ETV Bharat / bharat

ಅನ್​ಲಾಕ್​​ 4.0: ಮೆಟ್ರೋ ಸೇವೆಗಳಿಗೆ ನಾಳೆ ಕೇಂದ್ರದಿಂದ ಮಾರ್ಗಸೂಚಿ ರಿಲೀಸ್​!

ಸೆಪ್ಟೆಂಬರ್​​​ 7ರಿಂದ ದೇಶಾದ್ಯಂತ ಮೆಟ್ರೋ ಸಂಚಾರ ಆರಂಭಗೊಳ್ಳಲಿದ್ದು, ಅದಕ್ಕಾಗಿ ಕೇಂದ್ರ ಗೃಹ ಸಚಿವಾಲಯ ನಾಳೆ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ.

metro service
metro service
author img

By

Published : Sep 1, 2020, 10:20 PM IST

ನವದೆಹಲಿ: ದೇಶಾದ್ಯಂತ ಇಂದಿನಿಂದ ಅನ್​ಲಾಕ್​​ 4.0 ಜಾರಿಗೊಂಡಿದ್ದು, ಸೆಪ್ಟೆಂಬರ್​ 7ರಿಂದ ಮೆಟ್ರೋ ಸಂಚಾರಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿರುವ ಕಾರಣ ಅದಕ್ಕಾಗಿ ನಾಳೆ ಹೊಸ ಮಾರ್ಗಸೂಚಿ ರಿಲೀಸ್​​ ಆಗಲಿವೆ.

15 ಮೆಟ್ರೋ ರೈಲು ನಿಗಮಗಳೊಂದಿಗೆ ಕೇಂದ್ರ ಸಚಿವ ದುರ್ಗಾ ಶಂಕರ್​ ಮಿಶ್ರಾ ಸಭೆ ನಡೆಸಿದ್ದು, ಯಾವ ರೀತಿ ಮಾರ್ಗಸೂಚಿ ಅನುಕರಣೆ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಹಿತಿ ನೀಡಿದ್ದಾರೆ.

ನಿಲ್ದಾಣದಲ್ಲಿ ನಿಂತುಕೊಳ್ಳಲು ಮಾರ್ಕ್​ ಮಾಡುವುದರ ಜತೆಗೆ, ಪ್ರತಿ ಪ್ರಯಾಣಿಕರಿಗೆ ಥರ್ಮಲ್​​ ಸ್ಕ್ರೀನಿಂಗ್, ಸಾಮಾಜಿಕ ಅಂತರ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಇದರ ಜತೆಗೆ ಪ್ರತಿ ಕೋಚ್​ನಲ್ಲಿ ಕಡಿಮೆ ಪ್ರಯಾಣಿಕರು ಪ್ರಯಾಣಕ್ಕೆ ಅನುಮತಿ ನೀಡುವ ಸಾಧ್ಯತೆ ಇದ್ದು, ಇಡೀ ಮೆಟ್ರೋ ರೈಲಿನಲ್ಲಿ 500 ಜನರಿಗೆ ಅವಕಾಶ ನೀಡುವ ಸಂಭವವಿದೆ. ಪ್ರಯಾಣಿಕರಿಗೆ ಟೋಕನ್​​ ನೀಡುವ ಸಾಧ್ಯತೆ ಕಡಿಮೆ ಇದ್ದು, ಸ್ಮಾರ್ಟ್​​ಕಾರ್ಡ್​​ ಬಳಕೆಗೆ ಅವಕಾಶ ನೀಡುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.