ETV Bharat / bharat

ಅನ್​ಲಾಕ್​​ 5.0: ಸಿನಿಮಾ ಹಾಲ್​​, ಪ್ರವಾಸೋದ್ಯಮ ಸೇರಿ ಈ ಎಲ್ಲ ಸೇವೆಗಳಿಗೆ ಗ್ರೀನ್​ ಸಿಗ್ನಲ್​!?

ಸೆಪ್ಟೆಂಬರ್​​ 30ಕ್ಕೆ ಅನ್​ಲಾಕ್​ 4.0 ಮುಕ್ತಾಯಗೊಳ್ಳಲಿದ್ದು, ಕೇಂದ್ರ ಗೃಹಸಚಿವಾಲಯ ಇದೀಗ ಮತ್ತಷ್ಟು ಸೇವೆಗಳಿಗೆ ಗ್ರೀನ್​ ಸಿಗ್ನಲ್​ ನೀಡಿ ಆದೇಶ ಹೊರಹಾಕುವ ಸಾಧ್ಯತೆ ದಟ್ಟವಾಗಿದೆ.

author img

By

Published : Sep 28, 2020, 3:20 PM IST

Unlock 5.0
Unlock 5.0

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​​ ವಿರುದ್ಧದ ಹೋರಾಟ ಮುಂದುವರೆದಿದ್ದು, ಇದರ ನಡುವೆ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಆರ್ಥಿಕ ಚಟುವಟಿಕೆಗಳಿಗೆ ಗ್ರೀನ್​ ಸಿಗ್ನಲ್​ ನೀಡಲಾಗುತ್ತಿದೆ. ಇದೀಗ ಜಾರಿಯಲ್ಲಿರುವ ಅನ್​ಲಾಕ್​​ 4.0 ಈ ತಿಂಗಳು ಅಂತ್ಯಗೊಳ್ಳಲಿದ್ದು, ಅಕ್ಟೋಬರ್​ 1ರಿಂದ ದೇಶದಲ್ಲಿ ಅನ್​ಲಾಕ್​​​ 5.0 ಜಾರಿಯಾಗುವ ಸಾಧ್ಯತೆ ಇದೆ.

ಅನ್​ಲಾಕ್​ 5.0 ವೇಳೆ ಅನೇಕ ಆರ್ಥಿಕ ಚಟುವಟಕೆಗಳಿಗೆ ಗ್ರೀನ್​ ಸಿಗ್ನಲ್​ ನೀಡುವ ಸಾಧ್ಯತೆ ದಟ್ಟವಾಗಿದೆ. ಅತಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡಿರುವ ಏಳು ರಾಜ್ಯದ ಸಿಎಂಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿ, ಮಾಹಾಮಾರಿ ನಿಯಂತ್ರಣ ಸೇರಿ ಅನೇಕ ಸಲಹೆ ಸೂಚನೆ ಪಡೆದುಕೊಂಡಿದ್ದಾರೆ. ಕೇಂದ್ರಕ್ಕೆ ಪ್ರಮುಖವಾಗಿ ಕರ್ನಾಟಕ, ಆಂಧ್ರಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ಪಂಜಾಬ್​, ದೆಹಲಿ ಹಾಗೂ ಮಹಾರಾಷ್ಟ್ರ ಅತಿ ಹೆಚ್ಚು ಆದಾಯ ತಂದುಕೊಡುವ ರಾಜ್ಯಗಳಾಗಿರುವ ಕಾರಣ ಇಲ್ಲಿನ ಆರ್ಥಿಕ ಚಟುವಟಿಕೆ ಪುನಾರಂಭ ಮಾಡುವ ಉದ್ದೇಶದಿಂದ ಅನ್​ಲಾಕ್​ 5.0 ವೇಳೆ ಅನೇಕ ಸೇವೆಗಳಿಗೆ ಗ್ರೀನ್​ ಸಿಗ್ನಲ್​ ನೀಡುವ ಸಾಧ್ಯತೆ ಇದೆ.

ಈಗಾಗಲೇ 4.0 ಅನ್​ಲಾಕ್​ ವೇಳೆ ರೆಸ್ಟೋರೆಂಟ್​, ಜಿಮ್​, ಶಾಪಿಂಗ್​ ಮಾಲ್​ ಓಪನ್​, ಮೆಟ್ರೋ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಸಿನಿಮಾ ಹಾಲ್​, ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗ್ತಿದೆ. ದೇಶದಲ್ಲಿ ಈಗಾಗಲೇ ಬಯಲು ಚಿತ್ರಮಂದಿರ ತೆರೆಯಲು ಅನುಮತಿ ನೀಡಲಾಗಿದೆ.

ಅನ್​ಲಾಕ್​ 4.0 ವೇಳೆ 9-12ನೇ ತರಗತಿ ಶಾಲಾ-ಕಾಲೇಜ್​ ಓಪನ್​ ಮಾಡಲು ಅನುಮತಿ ನೀಡಲಾಗಿದ್ದು, ಇದೀ ವಿಶ್ವವಿದ್ಯಾಲಯ, ಕಾಲೇಜ್​​ ಆರಂಭಗೊಳ್ಳುವ ಸಾಧ್ಯತೆ ದಟ್ಟವಾಗಿವೆ. ಈಗಾಗಲೇ ಪ್ರವೇಶಾತಿ ಮುಕ್ತಾಯಗೊಂಡಿರುವ ಕಾರಣ ಈ ಹಿಂದಿನಂತೆ ಕಾಲೇಜ್​ಗಳು ಆರಂಭಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಅದರೆ ಇನ್ನು ಕೆಲವು ತಿಂಗಳ ಕಾಲ ಪ್ರಾಥಮಿಕ ಶಾಲೆಗಳು ಬಂದ್​ ಆಗಿರಲಿದ್ದು, ಆನ್​ಲೈನ್​ ಶಿಕ್ಷಣ ಮುಂದುವರೆಯಲಿದೆ. ವಿಶೇಷವೆಂದರೆ ಈಗಾಗಲೇ ಕೋವಿಡ್​ ಮಾರ್ಗಸೂಚಿಗಳೊಂದಿಗೆ ಆಗ್ರಾದ ತಾಜ್​ ಮಹಲ್​, ಇಂಡಿಯಾ ಗೇಟ್ ಸೇರಿ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಕೇಂದ್ರ ಅನುಮತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.