ಸಂಬಲ್ಪುರ(ಒಡಿಶಾ): ನೂತನ ಮೋಟಾರ್ ವಾಹನ ಕಾಯ್ದೆ ಜಾರಿ ಆದಾಗಿನಿಂದ ವಾಹಸ ಸವಾರರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದ್ದು, ಒಡಿಶಾದಲ್ಲಿ ಲಾರಿ ಚಾಲಕನಿಗೆ 86,500 ರೂಪಾಯಿ ದಂಡ ಹಾಕಲಾಗಿದೆ.

ಚಾಲಕ ಅಶೋಕ್ ಜಾದವ್ ಎಂಬಾತ ನಾಲ್ಕು ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡಿದ್ದಕ್ಕೆ ಬರೋಬ್ಬರಿ 86,500 ರೂಪಾಯಿ ದಂಡ ವಿಧಿಸಲಾಗಿದೆ. ಓವರ್ ಲೋಡ್ ಕಾರಣಕ್ಕಾಗಿ 56 ಸಾವಿರ, ಚಾಲನ ಪರವಾನಗಿ ಇಲ್ಲದಿದ್ದಕ್ಕೆ 5 ಸಾವಿರ ಮತ್ತು ಬೇರೆ ನಿಯಮಗಳನ್ನ ಉಲ್ಲಂಘನೆ ಕಾರಣಕ್ಕೆ 25 ಸಾವಿರ ಸೇರಿ ಒಟ್ಟು 86,500 ರೂಪಾಯಿ ದಂಡ ಹಾಕಲಾಗಿತ್ತು.
ಭಾರೀ ಮೊತ್ತದ ದಂಡದಿಂದ ಕಂಗಾಲಾದ ಲಾರಿ ಮಾಲೀಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಒಟ್ಟು 70 ಸಾವಿರ ರೂಪಾಯಿ ದಂಡ ಕಟ್ಟಿದ್ದಾನೆ.