ETV Bharat / bharat

ಚೆನ್ನೈನಲ್ಲಿ ಪತ್ರಕರ್ತರಿಬ್ಬರಿಗೆ ಅಂಟಿದ ಕೊರೊನಾ..!

ಚೆನ್ನೈನಲ್ಲಿ ಬೇರೆ ಬೇರೆ ಮಾಧ್ಯಮದ ವರದಿಗಾರ ಹಾಗೂ ಉಪ ಸಂಪಾದಕನಿಗೆ ಕೋವಿಡ್​-19 ಇರುವದು ವರದಿಯಾಗಿದೆ.

author img

By

Published : Apr 19, 2020, 3:50 PM IST

journalists tested positive for corona
ಚೆನ್ನೈನಲ್ಲಿ ಪತ್ರಕರ್ತರಿಬ್ಬರಿಗೆ ಅಂಟಿದ ಕೊರೊನಾ

ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿ ಇಬ್ಬರು ಪತ್ರಕರ್ತರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕಿತರಿಬ್ಬರು ಬೇರೆ ಬೇರೆ ಮಾಧ್ಯಮದ ಪತ್ರಕರ್ತರಾಗಿದ್ದು, ಒಬ್ಬರು ವರದಿಗಾರ ಹಾಗೂ ಇನ್ನೊಬ್ಬರು ಉಪ ಸಂಪಾದಕರಾಗಿದ್ದಾರೆ.

ಸೋಂಕಿತ ವರದಿಗಾರನಿಗೆ ರಾಜ್ಯದ ಆರೋಗ್ಯ ಇಲಾಖೆಯೊಂದಿಗೆ ಸಂಪರ್ಕವಿದ್ದ ಹಿನ್ನೆಲೆ ಆರೋಗ್ಯ ಇಲಾಖೆಯ ಕೆಲ ಸಿಬ್ಬಂದಿಯನ್ನು ಕ್ವಾರಂಟೈನ್​ನಲ್ಲಿರಿಸಲಾಗಿದೆ. ಇನ್ನು ಉಪ ಸಂಪಾದಕನ ಕುಟುಂಬಸ್ಥರನ್ನೂ ಸೆಲ್ಫ್​ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ​

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಮುಂಬೈನಲ್ಲಿ ಮೂವರು ಪತ್ರಕರ್ತರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇವರ ಸಹೋದ್ಯೋಗಿಗಳನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.