ETV Bharat / bharat

ಭಾರತಕ್ಕೆ ಬರುತ್ತಿರುವ ಟ್ರಂಪ್ ಬಳಸೋ ವಿಮಾನ, ಕಾರಿನ ವಿಶೇಷತೆ ಏನು ಗೊತ್ತಾ?

author img

By

Published : Feb 24, 2020, 8:38 AM IST

Updated : Feb 24, 2020, 9:34 AM IST

ಅಮೆರಿಕ ಅಧ್ಯಕ್ಷರು ತಮ್ಮದೇ ಆದ ವಿಮಾನ ಮತ್ತು ಕಾರನ್ನು ಹೊಂದಿದ್ದು ಭಾರತ ಪ್ರವಾಸದ ವೇಳೆ ಅವುಗಳನ್ನೇ ಬಳಸುತ್ತಾರೆ. ಈ ಕಾರು ಮತ್ತು ವಿಮಾನ ಕೆಲ ವಿಶೇಷತೆಗಳನ್ನ ಹೊಂದಿವೆ.

Donald Trump’s presidential state car,ಟ್ರಂಪ್ ಬಳಸುವ ವಿಮಾನ ಕಾರಿನ ವಿಶೇಷತೆ
ಟ್ರಂಪ್ ಬಳಸುವ ವಿಮಾನ ಕಾರಿನ ವಿಶೇಷತೆ

ಹೈದರಾಬಾದ್: ಕೆಲ ಗಂಟೆಗಳಲ್ಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ. ಇಂದು ಗುಜರಾತ್​ನ ಅಹಮದಾಬಾದ್​ಗೆ ತಮ್ಮ 'ಏರ್ ಫೋರ್ಸ್ ಒನ್' ವಿಮಾನದಲ್ಲಿ ಆಗಮಿಸಲಿದ್ದು, ಅಲ್ಲಿಂದ ಅವರು 'ದಿ ಬೀಸ್ಟ್' ಕಾರಿನಲ್ಲಿ ಮೊಟೇರಾ ಮೈದಾನದತ್ತ ಪ್ರಯಾಣ ಬೆಳೆಸಲಿದ್ದಾರೆ.

ಏರ್​ ಫೋರ್ಸ್ ಒನ್: ಟ್ರಂಪ್ ಅವರ ವಿಮಾನವನ್ನ ಹಾರಾಡುವ ಶ್ವೇತಭವನ ಎಂದೇ ಕರೆಯಲಾಗುತ್ತದೆ. 'ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ', ಅಮೆರಿಕ ಧ್ವಜ ಮತ್ತು ಅಧ್ಯಕ್ಷರ ಮುದ್ರೆಗಳಿಂದ ಅಲಂಕರಿಸಲ್ಪಟ್ಟ ಈ ವಿಮಾನ ಅಧ್ಯಕ್ಷರಿಗೆ ಪ್ರಯಾಣಿಸಲು ಅಗತ್ಯವಿರುವಲ್ಲೆಲ್ಲಾ ಮತ್ತು ಪ್ರಯಾಣಕ್ಕೆ ಯಾವಾಗಲೂ ಸಿದ್ಧವಾಗಿರುತ್ತದೆ.

ಬೇರೆ ವಿಮಾನಗಳು ಇಂಧನವನ್ನು ತುಂಬಿಸಿಕೊಳ್ಳಲು ಬೇರೆಡೆ ಲ್ಯಾಂಡ್ ಮಾಡಬೇಕಾಗುತ್ತದೆ. ಆದರೆ ಏರ್ ಫೋರ್ಸ್ ಒನ್ ವಿಮಾನಗಳಿಗೆ ಈ ರೀತಿಯ ಸಮಸ್ಯೆಯಿಲ್ಲ. ಈ ವಿಮಾನಕ್ಕೆ ಹಾರಾಡುತ್ತಿರುವಾಗಲೇ ಇಂಧನ ತುಂಬಿಸಬಹುದು. ಏರ್ ಫೋರ್ಸ್ ಒನ್ ಮೂರು ಹಂತಗಳಲ್ಲಿ 4,000 ಚದರ ಅಡಿ ಜಾಗವನ್ನು ಹೊಂದಿದ್ದು, ದೊಡ್ಡ ಕಚೇರಿ, ಕಾನ್ಫರೆನ್ಸ್ ಕೊಠಡಿ ಮತ್ತು ಅಧ್ಯಕ್ಷರ ಜೊತೆಯಲ್ಲಿರುವವರಿಗೆ ಕೊಠಡಿಗಳಿವೆ.

ಆನಾರೋಗ್ಯ ಉಂಟಾದರೆ ತಪಾಸಣೆ ನಡೆಸಲು ಕಾಯಂ ವೈದ್ಯರನ್ನು ಹೊಂದಿದೆ. ಈ ವಿಮಾನದಲ್ಲಿ ಊಟದ ಸೌಲಭ್ಯವಿದ್ದು ಒಂದೇ ಬಾರಿಗೆ 100 ಜನರಿಗೆ ಆಹಾರ ಪೂರೈಸಹುದು. ಏರ್ ಫೋರ್ಸ್​ ಒನ್ ವಿಮಾನವು ಯಾವಾಗಲೂ ಒಂಟಿಯಾಗಿ ಹಾರಾಡುವುದಿಲ್ಲ. ಇದರ ಮುಂದೆ ಹಲವು ವಿಮಾನಗಳು ಹಾರಾಡುತ್ತಿರುತ್ತವೆ.

