ETV Bharat / bharat

ವಿಶ್ವ ಆಹಾರ ದಿನದ ಮೇಲೆ ಕೊರೊನಾ ಕರಿ ಛಾಯೆ... ಕೋವಿಡ್​ದಿಂದಾಗಿ ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಜನ!

ಇಂದು ಹಸಿವಿನ ವಿರುದ್ಧ ಹೋರಾಡುವ ದಿನ. ಆದ್ರೆ ಕೊರೊನಾ ಪರಿಣಾಮ ಕೋಟ್ಯಾಂತರ ಜನ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ.

World food day, World food day news, World food day 2020 news, ವಿಶ್ವ ಆಹಾರ ದಿನ, ವಿಶ್ವ ಆಹಾರ ದಿನ 2020, ವಿಶ್ವ ಆಹಾರ ದಿನ 2020 ಸುದ್ದಿ,
ವಿಶ್ವ ಆಹಾರ ದಿನದ ಮೇಲೆ ಕೊರೊನಾ ಕರಿ ಛಾಯೆ
author img

By

Published : Oct 16, 2020, 6:21 AM IST

ಹೌದು, 1945 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಕೃಷಿ ಸಂಸ್ಥೆಯ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಪ್ರಪಂಚದ ಜನರು ಒಂದಾಗಿ ಹಸಿವಿನ ವಿರುದ್ಧ ಕೆಲಸ ಮಾಡಲು ಮತ್ತು ನಿರ್ಮೂಲನೆಗಾಗಿ ಕೆಲಸ ಮಾಡುವ ಸಲುವಾಗಿ ಈ ಆಹಾರ ದಿನವನ್ನು ಆಚರಣೆಗೆ ತರತಲಾಗಿದೆ. ಆದ್ರೆ ಕೊರೊನಾದಿಂದಾಗಿ ಜನ ಮತ್ತೆ ಹಸಿವಿನ ಮುಖ ಮಾಡಿದ್ದಾರೆ.

World food day, World food day news, World food day 2020 news, ವಿಶ್ವ ಆಹಾರ ದಿನ, ವಿಶ್ವ ಆಹಾರ ದಿನ 2020, ವಿಶ್ವ ಆಹಾರ ದಿನ 2020 ಸುದ್ದಿ,
ವಿಶ್ವ ಆಹಾರ ದಿನದ ಮೇಲೆ ಕೊರೊನಾ ಕರಿ ಛಾಯೆ

ಆಹಾರ ಸೇವಿಸುವುದು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದು. ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ಸಾಕಷ್ಟು ಆಹಾರ ಸೇವಿಸುವ ಹಕ್ಕು ಇದೆ. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ 5 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ. ಬಡ ರಾಷ್ಟ್ರಗಳಲ್ಲಿ ಶೇ.50 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವಿಶ್ವ ಆಹಾರ ದಿನದಡಿಯಲ್ಲಿ 40 ದೇಶಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯನ್ನು ಕಡಿಮೆ ಮಾಡಲು ಪಣ ತೊಡಲಾಗಿದೆ. ಆದ್ರೆ ಈ ಬಾರಿ ಕೊರೊನಾದಿಂದಾಗಿ ಇದು ಅಸಾಧ್ಯವಾಗಿದೆ.

ಒಂದೆಡೆ ಆಹಾರೋದ್ಯಮ ಬೆಳೆಯುತ್ತಿದ್ದರೆ, ಇನ್ನೊಂದೆಡೆ ಜನರು ಹಸಿವಿನಿಂದ ಸಾಯುತ್ತಿರುವ ಘಟನೆಗಳೂ ಹೆಚ್ಚುತ್ತಿದೆ. ಇದರ ಜೊತೆಗೆ ಆಹಾರವನ್ನು ರಕ್ಷಣೆ ಮಾಡುವ ಒಂದು ವ್ಯವಸ್ಥೆ ನಮ್ಮಲ್ಲಿ ಸಾಕಷ್ಟಿಲ್ಲ. ಹಸಿವು ಮತ್ತು ಬಡತನದಿಂದ ನರಳುತ್ತಿರುವ ಜನರಿಗೆ ಸೂಕ್ತ ಆಹಾರ ನೀಡಬೇಕು. ನಮ್ಮಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂಬ ಉದ್ದೇಶದಿಂದ ಕೂಡ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಕೊರೊನಾ ಪರಿಣಾಮ ಒಂದು ಹೊತ್ತಿನ ಊಟಕ್ಕೂ ಜನರು ಪರದಾಡುವಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.