ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತೇಜ್ ಪ್ರತಾಪ್ ಯಾದವ್ ಅವರು ರಾಷ್ಟ್ರಪತಿ ಅವರಿಗೆ ಬರೆದ ಪತ್ರ ವೈರಲ್ ಆಗುತ್ತಿದೆ.
ತೇಜ್ ಪ್ರತಾಪ್ ಅವರ ಪತ್ರದಲ್ಲಿ 6 ತಪ್ಪುಗಳಿವೆ. ಜನವರಿ 25 ರಂದು ತೇಜ್ ಪ್ರತಾಪ್ ಯಾದವ್ ಅವರು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ 6 ತಪ್ಪುಗಳು ಕಂಡುಬಂದಿವೆ. ಹಿಂದಿಯಲ್ಲಿ ಬರೆದ ಈ ಪತ್ರದಲ್ಲಿ ತಪ್ಪುಗಳಿದ್ದು, ಇದೇ ವಿಷಯಕ್ಕೆ ತೇಜ್ ಪ್ರತಾಪ್ ಅವರ ಪತ್ರ ವೈರಲ್ ಆಗುತ್ತದೆ. ಗರಿಬೋ (गरीबों) ಎಂದು ಬರೆಯುವಲ್ಲಿ ಗರಿವೋ (गरीवों), ವಂಚಿತ (वंचित ) ಎಂಬಲ್ಲಿ ಬಂಚಿತ (बंचति), ಮಸೀಹಾ (मसीहा) ಎಂದು ಬರೆಯುವಲ್ಲಿ ಮಸಿಹಾ (मसिहा), ಆದರಣೀಯ (आदरणीय) ಎಂಬಲ್ಲಿ ಆಪರಣೀಯ (आपरणीय), ಲಾಲೂ (लालू) ಎಂಬಲ್ಲಿ ಲಾಲು (लालु), ಮೂಲ್ಯೊ (मूल्यों) ಎಂದು ಬರೆಯುವಲ್ಲಿ ಮುಲ್ಯೊ (मुल्यों) ಎಂದು ಬರೆಯಲಾಗಿದೆ.
ಇದನ್ನೂ ಓದಿ: ಪೊಲೀಸ್ ಅಧಿಕಾರಿಗಳ ಜೊತೆ ಅಮಿತ್ ಶಾ ಮೀಟಿಂಗ್.. ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ
-
समानता की लड़ाई को जीतकर “लड़ाका लालू” कहलाने वाले उस विचारधारा की आज़ादी के लिए पत्र लिखकर #आज़ादीपत्र मुहीम का शुरुआत किया।
— Tej Pratap Yadav (@TejYadav14) January 25, 2021 " class="align-text-top noRightClick twitterSection" data="
आप सभी को मुहीम का हिस्सा बनने के लिए आमंत्रित करता हूँ। pic.twitter.com/3fceV5gNfx
">समानता की लड़ाई को जीतकर “लड़ाका लालू” कहलाने वाले उस विचारधारा की आज़ादी के लिए पत्र लिखकर #आज़ादीपत्र मुहीम का शुरुआत किया।
— Tej Pratap Yadav (@TejYadav14) January 25, 2021
आप सभी को मुहीम का हिस्सा बनने के लिए आमंत्रित करता हूँ। pic.twitter.com/3fceV5gNfxसमानता की लड़ाई को जीतकर “लड़ाका लालू” कहलाने वाले उस विचारधारा की आज़ादी के लिए पत्र लिखकर #आज़ादीपत्र मुहीम का शुरुआत किया।
— Tej Pratap Yadav (@TejYadav14) January 25, 2021
आप सभी को मुहीम का हिस्सा बनने के लिए आमंत्रित करता हूँ। pic.twitter.com/3fceV5gNfx
ಮೇವು ಹಗರಣದಲ್ಲಿ ಬಂಧನಕ್ಕೊಳಾಗಿರುವ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅನಾರೋಗ್ಯದ ಕಾರಣ ದೆಹಲಿ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೇಜ್ ಪ್ರತಾಪ್ ಯಾದವ್ ಲಾಲೂ ಅವರ ಬಿಡುಗಡೆಗಾಗಿ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.