ನವದೆಹಲಿ: ಬಿಜೆಪಿಯನ್ನು ಎತ್ತರಕ್ಕೆ ತಲುಪಿಸಲು ಶ್ರಮಿಸಿರುವವರಲ್ಲಿ ಅರುಣ್ ಜೇಟ್ಲಿ ಕೂಡ ಒಬ್ಬರು. ವಾಜಪೇಯಿ ಸರ್ಕಾರದ ಕ್ಯಾಬಿನೆಟ್‌ನಿಂದ ಮೋದಿ ಕ್ಯಾಬಿನೆಟ್ ವರೆಗೂ ತಮ್ಮ ಜವಾಬ್ಧಾರಿ ನಿಭಾಯಿಸಿರುವ ಜೇಟ್ಲಿ ಓರ್ವ ಅಸಾಮಾನ್ಯ ರಾಜಕಾರಣಿ.
ಇನ್ನು ಅವರಿಬ್ಬರ ಸರ್ಕಾರಾವಧಿಯಲ್ಲೂ ಜೇಟ್ಲಿ, ಚುನಾವಣೆಯಲ್ಲಿ ಗೆಲ್ಲದೆಯೇ ರಾಜ್ಯಸಭೆ ಮೂಲಕ ಆಯ್ಕೆಯಾಗಿ ಕೇಂದ್ರ ಸಚಿವರಾಗಿದ್ದರು. ಈ ಒಂದು ಉದಾಹರಣೆಯೇ ಸಾಕು ಅವರ ಸಾಮರ್ಥ್ಯ ತಿಳಿಸಲು. ಇಲಾಖೆ ಏನೇ ಇರಲಿ, ಅದನ್ನು ಸುಲಭವಾಗಿ ನಿಭಾಯಿಸುವುದು ಹೇಗೆ ಎಂದು ಜೇಟ್ಲಿಗೆ ತಿಳಿದಿತ್ತು. ಮೋದಿ ಅವರಿಗೆ ಹಣಕಾಸು ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದಂತಹ ಪ್ರಮುಖ ಇಲಾಖೆಯನ್ನು ನೀಡಲು ಇದೇ ಪ್ರಮುಖ ಕಾರಣವಾಗಿತ್ತು.
ಅರುಣ್ 28 ಡಿಸೆಂಬರ್ 1952 ರಂದು ಮಹಾರಾಜ್ ಕಿಶನ್ ಜೇಟ್ಲಿ ಮತ್ತು ರತನ್ ಪ್ರಭಾ ಜೇಟ್ಲಿ ದಂಪತಿಗೆ ಜನಿಸಿದರು. ತಂದೆ ವೃತ್ತಿಯಲ್ಲಿ ವಕೀಲರಾಗಿದ್ದರು. ದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು 1973 ರಲ್ಲಿ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ವಾಣಿಜ್ಯದಲ್ಲಿ ಪದವಿ ಪಡೆದರು. ನಂತರ ತಂದೆಯಂತೆ, ಕಾನೂನು ಪದವಿ ಪಡೆದ ಅವರು ವಕಾಲತ್ತು ವಹಿಸಿದರು.
ಕಾಲೇಜು ದಿನಗಳಿಂದ ಅವರು ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನೊಂದಿಗೆ ಸಂಬಂಧ ಹೊಂದಿದ್ದರು. 1974 ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವಾಗ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಆಯ್ಕೆಯಾದರು.
ಇನ್ನೂ, ಸುಷ್ಮಾ ಸ್ವರಾಜ್ ಅವರಂತೆಯೇ ಜೇಟ್ಲಿ ಕೂಡ ತುರ್ತು ಪರಿಸ್ಥಿತಿಯನ್ನು ಬಲವಾಗಿ ವಿರೋಧಿಸಿದರು. ಜೆಪಿ ಚಳವಳಿಯಿಂದಾಗಿ ಜೇಟ್ಲಿ ಕೂಡ ಎರಡು ಬಾರಿ ಜೈಲಿಗೆ ಹೋಗಬೇಕಾಯಿತು. ನಂತರ 1977 ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಆನಂತರವೂ ಬಿಜೆಪಿಯ ಯುವ ಮೋರ್ಚಾ ಆಗಿ ನೇತೃತ್ವ ಮುಂದುವರೆಸಿದರು.
ಕಾಲೇಜು ರಾಜಕೀಯದಿಂದ ಪದಾರ್ಪಣೆ ಮಾಡಿದ ಜೇಟ್ಲಿ ತದನಂತರ ಜೂನ್ 10 1980 ರಂದು ಬಿಜೆಪಿಗೆ ಸೇರಿದರು. ಪಕ್ಷದಲ್ಲಿ 20 ವರ್ಷಗಳ ಸುದೀರ್ಘ ಪ್ರಯಾಣದ ನಂತರ ವಾಜಪೇಯಿ ಸರ್ಕಾರದಲ್ಲಿ ಜೇಟ್ಲಿ ಮೊದಲ ಬಾರಿಗೆ ಕೇಂದ್ರ ಕಾನೂನು ಸಚಿವರಾದರು. ಇದರೊಂದಿಗೆ 2001 ರಲ್ಲಿ ಅವರ ಮೇಲೆ ಮತ್ತೊಂದು ಆರೋಪವನ್ನೂ ಹೇರಲಾಗಿತ್ತು. ಆದರೆ, ನಂತರ ಬಂದ ಮೋದಿ ಸರ್ಕಾರ ಜೇಟ್ಲಿಗೆ ಮತ್ತೊಮ್ಮೆ ಹಣಕಾಸು ಸಚಿವರನ್ನಾಗಿ ಮಾಡಿತು.