ಭುವನೇಶ್ವರ: ದೇಶದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಅಡಿ ನಿತ್ಯ ವಾಹನ ಸವಾರರು ಸಾವಿರಾರು ರೂಪಾಯಿ ದಂಡದ ರೂಪದಲ್ಲಿ ಕಟ್ಟುತ್ತಿದ್ದು, ಹೊಸ ಟ್ರಾಫಿಕ್ ರೂಲ್ಸ್ ಕಾಯ್ದೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
-
Odisha: A truck owner from Nagaland was fined and issued challan of Rs 6,53,100 in Sambalpur on September 10, for violating New Motor Vehicle Act (2019). pic.twitter.com/4VQe5IUKrA
— ANI (@ANI) September 14, 2019 " class="align-text-top noRightClick twitterSection" data="
">Odisha: A truck owner from Nagaland was fined and issued challan of Rs 6,53,100 in Sambalpur on September 10, for violating New Motor Vehicle Act (2019). pic.twitter.com/4VQe5IUKrA
— ANI (@ANI) September 14, 2019Odisha: A truck owner from Nagaland was fined and issued challan of Rs 6,53,100 in Sambalpur on September 10, for violating New Motor Vehicle Act (2019). pic.twitter.com/4VQe5IUKrA
— ANI (@ANI) September 14, 2019
ಆದರೆ, ಇದರ ಮಧ್ಯೆ ನಾಗಾಲ್ಯಾಂಡ್ ನೋಂದಾಯಿತ ಟ್ರಕ್ ಚಾಲಕನೊಬ್ಬ ಈ ಹಿಂದಿನ ಮೋಟಾರು ವಾಹನ ಕಾಯ್ದೆ ಜಾರಿಯಲ್ಲಿದ್ದಾಗಲೇ ಬರೋಬ್ಬರಿ 6.53 ಲಕ್ಷ ರೂ ದಂಡ ಕಟ್ಟಿದ್ದಾನೆಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. ಜುಲೈ 21,2014ರಿಂದ ಸೆಪ್ಟೆಂಬರ್ 30,2019ರವರೆಗೆ ರೋಡ್ ಟ್ಯಾಕ್ಸ್ ಕಟ್ಟದಿರುವುದಕ್ಕಾಗಿ ಒಡಿಶಾ ಮೋಟಾರು ವಾಹನಗಳ ತೆರಿಗೆ ಕಾಯ್ದೆಯಡಿ ಇಷ್ಟೊಂದು ಹಣ ಕಟ್ಟಿದ್ದಾರೆ.
ಆರ್ಟಿಒ ಅಧಿಕಾರಿಗಳು ಡ್ರೈವರ್ ದಿಲಿಪ್ ಕಾರ್ತ್ ಹಾಗೂ ಟ್ರಕ್ ಮಾಲೀಕ ಶೈಲೇಶ್ ಶಂಕರ್ ಲಾಲ್ ಗುಪ್ತಾಗೆ ನೀಡಿದ್ದಾರೆ. ಇನ್ನು ಹೊಸ ಮೋಟಾರು ವಾಹನ ಕಾಯ್ದೆಯಡಿ ಕಳೆದೆರಡು ದಿನಗಳ ಹಿಂದೆ ಹರಿಯಾಣ ನೋಂದಾಯಿತ ಟ್ರಕ್ ಚಾಲಕನೊಬ್ಬನಿಗೆ ಟ್ರಾಫಿಕ್ ಪೊಲೀಸರು ಬರೋಬ್ಬರಿ 2 ಲಕ್ಷದ 500 ರೂ. ದಂಡ ವಿಧಿಸಿದ್ದರು.