ಶ್ರೀನಗರ(ಜಮ್ಮು ಕಾಶ್ಮೀರ್): ಜಬರ್ವಾನ್ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ 74 ಎಕರೆ ಪ್ರದೇಶದಲ್ಲಿ ಹರಡಿರುವ ಇಂದಿರಾ ಗಾಂಧಿ ಸ್ಮಾರಕ ಟುಲಿಪ್ ಗಾರ್ಡನ್ ಅಥವಾ ಸಿರಾಜ್ ಬಾಗ್ ಪೂರ್ಣವಾಗಿ ಹೂಗಳಿಂದ ಕಂಗೊಳಿಸುತ್ತಿದೆ. ಆದ್ರೆ ಈ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರಿಲ್ಲ.
ಈ ತಿಂಗಳಿನಲ್ಲಿ 13 ಲಕ್ಷಕ್ಕೂ ಹೆಚ್ಚು ಟುಲಿಪ್ ಹೂವುಗಳನ್ನು ಹೊಂದಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವು ಮಾರ್ಚ್ ಮೊದಲ ವಾರದಲ್ಲಿ ಸಾರ್ವಜನಿಕರಿಗಾಗಿ ತೆರೆದಿರಬೇಕಿತ್ತು. ಆದ್ರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ತೆರೆದಿಲ್ಲ. ಭಾರತದಲ್ಲಿ ಜನವರಿ 30 ರಂದು ವರದಿಯಾದ ಈ ಸಾಂಕ್ರಾಮಿಕ ರೋಗ, ಈವರೆಗೆ ದೇಶದಲ್ಲಿ 12,380 ಜನರಿಗೆ ತಗುಲಿದ್ದರೆ, 414 ಮಂದಿ ಸಾವನ್ನಪ್ಪಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಕೃಷಿ ಇಲಾಖೆಯು ನಿರ್ವಹಿಸುತ್ತಿರುವ ಉದ್ಯಾನವನದ ಸುಂದರ ನೋಟವನ್ನು ನೋಡಲು ಯಾರೂ ಬಾರದಿರುವುದು ದಶಕದಲ್ಲಿ ಇದೇ ಮೊದಲು ಎನ್ನಲಾಗ್ತಿದೆ.