ETV Bharat / bharat

ಮನೆಯಲ್ಲೇ ಗಣೇಶ ಚತುರ್ಥಿ ಆಚರಿಸುವಂತೆ ತಮಿಳುನಾಡು ಸರ್ಕಾರ ಸೂಚನೆ - ತಮಿಳುನಾಡು ಸರ್ಕಾರ

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು, ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ತಮಿಳುನಾಡು ಸರ್ಕಾರ ಆದೇಶಿಸಿದ್ದು, ಮತ್ತೊಮ್ಮೆ ಪ್ರಕಟಣೆ ಹೊರಡಿಸಿದೆ.

Ganesh Chaturthi
ಗಣೇಶ ಚತುರ್ಥಿ
author img

By

Published : Aug 20, 2020, 12:24 PM IST

ಚೆನ್ನೈ: ದಿನೇ ದಿನೆ ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚುತ್ತಿದ್ದು, ಈ ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಇಡುವಂತಿಲ್ಲ ಎಂದು ತಮಿಳುನಾಡು ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಇದೀಗ ಜನರು ತಮ್ಮ ತಮ್ಮ ಮನೆಗಳಲ್ಲೇ ಹಬ್ಬ ಆಚರಿಸಿ ಎಂದು ಸೂಚಿಸಿ ಮತ್ತೆ ಪ್ರಕಟಣೆ ಹೊರಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅವಕಾಶ ನೀಡಿ ಕರ್ನಾಟಕ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೀಗಾಗಿ ಕರ್ನಾಟಕವನ್ನು ಉದಾಹರಣೆ ನೀಡಿ ಬಲಪಂಥೀಯ ಪಕ್ಷಗಳು ರಾಜ್ಯದಲ್ಲೂ ಆಚರಣೆಗೆ ಅನುಮತಿ ನೀಡುವಂತೆ ಬೇಡಿಕೆಯಿಟ್ಟಿವೆ. ಆದರೆ ಇದಕ್ಕೆ ಒಪ್ಪದ ತಮಿಳುನಾಡು ಸರ್ಕಾರ, ಕೋವಿಡ್​ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜನರು ದಯವಿಟ್ಟು ಸರ್ಕಾರದೊಂದಿಗೆ ಕೈ ಜೋಡಿಸಬೇಕು. ನಿಮ್ಮ ಮನೆಗಳಲ್ಲೇ ಗಣೇಶ ಚತುರ್ಥಿ ಆಚರಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು, ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಮತ್ತೊಮ್ಮೆ ಸರ್ಕಾರ ಸ್ಪಷ್ಟಪಡಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.