ನವದೆಹಲಿ: ನಿನ್ನೆಯಿಂದ ನನಗೆ ಭಾರತದಲ್ಲಿ ಸಿಕ್ಕಿರುವ ಸ್ವಾಗತದಿಂದ ನಾನು ಮೂಕವಿಸ್ಮಿತನಾಗಿರುವೆ. ಅದರಲ್ಲೂ ವಿಶೇಷವಾಗಿ ಮೊಟೆರಾ ಕ್ರೀಡಾಂಗಣದಲ್ಲಿ ನನಗೆ ಸಂದ ಗೌರವ ಬಹುದೊಡ್ಡದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ.
ಮೊಟೆರಾ ಕ್ರೀಡಾಂಗಣದಲ್ಲಿ ಸುಮಾರು 125 ಸಾವಿರ ಜನರು ನೆರೆದಿದ್ರು. ಮಾತನಾಡುವವಾಗ ಪ್ರತಿ ಬಾರಿ ನಾನು ಮೋದಿ ಎಂದು ಬಳಸಿದಾಗಲೆಲ್ಲ ಜನ ಚಪ್ಪಾಳೆಯ ಸುರಿಮಳೆಯನ್ನೇಗೈದರು. ಆಗ ಆ ಜನರು ನನಗಿಂತ ಹೆಚ್ಚಾಗಿ ನಿಮಗಾಗಿ ಬಂದಿದ್ದರು ಅಂತ ನನಗೆ ಅನಿಸಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ಭಾರತದ ಜನ ನಿಮ್ಮನ್ನು (ಮೋದಿ) ತುಂಬ ಪ್ರೀತಿಸುತ್ತಾರೆ ಎಂಬುದು ನನಗೆ ಅರ್ಥವಾಯ್ತು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.