ರಾಜಸ್ಥಾನ: ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿ ವಾಹನವನ್ನು ಹುಲಿಯೊಂದು ಬೆನ್ನಟ್ಟಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ರಾಜಸ್ಥಾನದ ಸವಾಯಿ ಮಾಧೋಪುರದ ರಣಥಂಬೋರ್ ಹುಲಿ ಸಂರಕ್ಷಿತ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಸಿಗರೊಬ್ಬರು ವಾಹನದಲ್ಲಿ ನಿಂತುಕೊಂಡು ಹುಲಿಯೊಂದರ ಫೋಟೋ ಕ್ಲಿಕ್ಕಿಸುತ್ತಿದ್ದಂತೆಯೇ ಹುಲಿ ವಾಹನವನ್ನು ಬೆನ್ನಟ್ಟಲು ಪ್ರಾರಂಭಿಸಿದೆ.
ವಾಹನದ ವೇಗೆ ಹೆಚ್ಚಿಸಿದಷ್ಟೂ ಹುಲಿ ತನ್ನ ವೇಗ ಹೆಚ್ಚಿಸಿ ಸ್ವಲ್ಪ ದೂರ ಬೆನ್ನಟ್ಟಿ ಬಂದಿದ್ದು, ವಾಹನದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.