ಆಂಧ್ರಪ್ರದೇಶ: ಕಿರುಕುಳದಿಂದ ಮನನೊಂದು ತೆಲುಗು ಕಿರುತೆರೆ ನಟಿವೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, 26 ವರ್ಷದ ಶ್ರಾವಣಿ ನೇಣಿಗೆ ಶರಣಾಗಿದ್ದಾಳೆ.
ಮನೆಯಲ್ಲಿನ ಪ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ನಟಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಿನ್ನೆ ರಾತ್ರಿ ಪೋಷಕರೊಂದಿಗೆ ಮಾತನಾಡಿ ರೂಂನೊಳಗೆ ಹೋಗಿರುವ ನಟಿ ಸಾವಿಗೆ ಶರಣಾಗಿದ್ದಾಳೆ.
ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಕೇರಳದ ಕಾಕ್ಕಿನಾಡು ದೇವರಾಜು ರೆಡ್ಡಿ ಮುಖ್ಯ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಅನೇಕ ಧಾರಾವಾಹಿಗಳಲ್ಲಿ ನಟನೆ ಮಾಡಿರುವ ದೇವರಾಜು ಕಳೆದ ಕೆಲ ದಿನಗಳ ಹಿಂದೆ ಶ್ರಾವಣಿ ಭೇಟಿ ಮಾಡಿದ್ದರಂತೆ. ಇದಾದ ಬಳಿಕ ತಮ್ಮ ಮಗಳ ಬಳಿ ಹಣಕ್ಕಾಗಿ ಆತ ಬೇಡಿಕೆ ಇಟ್ಟಿದ್ದನು ಎಂದು ತಿಳಿಸಿದ್ದಾರೆ. ಆಕೆಯೊಂದಿಗೆ ಪ್ರೀತಿಯ ನಾಟಕವಾಡಿ ಫೋಟೋ ತೆಗೆದುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದನು ಎಂದು ಆರೋಪಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ದೇವರಾಜ್, ಶ್ರಾವಣಿ ಆತ್ಮಹತ್ಯೆ ಹಿಂದೆ ಸಾಯಿ ಎಂಬ ವ್ಯಕ್ತಿಯ ಕೈವಾಡವಿದೆ. ಪೋಷಕರು ನನ್ನ ಮೇಲೆ ಸುಳ್ಳು ಕೇಸು ದಾಖಲು ಮಾಡಿದ್ದಾರೆ. ಐದು ವರ್ಷಗಳಿಂದ ಶ್ರಾವಣಿ ಹಾಗೂ ಸಾಯಿ ಪರಿಚಯವಿದ್ದು, ಕಳೆದ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಜಗಳ ಸಹ ನಡೆದಿದೆ ಎಂದು ಹೇಳಿದ್ದಾರೆ.
ಪೋಷಕರು ನೀಡಿರುವ ದೂರಿನನ್ವಯ ಆತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.