ್ಕೂ ಕನಿಷ್ಕ ಗ್ರೇಟ್ ಅಂತಾ ಹೇಳ್ತಿದ್ದಾರೆ ನೆಟಿಜನ್ಸ್‌. ಅದರಲ್ಲೊಂದಿಷ್ಟು ಸ್ಟೇಟಸ್‌ಗಳು ಈ ರೀತಿ ಇವೆ.

* UPSC ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಆಗಲು ಗರ್ಲ್‌ಫ್ರೆಂಡ್ ಇದ್ರೇ ಒಳ್ಳೇಯದು.. 

* ಇದು ದೇಶ ಬದಲಾಗಿರುವುದರ ಸಂಕೇತ.. 

* ತುಂಬಾ ಖುಷಿಯಾಗುತ್ತಿದೆ ಸ್ನೇಹಿತೆಗೂ ಕ್ರೆಡಿಟ್ ಕೊಟ್ಟಿರೋದಕ್ಕೆ..

* ಸೋಲಿಗೆ ಗರ್ಲ್‌ಫ್ರೆಂಡ್‌ ಮೇಲೆ ಗೂಬೆ ಕೂರಿಸುವವರು, ಅದೇ ಸಾಧಿಸಿದಾಗ ಆಕೆಗೆ ಕ್ರೆಡಿಟ್‌ ಕೊಡಲ್ಲ.. 

* ಕನಿಷ್ಕ ಪ್ರಾಮಾಣಿಕತೆಗೆ ಶರಣು.. 

* ಈಗ ಪರೀಕ್ಷೆಗೆ ಓದುವವರಿಗೆ ಹೆತ್ತವರು ಹೇಗೆ ಓದುತ್ತಿಯಾ ಅಂತಾ ಕೇಳದೇ, ಗರ್ಲ್‌ಫ್ರೆಂಡ್‌ ಹೊಂದಿರುವೆಯಾ ಅಂತಾ ಕೇಳಬಹುದು..

* ಇದು ಬದಲಾದ ಭಾರತ.. 

* ಇದು ನಿಜಕ್ಕೂ ಪ್ರೀತಿ ಹೆಚ್ಚಿಸುತ್ತದೆ..

* ಸಾರ್ವಜನಿಕವಾಗಿ ಇದೇ ಮೊದಲ ಬಾರಿಗೆ ಗರ್ಲ್ ಫ್ರೆಂಡ್‌ಗೆ ಕ್ರೆಡಿಟ್ ಕೊಟ್ಟಿರೋದು ಗ್ರೇಟ್‌..

* ಗರ್ಲ್‌ಫ್ರೆಂಡ್‌ಗೆ ಕ್ರೆಡಿಟ್ ಕೊಡಲು ಹಿಂಜರಿದಿಲ್ಲ.. 

* ನಿಜಕ್ಕೂ ನೀವು ಗ್ರೇಟ್‌ ಮ್ಯಾನ್..

ಕ್ರೀಡೆಯ ಬಗ್ಗೆ ಕನಿಷ್ಕಗೆ ತುಂಬಾ ಕ್ರೇಜ್‌ ಅಂತೆ :

ಕ್ರಿಕೆಟ್‌, ಫುಟ್ಬಾಲ್ ಮತ್ತು ಟೆನಿಸ್‌ ತುಂಬಾ ಇಷ್ಟಪಡ್ತೇನೆ. ಓದಿಗೆ ಒಂದು ನಿರ್ಧಿಷ್ಟ ಮಾನದಂಡವಿಲ್ಲ. ಒಬ್ಬರಿಂದ ಒಬ್ಬರಿಗೆ ಓದಿನ ಕ್ರಮ ಬೇರೆ ಬೇರೆಯಾಗಿರುತ್ತೆ. ಯಾವುದೇ ಒಂದು ವಿಷಯ ತಿಳಿಯುವ ಸಾಮರ್ಥ್ಯದ ಮೇಲೆ ಅದೆಲ್ಲ ನಿರ್ಧಾರವಾಗುತ್ತೆ. ಆದರೆ, ಯಾರೇ ಆದರೂ ಪರಿಶ್ರಮ ಹಾಕಲೇಬೇಕು. ಇಲ್ಲದಿದ್ರೇ ಸಾಧನೆ ಮಾಡೋಕೆ ಸಾಧ್ಯವಿಲ್ಲ. ನಾನು ಇಷ್ಟಪಡುವ ಕ್ರೀಡಾಪಟುಗಳೆಲ್ಲ ಕಠಿಣ ಪರಿಶ್ರಮಪಡ್ತಾರೆ. ಅದೇ ರೀತಿ ನಾನೂ ಪರಿಶ್ರಮದಿಂದಲೇ ಸಾಧನೆ ಮಾಡೋಕೆ ಸಾಧ್ಯವಾಗಿದೆ ಅಂತಾರೆ ಕನಿಷ್ಕ ಕಟಾರಿಯಾ. ಏನೇ ಆಗಲಿ ಸಹಾಯ ಮಾಡಿದವರು, ಕಷ್ಟ ಕಾಲದಲ್ಲಿ ಕೈ ಹಿಡಿದವರ ಬಗ್ಗೆ ಒಂದಿಷ್ಟು ಸ್ಮರಣೆ ಮಾಡಿಕೊಳ್ಳಬೇಕಾಗಿರುವುದು ಅವಶ್ಯ. ಇಲ್ಲದಿದ್ರೇ ವ್ಯಕ್ತಿ ಎಷ್ಟೇ ದೊಡ್ಡವನಾದರೂ ಆತ ಕೃತಘ್ನ ಆಗಿಬಿಡುವ ಸಾಧ್ಯತೆಯಿರುತ್ತೆ. ಕನಿಷ್ಕ ಪರೀಕ್ಷೆಯಲ್ಲಷ್ಟೇ ಟಾಪರ್‌ ಅಲ್ಲ, ಸ್ನೇಹಿತೆಯ ಸಪೋರ್ಟ್‌ನ ಸ್ಮರಿಸಿ ಗುಣದಲ್ಲೂ ಟಾಪರ್‌ ಅಂತಾ ಅನ್ನಿಸಿಕೊಂಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.