ETV Bharat / bharat

ತೆಲಂಗಾಣದ ಪೊಲೀಸ್​ ಅಧಿಕಾರಿ ಬಳಿ 70 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ! - ಹೈದರಾಬಾದ್​ ಸುದ್ದಿ

ಸದ್ಯ ರಾಚಕೊಂಡ ಪೊಲೀಸ್​ ಕಮಿಷನರೇಟ್ ವಲಯದ ಮಲ್ಕಾಜ್ಗಿರಿಯಲ್ಲಿ ನರಸಿಂಹ ರೆಡ್ಡಿ ಎಸಿಪಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಬಂಧನ ಮಾಡಿರುವ ಎಸಿಬಿ ಅಧಿಕಾರಿಗಳು ನಾಂಪಲ್ಲಿ ಕ್ರಿಮಿನಲ್​ ಕೋರ್ಟ್​​​ಗೆ ಹಾಜರುಪಡಿಸಿದ್ದಾರೆ.

Yelamakuri Narasimha Reddy
Yelamakuri Narasimha Reddy
author img

By

Published : Sep 24, 2020, 4:17 PM IST

ಹೈದರಾಬಾದ್​: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿರುವ ಬೃಹತ್​ ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್​ ಆಯುಕ್ತ ಬಲೆಗೆ ಬಿದ್ದಿದ್ದು, ಅವರ ಮನೆಯಲ್ಲಿ ಶೋಧ ನಡೆಸಿದಾಗ ಬರೋಬ್ಬರಿ 70 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಪೊಲೀಸ್​ ಅಧಿಕಾರಿ ಅನಂತಪುರದಲ್ಲಿ 55 ಎಕರೆ ಕೃಷಿ ಭೂಮಿ, ಹೈದರಾಬಾದ್​ನ ಮಾಧಾಪುರ ಸೈಬರ್​ ಟವರ್ಸ್​ ಬಳಿ 1,960 ಚದರ ಅಡಿಯ ನಾಲ್ಕು ಪ್ಲಾಟ್​, ಎರಡು ಮನೆ ಹಾಗೂ ನಾಲ್ಕು ಅಂತಸ್ತಿನ ವಾಣಿಜ್ಯ ಸಂಕೀರ್ಣ ಹೊಂದಿದ್ದಾಗಿ ತಿಳಿದು ಬಂದಿದೆ.

ಸದ್ಯ ರಾಚಕೊಂಡ ಪೊಲೀಸ್​ ಕಮಿಷನರೇಟ್​​ ಮಲ್ಕಾಜ್ಗಿರಿಯಲ್ಲಿ ನರಸಿಂಹ ರೆಡ್ಡಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಬಂಧನ ಮಾಡಿರುವ ಎಸಿಬಿ ಅಧಿಕಾರಿಗಳು ನಾಂಪಲ್ಲಿ ಕ್ರಿಮಿನಲ್​ ಕೋರ್ಟ್​​​​ಗೆ ಹಾಜರುಪಡಿಸಿದ್ದಾರೆ. ನಿನ್ನೆ ವರಂಗಲ್​, ಜಂಗಾಂವ್​, ನಲ್ಗೊಂಡ, ಕರೀಂನಗರ ಜಿಲ್ಲೆ ಸೇರಿ ಸುಮಾರು 25 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗಿದೆ.

ಶೋಧ ಕಾರ್ಯದ ವೇಳೆ 15 ಲಕ್ಷ ರೂ ನಗದು, ಎರಡು ಬ್ಯಾಂಕ್​ ಲಾಕರ್​​ ಮತ್ತು ರಿಯಲ್​ ಎಸ್ಟೇಟ್​ನ ಪ್ರಮುಖ ದಾಖಲೆ ಸಿಕ್ಕಿವೆ. ಸಿಕ್ಕಿರುವ ಆಸ್ತಿಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಬರೋಬ್ಬರಿ 70 ಕೋಟಿ ರೂ ಎಂದು ತಿಳಿದು ಬಂದಿದೆ. 1991ರಲ್ಲಿ ಪೊಲೀಸ್​​ ಇಲಾಖೆ ಸೇರಿದ್ದ ನರಸಿಂಹ ರೆಡ್ಡಿ ಉಪ್ಪಲ್​​ನಲ್ಲಿ ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.