ಇವೆಲ್ಲ ವೇಸ್ಟ್ ಅಂತಾ ಬಳಸಿ ಬಿಸಾಡಿದ ಪ್ಲಾಸ್ಟಿಕ್ ತುಂಡು, ಕಟ್ಟಿಂಗ್ ಪ್ಲೇಯರ್, ವೈರ್,,, ಅವುಗಳಿಂದಲೇ ಮಿನಿ ಯಂತ್ರಗಳನ್ನು ತಯಾರಿಸ್ತಿದಾರೆ ಒಡಿಶಾದ ಖಂಡಗಿರಿ ಸ್ಲಮ್‌ನ ಮಕ್ಕಳು.
ಪ್ಲಾಸ್ಟಿಕ್ ಬಾಟಲ್ನಿಂದ ಮಿನಿ ರೋಬೋಟ್ಗಳು ರೆಡಿ: ಪ್ಲಾಸ್ಟಿಕ್ ವಸ್ತುಗಳನ್ನು ಒಮ್ಮೆ ಬಳಸಿ ಎಸೆದು ಪ್ರಕೃತಿ ಹಾನಿಗೆ ಕಾರಣವಾಗ್ತಿದ್ದೇವೆ. ಆದರೆ, ಈ ಚಿಣ್ಣರು ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರೋಬೋಟ್‌ಗಳನ್ನು ತಯಾರಿಸುತ್ತಾರೆ. ಎಸೆದ ಪ್ಲಾಸ್ಟಿಕ್ ಬಾಟಲ್ಗಳಿಂದ ಮಿನಿ ರೋಬೋಟ್ಗಳು ತಯಾರಾಗಿವೆ. ಇವರ ಈ ವಿನೂತನ ಪ್ರಯೋಗ ಪ್ಲಾಸ್ಟಿಕ್ ತ್ಯಾಜ್ಯಕ್ಕೇ ಹೊಸ ಚೇತನ ಕೊಟ್ಟಿದೆ. ಚಿಂದಿಯಿಂದ ಬೃಹತ್ ರೋಬೋಟ್‌ಗಳನ್ನ ತಯಾರಿಸೋದೆ ಇವರ ಕನಸಂತೆ.
ಈ ಯಂಗ್ ಸೈಂಟಿಸ್ಟ್ಗಳ ಕೈಯಲ್ಲಿ ಕಸದಿಂದಲೇ ರಸ : ತಮ್ಮ ಸುತ್ತಮುತ್ತಲಿನ ಬೃಹತ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಸಮಸ್ಯೆ ನಿವಾರಣೆ ಜತೆಗೆ ಚಿಂದಿಯಿಂದ ರೋಬೋಟ್‌ಗಳನ್ನು ತಯಾರಿಸುವುದು ಇದರ ಹಿಂದಿರುವ ಸದುದ್ದೇಶ. ಬಾಗಿಲು ತೆರೆಯಲು ಪರ್ಯಾಯ ಮಾದರಿಯಾಗಿ ಸ್ವಯಂಚಾಲಿತ ಬಾಗಿಲುಗಳನ್ನೂ ತಯಾರಿಸಿದ್ದಾರೆ ಈ ಜಾಣರು.
ಚಿಣ್ಣರ ಕನಸಿಗೆ ಭುಬನೇಶ್ವರದ ಉನ್ಮುಕ್ತ ಸಂಸ್ಥೆ ದಾರಿದೀವಿಗೆ: ಇದೇ ಚಿಣ್ಣರ ಕನಸಿಗೆ ಭುಬನೇಶ್ವರದ ಉನ್ಮುಕ್ತ ಸಂಸ್ಥೆ ದಾರಿದೀವಿಗೆಯಾಗ್ತಿದೆ. ಈ ಮಕ್ಕಳ ಕಲೆ, ಜಾಣತನ, ಆಸಕ್ತಿ ಗಮನಿಸಿ ಈ ದಿಸೆಯಲ್ಲಿ ಇನ್ನಷ್ಟು ತರಬೇತಿ ನೀಡಲು ಮುಂದಾಗಿದೆ. ಅದೂ ಕೂಡ ಉಚಿತ. ಮಕ್ಕಳ ಈ ಪ್ರಕೃತಿ ಪ್ರೇಮ ಎಷ್ಟು ಶ್ಲಾಘಿಸಿದರೂ ಕಡಿಮೆನೇ..