ಹೈದರಾಬಾದ್: ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಕಾನೂನು ಪರಿಣತಿಗೆ ಹೆಸರುವಾಸಿಯಾಗಿದ್ದವರು. ಕೇಂದ್ರದಲ್ಲಿ ಅನೇಕ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ ಅವರು ಹಣಕಾಸು ಸಚಿವರಾಗಿ ದೇಶಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದರು.

ಪ್ರಧಾನಿ ನರೇಂದ್ರ ಮೋದಿ, ತಮ್ಮ ಮೊದಲ ಅವಧಿಯಲ್ಲಿ ಅಂದರೆ, 2014ರ ಮೇ 26 ರಂದು ಅರುಣ್ ಜೇಟ್ಲಿಗೆ ಹಣಕಾಸು ಸಚಿವಾಲಯದ ಉಸ್ತುವಾರಿಯನ್ನು ನೀಡಿದರು. 5 ಬಾರಿ ಕೇಂದ್ರ ಬಜೆಟ್ ಮಂಡಿಸಿದ ಕೀರ್ತಿ ಜೇಟ್ಲಿಯವರದ್ದು ಮತ್ತು 29 ಫೆಬ್ರವರಿ 2016 ರಂದು ಅಧಿಕ ವರ್ಷದ ಬಜೆಟ್ ಅನ್ನು ಸಹ ಮಂಡಿಸಿದ್ದರು.
ಜೇಟ್ಲಿ ನಿರ್ವಹಿಸಿದ ಪ್ರಮುಖ ಕಾರ್ಯಗಳು:

1) 1 ಜುಲೈ 2017 ರಿಂದ ಜಿಎಸ್‌ಟಿ ಜಾರಿಗೆ - ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳನ್ನು ಮಂಡಳಿಯಲ್ಲಿ ತರುವಲ್ಲಿ ಮತ್ತು ಜಿಎಸ್‌ಟಿ ಕಾಯ್ದೆಯನ್ನು ರೂಪಿಸುವಲ್ಲಿ ಜೇಟ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಜಿಎಸ್‌ಟಿ ಕೌನ್ಸಿಲ್ಗೆ ಸಾಂವಿಧಾನಿಕ ಸಂಸ್ಥೆಯ ಸ್ಥಾನಮಾನವನ್ನೂ ನೀಡಲಾಗಿದೆ. ಇದಕ್ಕೆಲ್ಲ ಜೇಟ್ಲಿ ಅವರೇ ಕಾರಣ.
2) ಹಣದುಬ್ಬರ ವಿರುದ್ಧದ ನಿಲುವು ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಆರ್‌ಬಿಐ) ವಿತ್ತೀಯ ನೀತಿ ಸಮಿತಿಯನ್ನು (ಎಂಪಿಸಿ) ಸ್ಥಾಪಿಸಲು ಒತ್ತಾಯಿಸಿರುವುದು ಜೇಟ್ಲಿಯವರ ಮತ್ತೊಂದು ಪ್ರಮುಖ ಕ್ರಮ. ಇದರ ಪರಿಣಾಮವಾಗಿ, ಗ್ರಾಹಕರ ಹಣದುಬ್ಬರ ಆರಂಭದಲ್ಲಿ 7.72% ಕ್ಕೆ ಇಳಿಸಲಾಯಿತು, ಪ್ರಸ್ತುತ ಅದು ಶೇ 3ರಷ್ಟಕ್ಕೆ ಬಂದು ನಿಂತಿದೆ.
3) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಭಾರತೀಯ ಐದು ಸ್ಟೇಟ್ ಬ್ಯಾಂಕ್ಗಳನ್ನ ಎಸ್‌ಬಿಐನಲ್ಲಿ ವಿಲೀನಗೊಳಿಸಿದರು. ಅದೇ ಸಮಯದಲ್ಲಿ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಲಾಯಿತು. ಇದು 1969 ಮತ್ತು 1980 ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣದ ನಂತರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆಯಾಗಿದೆ.

