ETV Bharat / bharat

ಅಯೋಧ್ಯೆ ಭೂ ವಿವಾದ: ಇಂದು ಕೊನೆಯ ದಿನದ ವಿಚಾರಣೆ - Cheif Justice Ranjan Gogoi

ಏಳು ದಶಕಗಳಿಂದ ನಡೆಯುತ್ತಿರುವ ಅಯೋಧ್ಯೆ- ಬಾಬರಿ ಮಸೀದಿ ಭೂ ವಿವಾದದ ವಿಚಾರಣೆ ಇಂದು ಕೊನೆಗೊಳ್ಳಲಿದೆ.

ಅಯೋಧ್ಯ ಭೂ ವಿಚಾರಣೆ
author img

By

Published : Oct 16, 2019, 8:49 AM IST

Updated : Oct 16, 2019, 9:32 AM IST

ನವದೆಹಲಿ: ಕಳೆದ ಏಳು ದಶಕಗಳಿಂದ ನಡೆಯುತ್ತಿರುವ ಅಯೋಧ್ಯೆ ಬಾಬರಿ ಮಸೀದಿ ಭೂಮಿ ವಿವಾದ ವಿಚಾರಣೆ ಇಂದು ಕೊನೆಗೊಳ್ಳಲಿದೆ. ರಾಜಕೀಯ ಸೂಕ್ಷ್ಮವಾದ ಪ್ರಕರಣದ ವಿಚಾರಣೆಯನ್ನು ಬುಧವಾರ (ಇಂದು) ಮುಕ್ತಾಯಗೊಳಿಸಲು ಎದುರು ನೋಡುತ್ತಿದ್ದೇವೆ ಎಂದು ಸುಪ್ರೀಂಕೋರ್ಟ್ ನಿನ್ನೆ ತಿಳಿಸಿತ್ತು.

ದೇಶದ ಸರ್ವೋಚ್ಚ ನ್ಯಾಯಾಲಯದ​ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚಪೀಠವು ರಾಮ ಜನ್ಮಭೂಮಿ-ಬಾಬರಿ ಮಸೀದಿ ಬಗ್ಗೆ ಕಳೆದ 39 ದಿನಗಳಿಂದ ವಿಚಾರಣೆ ನಡೆಸುತ್ತಿದೆ. ಈ ಮೊದಲು ಅಕ್ಟೋಬರ್ 18 ರಂದು ವಾದ-ಪ್ರತಿವಾದಗಳಿಗೆ ತೆರೆ ಎಳೆಯಲು ಗಡುವು ನಿಗದಿಪಡಿಸಿತ್ತು. ನಂತರ ಅಕ್ಟೋಬರ್ 17ಕ್ಕೆ ವಿಚಾರಣೆ ಅಂತ್ಯಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಸಿಜೆಐ ಎಲ್ಲಾ ವಾದ-ಪ್ರತಿವಾದಗಳನ್ನು ಬುಧವಾರ ಸಂಜೆ 5 ಗಂಟೆಯೊಳಗೆ ಮುಗಿಸಬೇಕು ಎಂದು ಸೂಚಿಸಿದರು.

ಇಂದು ವಿಚಾರಣೆ ಮುಕ್ತಾಯಗೊಂಡರೆ ಕೋರ್ಟ್ ಅಂತಿಮ​ ತೀರ್ಪು ಕಾಯ್ದಿರಿಸಲಿದೆ. ನವೆಂಬರ್ 17 ರಂದು ಮುಖ್ಯ ನಾ. ರಂಜನ್ ಗೊಗೊಯ್ ನಿವೃತ್ತಿ ಹೊಂದಲಿದ್ದಾರೆ. ಹಾಗಾಗಿ ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ, ಡಿ.ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್‌ಎ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು ನವೆಂಬರ್ 17 ರೊಳಗೆ ತೀರ್ಪು ಪ್ರಕಟಿಸಬೇಕಿದೆ. ಒಂದು ವೇಳೆ ನ್ಯಾ.​ ಗೊಗೊಯ್​ ನಿವೃತ್ತಿಯ ಮೊದಲು ತೀರ್ಪು ಹೊರಬರದಿದ್ದರೆ, ವಿವಾದದ ವಿಷಯವಾಗಿ ಹೊಸದಾಗಿ ವಾದ-ವಿವಾದಗಳನ್ನು ಆಲಿಸಬೇಕಾಗುವ ಸಾಧ್ಯತೆಗಳಿವೆ.

ನ್ಯಾಯಪೀಠವು ತೀರ್ಪನ್ನು ಬರೆಯಲು ಕೇವಲ ನಾಲ್ಕು ವಾರಗಳ ಕಾಲಾವಕಾಶವಿದೆ. ಈ ಸಮಯದ ಚೌಕಟ್ಟಿನಲ್ಲಿ ತೀರ್ಪನ್ನು ನೀಡಿದರೆ ಅದೊಂದು ಅದ್ಭುತ ಎಂದು ಸಿಜೆಐ ಈ ಹಿಂದೆ ತಿಳಿಸಿದ್ದರು.

Intro:Body:

national

Conclusion:
Last Updated : Oct 16, 2019, 9:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.