ಮುಂಬೈ(ಮಹಾರಾಷ್ಟ್ರ): ಬಂಧಿತ ಡ್ರಗ್ ಪೆಡ್ಲರ್ ಚಿಂಕು ಪಠಾಣ್ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಡಿ ಎನ್‌ಸಿಬಿ (ಮಾದಕವಸ್ತು ನಿಯಂತ್ರಣ ಬ್ಯೂರೋ) ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಆರೋಪಿ ಚಿಂಕುವಿನೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಥಾಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಎರಡು ಕಾರುಗಳು, ಡ್ರಗ್ಸ್ನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಚಿಂಕು ಪಠಾಣ್‌ನನ್ನು ಜ.20 ರಂದು ನಗರದ ಡೋಂಗ್ರಿ ಪ್ರದೇಶದಲ್ಲಿ ಅಪಾರ ಪ್ರಮಾಣದ ಮಾದಕ ದ್ರವ್ಯಗಳೊಂದಿಗೆ ಎನ್‌ಸಿಬಿ ಬಂಧಿಸಿ ತನಿಖೆ ಕೈಗೊಂಡಿತ್ತು. ಈ ವೇಳೆ, ಆರೋಪಿ ದಾವೂದ್ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ವಿಚಾರ ಎನ್ಸಿಬಿಗೆ ತಿಳಿದು ಬಂದಿತ್ತು.
ಓದಿ: ಎಂಡಿಎಂಎ ಡ್ರಗ್ಸ್ ಪ್ರಕರಣ: ಆರೋಪಿಗಳ ಬ್ಯಾಂಕ್ ಖಾತೆ ತನಿಖೆ
ಆರೋಪಿ ಪಠಾಣ್ ಪ್ರಸ್ತುತ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ವಶದಲ್ಲಿದ್ದು, ಪಠಾಣ್ ದರೋಡೆಕೋರ ಕರೀಮ್ ಲಾಲಾ ಅವರ ಮೊಮ್ಮಗ ಮತ್ತು ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಅವರ ಆಪ್ತ ಸಹಾಯಕನಾಗಿದ್ದಾನೆ.