4) ಬಜೆಟ್ ಸುಧಾರಣೆಯೂ ಅವರ ಕಾರ್ಯಸೂಚಿಯ ಒಂದು ಭಾಗವಾಗಿತ್ತು. ಯೋಜನೆ ಮತ್ತು ಯೋಜನೇತರ ವೆಚ್ಚಗಳ ನಡುವಿನ ಕೃತಕ ವ್ಯತ್ಯಾಸವನ್ನು ತೆಗೆದುಹಾಕುವುದು ಮತ್ತು ಪ್ರತ್ಯೇಕ ರೈಲ್ವೆ ಬಜೆಟ್ನ ಪ್ರಸ್ತಾಪವನ್ನು ತೆಗೆದುಹಾಕುವುದು ಇವುಗಳಲ್ಲಿ ಸೇರಿದ್ದವು. ಈ ಹಿನ್ನೆಲೆ ಬಜೆಟ್ನ ಪ್ರಸ್ತುತಿಯನ್ನು ಒಂದು ತಿಂಗಳು ನಿಲ್ಲಿಸಲಾಯಿತು, ಅನಂತರ 2017 ರ ಫೆಬ್ರವರಿ 1 ರಂದು ಈ ಹಿಂದಿನ ಎಲ್ಲ ಸಂಪ್ರದಾಯಗಳಿಗೆ ತಿಲಾಂಜಲಿ ನೀಡಿ ಬಜೆಟ್ ಮಂಡನೆ ಮಾಡಿದ್ದು ಅರುಣ್ ಅವರ ಹೆಗ್ಗಳಿಕೆಯಾಗಿದೆ.
5) ನವೆಂಬರ್ 2016 ರಲ್ಲಿ, ಬಹು ಮೌಲ್ಯದ 1000-500 ರೂಪಾಯಿಗಳ ನೋಟುಗಳನ್ನು ಡಿಮೋನಿಟೈಸ್ ಮಾಡುವುದರಲ್ಲಿ ಜೇಟ್ಲಿ ಪ್ರಮುಖ ಪಾತ್ರ ವಹಿಸಿದ್ದರು.
6) ವಿತ್ತೀಯ ಲಾಭಗಳು ಮತ್ತು ಸಬ್ಸಿಡಿಗಳ ನೇರ ವರ್ಗಾವಣೆಗೆ ಜನ ಧನ್, ಆಧಾರ್ ಮತ್ತು ಮೊಬೈಲ್ (ಜೆಮ್) ಟ್ರಿನಿಟಿಯನ್ನು ಬಳಸುವುದಕ್ಕೆ ಜೇಟ್ಲಿ ಹೆಚ್ಚಿನ ಒತ್ತು ನೀಡಿದರು. ಈ ಉಪ ಕ್ರಮದಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ಉಳಿತಾಯವಾಯಿತು.
7) ಹಣಕಾಸಿನ ಕೊರತೆಯನ್ನು 3.5% ರಷ್ಟು ನಿರ್ವಹಿಸಲು ಜೇಟ್ಲಿ ಅವರಿಂದ ಸಾಧ್ಯವಾಯಿತು. ಅದನ್ನು ಅವರು ಮಾಡಿಯೂ ತೋರಿಸಿದ್ದಾರೆ.
8) ಅವರು, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (ಡಿಬಿಟಿ) ಸರ್ಕಾರದ ಪ್ರಯೋಜನಗಳು ಹಾಗೂ ಹಣಕಾಸಿನ ನೆರವುಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಂದಾಯವಾಗು ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಂಡಿದ್ದರು. ಈ ಮೂಲಕ ತಂತ್ರಜ್ಞಾನದ ಶಕ್ತಿಯ ಲಾಭವನ್ನು ಜನರು ಪಡೆಯುವಂತೆ ಮಾಡಿದ ಶ್ರೇಯವೂ ಅವರಿಗೆ ಸಲ್ಲುತ್ತದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸುಮಾರು 1.4 ಲಕ್ಷ ಕೋಟಿ ರೂ. ಉಳಿತಾಯ ಮಾಡಲು ಕಾರಣಕರ್ತರಾಗಿದ್ದಾರೆ.