ದಿ ಬೀಸ್ಟ್ - ಅಧ್ಯಕ್ಷೀಯ ಕಾರು: ಅಮೆರಿಕ ಅಧ್ಯಕ್ಷರನ್ನು ಸುರಕ್ಷಿತವಾಗಿಡಲು ಡಜನ್​ಗಟ್ಟಲೆ ರಕ್ಷಣಾ ಕಾರ್ಯವಿಧಾನಗಳನ್ನು ಅಳವಡಿಸಿರುವ ಅನನ್ಯ ಕ್ಯಾಡಿಲಾಕ್ ಅನ್ನು ಸೆಪ್ಟೆಂಬರ್ 24, 2018 ರಂದು ಪರಿಚಯಿಸಲಾಯಿತು. ಈ ಕಾರು ಬುಲೆಟ್ ಪ್ರೂಫ್ ಕಿಟಕಿಗಳು ಮತ್ತು ಬಾಗಿಲುಗಳನ್ನ ಹೊಂದಿದ್ದು, ಪಂಕ್ಚರ್ ನಿರೋಧಕ ಟೈಯರ್​ಗಳನ್ನ ಹೊಂದಿದೆ.

ರಾಸಾಯನಿಕ ದಾಳಿಯಿಂದ ಒಳಗಿರುವವರನ್ನು ರಕ್ಷಿಸಲು ಐದಕ್ಕೂ ಹೆಚ್ಚು ಪದರಗಳ ಗಾಜು ಮತ್ತು ಪಾಲಿಕಾರ್ಬೊನೇಟ್‌ನೊಂದಿಗೆ ನಿರ್ಮಿಸಲಾದ ಕಿಟಕಿಗಳಿಂದ ಇದು ಅತ್ಯಂತ ಸುರಕ್ಷಿತವಾಗಿದೆ. ಸ್ಟೀಲ್, ಅಲ್ಯೂಮಿನಿಯಂ, ಟೈಟಾನಿಯಂ ಮತ್ತು ಸೆರಾಮಿಕ್‌ನಿಂದ ಮಾಡಲ್ಪಟ್ಟ ಒಳಗಿನ ಬಾಡಿವರ್ಕ್ ವಾಹನವನ್ನು ಬಾಂಬ್ ದಾಳಿಯಿಂದ ರಕ್ಷಣೆ ಮಾಡುತ್ತದೆ.

ಬೀಸ್ಟ್ ಸಂಪೂರ್ಣ ರಕ್ಷಣಾ ಪರಿಕರಗಳಾದ ಪಂಪ್-ಆಕ್ಷನ್ ಶಾಟ್‌ಗನ್‌ಗಳು, ಟಿಯರ್ ಗ್ಯಾಸ್ ಗ್ರೆನೇಡ್ ಲಾಂಚರ್‌ಗಳು, ಹೊಗೆ ಪರದೆ ವಿತರಕಗಳು ಮತ್ತು ಅಗ್ನಿಶಾಮಕ ವ್ಯವಸ್ಥೆಯನ್ನು ಹೊಂದಿದೆ. ಇದಲ್ಲದೆ, ಸ್ವಂತ ಪ್ಯಾನಿಕ್ ಬಟನ್ ಮತ್ತು ಆಮ್ಲಜನಕದ ಪೂರೈಕೆಯ ಚೀಲಗಳನ್ನು ಹೊಂದಿದೆ. ಕಾರಿನ ಮುಂಭಾಗ ನೈಟ್ ವಿಷನ್ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಉಪಾಧ್ಯಕ್ಷ ಮತ್ತು ಪೆಂಟಗನ್ ಅನ್ನು ನೇರವಾಗಿ ಸಂಪರ್ಕಿಸುವ ಸ್ಯಾಟಲೈಟ್ ಫೋನ್​ ವ್ಯವಸ್ಥೆ ಕೂಡಾ ಇದೆ. ಇದಲ್ಲದೆ, ಚಾಲಕ ಮತ್ತು ಪ್ರಯಾಣಿಕರ ನಡುವೆ ಗಾಜಿನ ವಿಭಜನೆ ಇದೆ, ಅದನ್ನು ನಿಯಂತ್ರಿಸಲು ಟ್ರಂಪ್‌ಗೆ ಮಾತ್ರ ಸ್ವಿಚ್ ವ್ಯವಸ್ಥೆ ಇದೆ.

ಅಮೆರಿಕ ಗೂಢಚಾರ ಇಲಾಖೆಯಿಂದ ತರಬೇತಿ ಪಡೆದ ಚಾಲಕನು ಈ ಕಾರನ್ನು ಓಡಿಸುತ್ತಾನೆ. ಚಾಲಕನು ಹೆಚ್ಚು ಸವಾಲಿನ ಚಾಲನಾ ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ತಿಳಿದುಕೊಂಡಿರುತ್ತಾನೆ.

Last Updated : Feb 24, 2020, 9:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.